ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓದುಗರೆ ಅಭಿಪ್ರಾಯವನ್ನು ಕನ್ನಡದಲ್ಲಿಯೇ ಪ್ರಕಟಿಸಿ

By Prasad
|
Google Oneindia Kannada News

ಓದುಗರಿಗೆ ಮತ್ತು ಪ್ರತಿಕ್ರಿಯೆ ಪ್ರಕಟಿಸುವವರಿಗೆ ನಮಸ್ಕಾರಗಳು. ಲೇಖನಗಳನ್ನು ಓದಿ ತಮ್ಮ ಅನಿಸಿಕೆಗಳನ್ನು ವಸ್ತುನಿಷ್ಠವಾಗಿ ಮಂಡಿಸುತ್ತಿರುವುದಕ್ಕೆ ಧನ್ಯವಾದಗಳು. ಆದರೆ, ಅಭಿಪ್ರಾಯಗಳನ್ನು ಮಂಡಿಸುವ ಭರದಲ್ಲಿ ವ್ಯಕ್ತಿನಿಂದನೆ ಅಥವಾ ಯಾರಿಗಾಗಲಿ ಘಾಸಿಯಾಗುವಂತೆ ಮಂಡಿಸಬಾರದಾಗಿ ಕಳಕಳಿಯ ವಿನಂತಿ.

ಹಾಗೆಯೆ, ಸಾಧ್ಯವಾದ ಮಟ್ಟಿಗೆ ಅನಿಸಿಕೆಗಳನ್ನು ಕನ್ನಡದಲ್ಲಿಯೇ ಬರೆದು ಪ್ರಕಟಿಸಬೇಕಾಗಿ ಕೋರಿಕೆ. ಈ ಕಾರಣದಿಂದಾಗಿ, ಆಂಗ್ಲ ಭಾಷೆಯಲ್ಲಿ ಹಲವಾರು ಮೌಲ್ಯಯುತ ಅಭಿಪ್ರಾಯಗಳನ್ನು ಮಂಡಿಸಲಾಗಿದ್ದರೂ ಕನ್ನಡದಲ್ಲಿ ಬರೆದ ಕಾಮೆಂಟುಗಳನ್ನು ಮಾತ್ರ ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಇಲ್ಲಿ ಆಧಾರ್ ಕಾರ್ಡ್, ಜನಶ್ರೀಗೆ ರವಿ ಬೆಳಗೆರೆ ಮುಖ್ಯಸ್ಥರಾಗಿ ಆಯ್ಕೆಯಾಗಿರುವುದು, ಮೋದಿ ವಿರುದ್ಧ ಅನಂತಮೂರ್ತಿಗಳು ನೀಡಿರುವ ವಿವಾದಾತ್ಮಕ ಹೇಳಿಕೆ, ಅನಂತಮೂರ್ತಿ ವಿರುದ್ಧ ನಟ ಅನಂತ್ ನಾಗ್ ನೀಡಿರುವ ಹೇಳಿಕೆ, ಸಾಡೇಸಾತಿ ಸರಣಿ ಮುಂತಾದ ಲೇಖನಗಳಿಗೆ ಬರೆದಿರುವ ಆಸಕ್ತಿಕರ ಅಭಿಪ್ರಾಯಗಳನ್ನು ಆಯ್ಕೆಮಾಡಿ ಪ್ರಕಟಿಸಲಾಗಿದೆ. ಓದುಗರಿಗೆ ಮತ್ತೊಮ್ಮೆ ಧನ್ಯವಾದಗಳು.

ಆಧಾರ್ ಕಾರ್ಡ್‌ಗೆ ಹಣ ವಸೂಲಿ

ಆಧಾರ್ ಕಾರ್ಡ್‌ಗೆ ಹಣ ವಸೂಲಿ

ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕ್, ಪಾಳ್ಯ ಗ್ರಾಮದಲ್ಲಿ ಆಧಾರ್ ಕಾರ್ಡ್ ಮಾಡಿಸಲು ಫಾರಂಗೆ ರೂ. 5 ವಸೂಲಿ ಮಾಡುತ್ತಿದ್ದಾರೆ. ಈ ಅಕ್ರಮವನ್ನು ತಪ್ಪಿಸಿ ಎಂದು ಸಂಬಂಧಪಟ್ಟ ತಹಶೀಲ್ಧಾರ್ ರಲ್ಲಿ ನನ್ನ ಮನವಿ.

ಬಸವೇಶ್

ಶಿಲ್ಪಿಯ ಪೆಟ್ಟಿಗೆ ಕಲ್ಲು ಶಿಲೆಯಾದಂತೆ

ಶಿಲ್ಪಿಯ ಪೆಟ್ಟಿಗೆ ಕಲ್ಲು ಶಿಲೆಯಾದಂತೆ

ಶಿಲ್ಪಿಯ ಪೆಟ್ಟಿಗೆ ಕಲ್ಲು ಶಿಲೆಯಾದಂತೆ... ಇದು ಶಿಲ್ಪಿಯ ಭಾಗ್ಯವೋ? ಶಿಲೆಯಲ್ಲಿನ ಶಕ್ತಿಯ ಸಂಕಲ್ಪವೋ? ಆದರೆ ಶಿಲ್ಪಿಯ ಉಳಿಯ ಪೆಟ್ಟಿನ ನೋವ ಸಹಿಸಲಾರದೆ ಅವನ ಶಪಿಸತೊಡಗಿದ ಶಿಲೆಗೆ ಮೂರ್ತಿಯಾಗಿ ಬದಲಾಗಿ ಅದ್ಭುತವೆಂದು ನೋಡುಗರ ಬಾಯಲ್ಲಿ ಹೊಗಳಿಸಿಕೊಂಡಾಗ, ಪಾಪ ಪ್ರಜ್ಞೆ ಕಾಡತೊಡಗಿತಂತೆ... ಇದೆ ವಾಸ್ತವ ಸತ್ಯ...

ರಾಘವೇಂದ್ರ ನಾವಡ

ಆ ಕಷ್ಟನೂ ಒಂದು ರೀತಿ ಒಳ್ಳೇದಕ್ಕೆ

ಆ ಕಷ್ಟನೂ ಒಂದು ರೀತಿ ಒಳ್ಳೇದಕ್ಕೆ

ಖಂಡಿತ ಹೌದು ಶನಿ ಕಷ್ಟ ಕೊಡುವಾಗ ಅದನ್ನ ಎದರಿಸುವುದೇ ಕಷ್ಟ. ಆದರೆ, ಈಗ ಅನ್ನಿಸ್ತದೆ ಆ ಕಷ್ಟನೂ ಒಂದು ರೀತಿ ಒಳ್ಳೇದಕ್ಕೆ ಅಂತ. ನನ್ನದು ವೃಷಭ ರಾಶಿ.

ವಾಸುದೇವ
ಅಟ್ ಲೀಸ್ಟ್ ವಯಸ್ಸಿಗಾದ್ರೂ ಮರ್ಯಾದೆ ಬೇಡ್ವಾ

ಅಟ್ ಲೀಸ್ಟ್ ವಯಸ್ಸಿಗಾದ್ರೂ ಮರ್ಯಾದೆ ಬೇಡ್ವಾ

ಈ ಮೋದಿ ಬೆಂಬಲಿಗರದು ಸ್ವಲ್ಪ ಜಾಸ್ತಿ ಆಯಿತು. ಅನಂತಮೂರ್ತಿಯವರು ಹಿರಿಯರು, ಹೌದು ಮಣ್ಣು ತಿನ್ನೋ ಹೇಳಿಕೆ ಕೊಟ್ಟಿದಾರೆ. ಆದರೆ ಹಿಂದೂ ಹೃದಯ ಸಾಮ್ರಾಟನ ಬೆಂಬಲಿಗರು ಅಟ್ ಲೀಸ್ಟ್ ವಯಸ್ಸಿಗಾದರೂ ಬೆಲೆ ಕೊಡದೆ ಅನಂತಮೂರ್ತಿಗಿಂತ ನಾವೇನು ಕಮ್ಮಿ ಅಂತ ಕಕ್ಕ ತಿನ್ನೋರ ತರ ಆಡ್ತಿದ್ದರಲ್ಲ.. ಥೂ....

ಸುಬ್ರಮಣ್ಯ ನಾವಡ

ಕೇಜ್ರೀವಾಲ್ ಕೂಡ ಏನೂ ಕಮ್ಮಿ ಇಲ್ಲ

ಕೇಜ್ರೀವಾಲ್ ಕೂಡ ಏನೂ ಕಮ್ಮಿ ಇಲ್ಲ

ನಿಮ್ಮ ಹಣೆಬರಹ ಈಗಾಗಲೆ ಗೊತ್ತಾಗ್ತಾ ಇದೆ ಡೆಲ್ಲಿಯಲ್ಲಿ. ಓಟ್‌ಬ್ಯಾಂಕ್ ಪೊಲಿಟಿಕ್ಸ್ ಮಾಡೋದ್ರಲ್ಲಿ ಕೇಜ್ರೀವಾಲ್ ಕೂಡ ಏನೂ ಕಮ್ಮಿ ಇಲ್ಲ ಅಂತ ಗೊತ್ತಾಗಿದೆ. ಇನ್ನೂ ಒಂದು ಚುನಾವಣೆ ಎದುರಿಸಿಲ್ಲ ಆಗಲೇ ಈ ಲೆವೆಲ್ಲಿಗೆ ಆಟ ಆಡ್ತಾ ಇದೀರಾ. ಇನ್ನು ಒಂದೆರಡು ಸೀಟ್ ಗೆದ್ರಂತೂ ನಿಮ್ಮನ್ನ ಹಿಡಿಯೋವ್ರೇ ಇರಲ್ಲ. ಹಿಂದಿಯಲ್ಲಿ ಹೆಸರಿರೋ ನಿಮ್ಮ ಪಾರ್ಟಿಗೆ ದಕ್ಷಿಣ ಭಾರತದಲ್ಲಿ ಯಾವನ್ರೀ ಓಟ್ ಹಾಕ್ತಾನೆ?

ಎದ್ದೇಳು ಮಂಜುನಾಥ

ಹಿಂದೂಗಳ ದುಗುಡ ಅರ್ಥವಾಗಲಿ ಮೂರ್ತಿಗಳೆ

ಹಿಂದೂಗಳ ದುಗುಡ ಅರ್ಥವಾಗಲಿ ಮೂರ್ತಿಗಳೆ

ಅನಂತಮೂರ್ತಿಯವರೆ, "ಹಿಂದೂಗಳ ವಿಚಾರಕ್ಕೆ ಬಂದಾಗ ಇಷ್ಟು ಕಟ್ಟುನಿಟ್ಟಾಗಿ ಮಾತಾಡುವ ನಿಮ್ಮಂಥ ಬುದ್ಧಿಜೀವಿಗಳು ಇನ್ನೊಂದು ಕೋಮಿನ ವಿಚಾರ ಬಂದಾಗ ಯಾಕೆ ಸುಮ್ಮನಾಗುತ್ತೀರಿ?" ಅನ್ನುವ ಪ್ರಶ್ನೆಗೆ ನೀವು ಕೊಟ್ಟಿರುವ ಉತ್ತರಕ್ಕೆ ಏನಾದ್ರೂ ಅರ್ಥ ಇದೆಯೇ? ಜ್ಞಾನಪೀಠಿಯಿಂದ ಇಂತಹ ವಿಷಯ ಮರೆಸುವ ಉತ್ತರ ನಿರೀಕ್ಷಿಸಿರಲಿಲ್ಲ. ಮೊದಲು ಈ ಪ್ರಶ್ನೆಗೆ ನಿಮ್ಮಲ್ಲಿ ನೀವೇ ಸರಿಯಾದ ಉತ್ತರ ಕಂಡುಕೊಳ್ಳಿ. ಆಗ ಮಾತ್ರ ನಿಮಗೆ ಹಿಂದೂಗಳ ದುಗುಡ ಅರ್ಥವಾಗುತ್ತೆ. ಅಲ್ಲಿಯವರೆಗೆ ನನ್ನಂತಹವರು ನಿಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.

ಶಶಿಧರ್

ಮೂರ್ತಿಗೆ ಸರಿಯಾಗಿಯೇ ಝಾಡಿಸಿದ್ದೀರ ನಾಗ್

ಮೂರ್ತಿಗೆ ಸರಿಯಾಗಿಯೇ ಝಾಡಿಸಿದ್ದೀರ ನಾಗ್

ಅನಂತ್ ನಾಗ್ ಸರ್, ನಿಮ್ಮ ಚಿತ್ರಗಳಲ್ಲಿ ನೀವು ಎಷ್ಟು ಇಷ್ಟವಾದಿರೋ ಅದಕ್ಕಿಂತ ನೂರು ಪಟ್ಟು ಇಲ್ಲಿ ನಮಗೆ ಇಷ್ಟವಾಗಿಬಿಟ್ಟಿರಿ. ಕೇವಲ ಅನಂತಮೂರ್ತಿಯವರನ್ನು ಬೈದಿರಿ ಅಂದಷ್ಟೇ ಹೇಳುತ್ತಿಲ್ಲ. ಬಹಳಷ್ಟು ಜನಗಳು ಈಗ ತಮ್ಮ ಜನಪ್ರಿಯತೆ ಕಳೆದುಕೊಳ್ಳುವ ಭಯದಿಂದ ತಮ್ಮ ನಿಲುವುಗಳನ್ನು ಹೇಳುವುದರಲ್ಲಿ ಹಿಂದೆ ಮುಂದೆ ನೋಡುತ್ತಿದ್ದಾರೆ. ನಿಮ್ಮ ನೇರವಂತಿಕೆ ನಮಗೆ ಬಹಳ ಇಷ್ಟವಾಯಿತು. ಈ ಅನಂತಮೂರ್ತಿಯವರಿಗೆ ಸರಿಯಾಗಿಯೇ ಝಾಡಿಸಿದ್ದೀರ!

ಸಂತೋಷ್ ಕುಮಾರ್ ಎಲ್ಎಮ್

ಅನಂತು ಕಾಂಗೈ ಸೇರಬೇಕಾದ ಪರಿಸ್ಥಿತಿ

ಅನಂತು ಕಾಂಗೈ ಸೇರಬೇಕಾದ ಪರಿಸ್ಥಿತಿ

ಒಳ್ಳೆಯದಂದರೆ ಬೇಕಂತ ಅರ್ಥ, ಬೇಕೆಂದರೆ ಬೇಡವೆಂದು ಅರ್ಥ. ಅದು ಯಡಿಯೂರಪ್ಪನವರ ಗೂಡಾರ್ಥ. ಶೋಭಾ ಜೊತೆ ಚಾಮುಂಡಿ ಬೆಟ್ಟದಲ್ಲಿ ಆ ಮಾತು ಹೇಳಿದ್ದಾರೆ ಅಂದ್ರೆ ಗಟ್ಟಿಯಾದ ನಿರ್ಣಯ. ಆದರೆ ಇಲ್ಲಿ ಧನಂಜಯ ಕುಮಾರ್ ಪ್ರಪೋಜಲ್ ಕಳಿಸಿದ್ದಾರೆ ಅಂದರೆ ಅದು ಇನ್ನಷ್ಟು ಗಟ್ಟಿಯಾದ ಹಾಗೆ. ಒಟ್ಟು ಯಡ್ಡಿ ಬಿಜೆಪಿ ಸೇರುವುದು ಮತ್ತಷ್ಟು ಗಟ್ಟಿಯಾಗ್ತಿದೆ. ಇನ್ ಮುಂದೆ ಅನಂತು ಕಾಂಗೈ ಸೇರಬೇಕಾದ ಪರಿಸ್ಥಿತಿ ಬಂದೀತು. ಇಲ್ಲಾಂದ್ರೆ ಯಡ್ಡಿಯಿಂದ ಪಡೆದು ಮತ್ತೊಮ್ಮೆ ಕೆಜೆಪಿ ಕಟ್ಟಬೇಕಾದೇತು.

ಕೆಆರ್ ಗಣೇಶ್

English summary
It is our humble request to all the readers try to write the comment in Kannada. There are many tools available online which help you write in Kannada. Here, we have selected some of the interesting comments written by our readers on various subjects. Thank you readers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X