ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ನಂತರ ಆರೆಸೆಸ್ಸಿನಲ್ಲಿ ಭಾರಿ ಸ್ಥಿತ್ಯಂತರ?

By Srinath
|
Google Oneindia Kannada News

ಬೆಂಗಳೂರು, ಏಪ್ರಿಲ್ 16: ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಹೊರಬೀಳುತ್ತಿದ್ದಂತೆ ದೇಶದಲ್ಲಿ ಏನೆಲ್ಲಾ ಸ್ಥಿತ್ಯಂತರಗಳು ಆಗಲಿವೆಯೋ!? ಶಿಸ್ತಿನ ಸಂಘಟನೆ ಆರೆಸೆಸ್ಸಿನಲ್ಲಂತೂ ಅದಾಗಲೇ ಕದಲಿಕೆಗಳು ಗೋಚರವಾಗುತ್ತಿವೆ.

ಹಾಲಿ ಚುನಾವಣೆ ಮುಗಿಯುತ್ತಿದ್ದಂತೆ ಆರೆಸ್ಸೆಸ್ ಸಂಘಟನೆಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಭಾರಿ ಸ್ಥಿತ್ಯಂತರಗಳು ನಡೆಯಲಿವೆ. ಮುಖ್ಯವಾಗಿ ಸಂಘಟನೆ ಮತ್ತು ಬಿಜೆಪಿ ಪಕ್ಷದ ನಡುವೆ ಹೆಚ್ಚು ಸಮನ್ವಯ ಕಾಯ್ದುಕೊಳ್ಳಲು ಈ ಕ್ರಮಕ್ಕೆ ಮುಂದಾಗಿದೆ ಎಂದು ಆರೆಸ್ಸೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮಿಸುತ್ತಿರುವ ಆರೆಸ್ಸೆಸ್, ಚುನಾವಣೆ ಪ್ರಚಾರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವಲ್ಲಿ ಸಂಘವು ನಿರ್ಣಾಯಕ ಪಾತ್ರವಹಿಸಿದೆ. ಚುನಾವಣೆ ಮುಗಿದು ಫಲಿತಾಂಶ ಏನೇ ಆಗಿರಲಿ ಆರೆಸ್ಸೆಸ್ ಹಲವು ಬದಲಾವಣೆ ಮಾಡುವ ಮೂಲಕ ಬಿಜೆಪಿಯೆನ್ನು ಇನ್ನಷ್ಟು ಸದೃಢಗೊಳಿಸಲು ನಿರ್ಧರಿಸಿದೆ.

rss-reshuffle-dattatreya-hosabale-may-take-suresh-soni-place
2004ರಿಂದಲೂ ಆರೆಸ್ಸೆಸ್ ಮತ್ತು ಬಿಜೆಪಿ ನಡುವೆ ಸುರೇಶ್ ಸೋನಿ ಅವರು ಸಮನ್ವಯಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಡ್ವಾಣಿ ಮತ್ತು ಬೆಂಬಲಿಗರ ವಿರೋಧದ ನಡುವೆಯೂ ನರೇಂದ್ರ ಮೋದಿಯನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವಲ್ಲಿ ಸುರೇಶ್ ಸೋನಿ ಪಟ್ಟುಹಿಡಿದಿದ್ದರು. ಇದರಿಂದ ಅಡ್ವಾಣಿ ಮತ್ತು ಬೆಂಬಲಿಗರು ಮುನಿಸಿಕೊಂಡಿದ್ದರು ಎನ್ನಲಾಗಿದೆ.

ಇದರ ಫಲಶ್ರುತಿಯಾಗಿ ಸೋನಿ ಅವರನ್ನು ಬದಲಾಯಿಸಿ, ಅವರ ಸ್ಥಾನಕ್ಕೆ ದತ್ತಾತ್ರೇಯ ಹೊಸಬಾಳೆ ಅಥವಾ ಸುರೇಶ್ ಭಯ್ಯಾಜಿ ಜೋಷಿ ಅವರನ್ನು ಸಂಚಾಲಕರಾಗಿ ನೇಮಿಸಲು ಆರೆಸ್ಸೆಸ್ ಉದ್ದೇಶಿಸಿದೆ. ಏತನ್ಮಧ್ಯೆ, ಸುರೇಶ್ ಸೋನಿ ಅವರು ಬಿಜೆಪಿಯಲ್ಲಿ ಸಕ್ರಿಯವಾಗಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ಹೇಳಿವೆ.

ಎಬಿವಿಪಿಯ ಮಾಜಿ ಸಂಘಟನಾ ಕಾರ್ಯದರ್ಶಿ, ಹೊಂಗಸಂದ್ರ ವೆಂಕಟರಾಮಯ್ಯ ಶೇಷಾದ್ರಿ ಅವರ ಅನುಯಾಯಿ ದತ್ತಾತ್ರೇಯ ಹೊಸಬಾಳೆ ಅವರು ಸೋನಿ ಜಾಗಕ್ಕೆ ನೇಮಕವಾಗುವುದು ಬಹುತೇಕ ಖಚಿತವಾಗಿದೆ. ದತ್ತಾತ್ರೇಯ ಅವರು ಮೋದಿ ಪ್ರತಿಪಾದಕರು ಎಂಬುದು ಗಮನಾರ್ಹ. ಅನೇಕ ಎಬಿವಿಪಿ ನಾಯಕರು ಬಿಜೆಪಿಯಲ್ಲಿ ಉನ್ನತ ಸ್ಥಾನಗಳನ್ನು ತಲುಪಿದ್ದಾರೆ. ಅನಂತಕುಮಾರ್, ನಿತಿನ್ ಗಡ್ಕರಿ ಅವರಲ್ಲಿ ಪ್ರಮುಖರು.

ಆದರೆ ಈ ಸಂಭಾವ್ಯ ಬೆಳವಣಿಗೆಗಳ ಬಗ್ಗೆ ಗಮನ ಸೆಳೆದಾಗ ಆರೆಸ್ಸೆಸ್ ಮುಖಂಡರಾದ ರಾಮ್ ಮಾಧವ್ ಅವರು ಅಂಥದ್ದೇನೂ ಇಲ್ಲ. ಇದೆಲ್ಲಾ ಗಾಳಿಸುದ್ದಿಯಷ್ಟೇ. ಚುನಾವಣೇ ನಂತರವೂ ಸಂಘಟನೆಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

English summary
Irrespective of the results in Lok Sabha Election 2014 there will be reshuffle in RSS. Dattatreya Hosabale may take Suresh Soni place after the polls. RSS strongman Suresh Soni, who was instrumental in making Modi the BJP's prime ministerial candidate despite stiff opposition from Advani and his camp, will go back to the parent organisation. In his place, Dattatreya Hosabale or Suresh Bhaiyyaji Joshi will be the new RSS point man in the BJP, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X