ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಪ್ರಮಾಣ ವಚನಕ್ಕೆ ಎಷ್ಟು ಖರ್ಚಾಯ್ತು?

By Mahesh
|
Google Oneindia Kannada News

ನವದೆಹಲಿ, ಜು.21: ಇತ್ತೀಚೆಗಷ್ಟೇ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಐಷಾರಾಮಿ ಬಂಗಲೆಯ ವಿವರಗಳನ್ನು ಬಯಲಿಗೆಳೆದಿದ್ದ ಆರ್ ಟಿಐ ಕಾರ್ಯಕರ್ತ ಈಗ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭ ಖರ್ಚು ವೆಚ್ಚದ ಲೆಕ್ಕ ಹೊರಹಾಕಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಖರ್ಚು ಮಾಡಿದ ಒಟ್ಟು ಹಣ ಈಗ ಚರ್ಚೆಗೆ ಗ್ರಾಸವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಖರ್ಚಾದ ಒಟ್ಟು ಹಣ 17 ಲಕ್ಷದ 60 ಸಾವಿರ ರು ಎಂದು ಆರ್ ಟಿಐ ಕಾರ್ಯಕರ್ತ ರಮೇಶ್‌ವರ್ಮಾ ಹೇಳಿದ್ದಾರೆ.

Rs 17.60 lakh spent on Modi's oath-taking ceremony

ರಾಷ್ಟ್ರಪತಿ ಭವನಕ್ಕೆ ಹಾಕಲಾಗಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿ ಅನ್ವಯ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಕಾರ್ಯದರ್ಶಿ ಪ್ರಧಾನಿ ಪ್ರಮಾಣವಚನಕ್ಕೆ ತಗಲಿರುವ ವೆಚ್ಚವನ್ನು ಬಹಿರಂಗಪಡಿಸಿದ್ದಾರೆ.

ಮೋದಿ ಪ್ರಮಾಣವಚನಕ್ಕೆ ದೇಶ-ವಿದೇಶಗಳಿಂದ 4017 ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಔತಣಕೂಟ, ಚಹಾಕೂಟ, ಹೊಟೇಲ್‌ನಲ್ಲಿ ವಾಸ್ತವ್ಯ, ವಿಮಾನದ ಖರ್ಚು-ವೆಚ್ಚ, ಇದರಲ್ಲಿ ಸೇರ್ಪಡೆಯಾಗಿವೆ. ಮಾಹಿತಿ ಹಕ್ಕು ಹೋರಾಟಗಾರ ರಮೇಶ್‌ ವರ್ಮಾ ಹೇಳಿರುವಂತೆ ನಾವು ಎಲ್ಲಾ ಖರ್ಚು-ವೆಚ್ಚಗಳನ್ನು ಲೆಕ್ಕ ಹಾಕಿಲ್ಲ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರಪತಿ ಭವನ ಮಾಡುವ ಖರ್ಚು-ವೆಚ್ಚಗಳನ್ನು ಕೇಂದ್ರ ಸರ್ಕಾರವೇ ಬಜೆಟ್‌ನಲ್ಲಿ ಭರಿಸಲಿದೆ. ಮಾಹಿತಿ ಹಕ್ಕುದಾರರು ಒಬ್ಬೊಬ್ಬರಿಗೆ ತಗುಲಿರುವ ವೆಚ್ಚದ ವಿವರವನ್ನು ನೀಡಬೇಕೆಂದು ಕೋರಿದ್ದರು. ಆದರೆ ಇದಕ್ಕೆ ಹೆಚ್ಚಿನ ಕಾಲಾವಕಾಶ ಬೇಕಾದ್ದರಿಂದ ಮಾಹಿತಿ ಲಭ್ಯವಾಗಿಲ್ಲ ಎಂದು ರಾಷ್ಟ್ರಪತಿ ಭವನ ತಿಳಿಸಿದೆ. ಮೇ 26ರಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಸಾರ್ಕ್ ಸದಸ್ಯ ರಾಷ್ಟ್ರಗಳ ಅಧ್ಯಕ್ಷರು, ಪ್ರಧಾನ ಮಂತ್ರಿಗಳು, ರಾಯಭಾರಿಗಳು ಸೇರಿದಂತೆ ಅನೇಕರನ್ನು ಆಹ್ವಾನಿಸಿದ್ದರು. (ಪಿಟಿಐ)

English summary
An expenditure of at least Rs. 17.60 lakh was incurred on the oath-taking ceremony of Prime Minister Narendra Modi in the forecourt of Rashtrapati Bhavan, an RTI reply has found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X