ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ ಡಿಟಿವಿ ಚುನಾವಣಾ ಸಮೀಕ್ಷೆ: ಯುಪಿಎಗೆ 111

By Srinath
|
Google Oneindia Kannada News

ನವದೆಹಲಿ, ಏಪ್ರಿಲ್ 15: ಇನ್ನೇನು ಚುನಾವಣೆ ಬಂದೇ ಬಿಟ್ಟಿದೆ. ನಾಳೆ ಅಲ್ಲ ನಾಳಿದ್ದೇ ಮತದಾನ! ಮತದಾರ ಸಹ ತನ್ನದೇ ಆದ ಲೆಕ್ಕಾಚಾರಗಳೊಂದಿಗೆ ಮತದಾನಕ್ಕೆ ಸಜ್ಜಾಗಿದ್ದಾನೆ. ಇನ್ನು ಮತ ಹಾಕುವುದಷ್ಟೇ ಬಾಕಿ. ಹಾಗಿರುವಾಗ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕೊನೆಯ ಚುನಾವಣಾ ಸಮೀಕ್ಷೆಯೊಂದು ಹೊರಬಿದ್ದಿದೆ.

ಇದು ದಿಕ್ಸೂಚಿಯಾ? ಮತದಾರನನ್ನು ದಿಕ್ಕು ತಪ್ಪಿಸುತ್ತದಾ? ಅಥವಾ ಮತದಾರನನ್ನು ಸರಿ ದಿಕ್ಕಿಗೆ ಗೈಡ್ ಮಾಡುತ್ತದಾ? ನಿರ್ಣಾಯಕವಾ? ಅದು ಮತದಾರನ ವಿವೇಚನೆಗೆ ಬಿಟ್ಟ ವಿಷಯ.

ಚುನಾವಣೆ ಘೋಷಣೆಗೂ ಮುನ್ನಾ ದಿನಗಳಿಂದಲೂ ಒಪೀನಿಯನ್ ಪೋಲ್ ಗಳನ್ನು ನಡೆಸುತ್ತಾ ಬಂದಿರುವ ಅನುಭವಿ NDTV ಬಹುಶಃ ಅಂತಿಮ ಕಂತಿನ ಸಮೀಕ್ಷೆಯನ್ನು ಹೊರಹಾಕಿದೆ. ಅದರ ಪ್ರಕಾರ ಆಡಳಿತಾರೂಢ ಕಾಂಗ್ರೆಸ್ಸಿಗೆ ಭಾರಿ ಮುಖಭಂಗವಾಗಿದ್ದು, ಬಿಜೆಪಿ ಸಾರಥ್ಯದ ಎನ್ ಡಿಎ ಮೈತ್ರಿಕೂಟವು ನ ಭೂತೋ ಎಂಬಂತೆ 275 ಸ್ಥಾನಗಳನ್ನು ತನ್ನ ಮಡಿಲಲ್ಲಿ ಹಾಕಿಕೊಂಡಿದೆ.

ಸರಕಾರ ರಚನಗೆ ಇಷ್ಟು ಸ್ಥಾನ ಸಾಕು. ಈ ಸಮೀಕ್ಷೆಗೆ ಅನುಗುಣವಾಗಿ ಮೇ 16ರಂದಿನ ಅಧಿಕೃತ ಫಲಿತಾಂಶವೂ ಇದೇ ರೀತಿಯದ್ದಾಗಿದ್ದರೆ ಅದನ್ನು ರಾಜಕೀಯ ಗೆಲುವಿಗಿಂತ ಮತದಾರನ ಗೆಲುವು ಎಂದು ಸಂಭ್ರಮಿಸಬಹುದು.

ಏಕೆಂದರೆ ಬಿಜೆಪಿಯೇ ಅಂತಲ್ಲ ಕಿಚಡಿ ಸರಕಾರಕ್ಕೆ ಅವಕಾಶವಿಲ್ಲದಂತೆ ಯಾವುದೋ ಒಂದು ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂತಲ್ಲಾ ಎಂಬ ಸಮಾಧಾನ ತರಲಿದೆ. ಆದರೆ ಮತದಾನಕ್ಕೆ ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಇನ್ನೂ 5 ಹಂತದ ಚುನಾವಣೆಗಳು ನಡೆಯಬೇಕಿವೆ. ಅಷ್ಟರಲ್ಲಿ ಏನು ಬೇಕಾದರೂ ಆಗಬಹುದು. ಸಮೀಕ್ಷೆಯತ್ತ ಒಂದು ನೋಟ ಇಲ್ಲಿದೆ.

ಉತ್ತರಪ್ರದೇಶದಲ್ಲಿ ಅಮಿತ್ ಷಾ ಮೋಡಿ?

ಉತ್ತರಪ್ರದೇಶದಲ್ಲಿ ಅಮಿತ್ ಷಾ ಮೋಡಿ?

NDA ಈ ಪಾಟಿ ಅಭೂತಪೂರ್ವ ಜಯಸಾಧಿಸಲು ಉತ್ತರಪ್ರದೇಶ ಬಿಜೆಪಿಗೆ ಹೆಬ್ಬಾಗಿಲು ತೆರೆದಿರುವುದೇ ಕಾರಣವಾಗಿದೆ. ಅಲ್ಲಿ ಬಿಜೆಪಿ ಅರ್ಧ ಶತಕ ಬಾರಿಸಲಿದೆ. ಇದು ಮೋದಿ ಬಲಗೈ ಬಂಟ ಅಮಿತ್ ಷಾ ಕರಾಮತ್ತಾ? ಅದು ಸರಿ, ಅವರೆಲ್ಲಿ ಆನೆ ಬಲದ ಮಾಯಾವತಿ?

ಕೆಲ ರಾಜ್ಯಗಳಲ್ಲಿ ಬಿಜೆಪಿಗೆ ಭಾರಿ ಯಶಸ್ಸು

ಕೆಲ ರಾಜ್ಯಗಳಲ್ಲಿ ಬಿಜೆಪಿಗೆ ಭಾರಿ ಯಶಸ್ಸು

ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಾರಥ್ಯದಲ್ಲಿ ಬಿಜೆಪಿಗೆ 226 ಸ್ಥಾನ ದಕ್ಕಲಿದೆಯಂತೆ. ಇದು ಭಾರತೀಯಜನತಾಪಕ್ಷದ ಹಿಂದೆಂದಿಗಿಂತ ಭರ್ಜರಿ ಪ್ರದರ್ಶನವಾಗಿದೆ. ಅಂದಹಾಗೆ ಬಿಜೆಪಿ 1984ರಲ್ಲಿ ಕೇವಲ 2 ಲೋಕಸಭಾ ಸ್ಥಾನಗಳನ್ನು ಹೊಂದಿತ್ತು.
ಆಂಧ್ರದ ತೆಲುಗು ದೇಶಂ ಪಕ್ಷದಂತಹ ಕೆಲ ಪಕ್ಷಗಳು ಮೈತ್ರಿಗೆ ಲೇಟ್ ಎಂಟ್ರಿ ಕೊಟ್ಟ ಬಳಿಕ, ಚುನಾವಣೆಯ ಕೊನೆಯ ಚರಣದಲ್ಲಿ ಬಿಜೆಪಿ ಭಾಗ್ಯದ ಬಾಗಿಲು ತೆರೆದಿದೆ. ಅನಿರೀಕ್ಷಿತವಾಗಿ ಮತ್ತು ಆಶ್ಚರ್ಯಕರವಾಗಿ ಕೆಲ ರಾಜ್ಯಗಳಲ್ಲಿ ಬಿಜೆಪಿ ಭಾರಿ ಯಶಸ್ಸು ಗಳಿಸಿದೆ ಎಂದು ಎನ್ ಡಿಟಿವಿ ಸಮೀಕ್ಷೆ ಹೇಳಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೇ ಹೆಚ್ಚು ಲಾಭ

ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೇ ಹೆಚ್ಚು ಲಾಭ

ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ಸಿಗೇ ಹೆಚ್ಚು ಲಾಭ. ಅದು 14 ಸ್ಥಾನಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿದೆ. ಕಳೆದ ಚುನಾವಣೆಯಲ್ಲಿದ್ದ 8 ಸ್ಥಾನಕ್ಕಿಂತ ಹೆಚ್ಚು. ಅದೇ ಬಿಜೆಪಿ 7 ಸ್ಥಾನಗಳನ್ನು ಕಳೆದುಕೊಳ್ಳಲಿದ್ದು, ಒಂದು ಡಜನ್ ಸೀಟುಗಳನ್ನು ಗೆಲ್ಲಲಷ್ಟೇ ಶಕ್ತ್ಯವಾಗಲಿದೆ. ಇನ್ನು ಜೆಡಿಎಸ್ 1 ಸ್ಥಾನ ಕಳೆದುಕೊಂಡು 2 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.

ಯುಪಿಎ ಮೈತ್ರಿಗೆ 111 ಸ್ಥಾನ ಸಿಗಲಿದೆ

ಯುಪಿಎ ಮೈತ್ರಿಗೆ 111 ಸ್ಥಾನ ಸಿಗಲಿದೆ

ಆದರೆ ಅತ್ತ ರಾಷ್ಟ್ರೀಯ ಸ್ತರದಲ್ಲಿ ಬಿಜೆಪಿಯ ಪ್ರಮುಖ ಎದುರಾಳಿ 10 ವರ್ಷ ಕಾಲ ನಿರಂತರವಾಗಿ ಆಡಳಿತದ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಚರಿತ್ರೆಯಲ್ಲೇ ಮೊದಲ ಬಾರಿಗೆ ಕಳಪೆ ಪ್ರದರ್ಶನ ನೀಡಲಿದೆ. ಕಾಂಗ್ರೆಸ್ ಪಕ್ಷವು ಎಂದಿಗೂ 100ಕ್ಕಿಂತ ಕಡಿಮೆ ಸ್ಥಾನ ಗಳಿಸಿದ್ದಿಲ್ಲ. ಆದರೆ ಈ ಬಾರಿ ಏದುಸಿರು ಬಿಡುತ್ತಾ 92 ಸ್ಥಾನ ಗೆಲ್ಲಲಿದೆ. ಅದಕ್ಕಿಂತ ಹೀನಾಯವೆಂದರೆ ಯುಪಿಎ ಮೈತ್ರಿಗೆ 111 ಸ್ಥಾನ ಸಿಗಲಿದೆ. ಅಂದಹಾಗೆ 1999ರ ಚುನಾವಣೆಯಲ್ಲಿ 114ಕ್ಕೆ ತೃಪ್ತಿಪಟ್ಟಿತ್ತು.

NDTV ಒಪೀನಿಯನ್ ಪೋಲ್: ಬಿಜೆಪಿ ಸುಧಾರಣೆ

NDTV ಒಪೀನಿಯನ್ ಪೋಲ್: ಬಿಜೆಪಿ ಸುಧಾರಣೆ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಹೆಚ್ಚು ಹೆಚ್ಚು ಲಾಭ ಮಾಡಿಕೊಳ್ಳುತ್ತಿದೆ. NDTV ತನ್ನ ಫೆಬ್ರವರಿ ಒಪೀನಿಯನ್ ಪೋಲ್ ನಲ್ಲಿ ಬಿಜೆಪಿಗೆ 196 ಎಂದೂ, ಎನ್ ಡಿಎ 230 ಸ್ಥಾನಗೆಲ್ಲಲಿವೆ ಎಂದು ಹೇಳಿತ್ತು. ಮಾರ್ಚರ ತಿಂಗಳ ವೇಳೆಗೆ ಪರಿಸ್ಥಿತಿ ಮತ್ತಷ್ಟು ಸುಧಾರಿಸಿ BJPಗೆ 214 ಎಂದೂ, NDAಗೆ 259 ಎಂದೂ ಸಾರಿತ್ತು. ಅದೀಗ 226- 275ಕ್ಕೆ ಬಂದು ನಿಂತಿದೆ.

ಜಯ ಪ್ಲಸ್ ಮಮತಾ ದೀದಿಯತ್ತ ಬಿಜೆಪಿ ಹಸ್ತ

ಜಯ ಪ್ಲಸ್ ಮಮತಾ ದೀದಿಯತ್ತ ಬಿಜೆಪಿ ಹಸ್ತ

ಅಕಸ್ಮಾತ್ NDA ಈ ಅಂದಾಜಿತ ಸಾಧನೆ ಮಾಡಲಿಲ್ಲಾಂದ್ರೆ ತಮಿಳುನಾಡಿನಲ್ಲಿ ಮೋದಿಯ ಗುಡ್ ಓಲ್ಡ್ ಫ್ರೆಂಡ್ ಜಯಲಲಿತಾ ಅಥವಾ ಪಶ್ಚಿಮ ಬಂಗಾಲದಲ್ಲಿ 42 ಸ್ಥಾನ ಬಾಚಲಿರುವ ಮಮತಾ ದೀದಿಯತ್ತ ಬಿಜೆಪಿ ಹಸ್ತ ಚಾಚಬೇಕಾಗುತ್ತದೆ.

ಬಿಹಾರ, ಮಹಾರಾಷ್ಟ್ರ, ಉ.ಪ್ರದೇಶದಲ್ಲಿ ಬಿಜೆಪಿ ಮೈತ್ರಿಯದ್ದೇ

ಬಿಹಾರ, ಮಹಾರಾಷ್ಟ್ರ, ಉ.ಪ್ರದೇಶದಲ್ಲಿ ಬಿಜೆಪಿ ಮೈತ್ರಿಯದ್ದೇ

NDTV ಮತ್ತು CNN IBN ಕಳೆದೆರಡು ಸಮೀಕ್ಷೆಗಳಲ್ಲಿ ಬಿಜೆಪಿಗೇ ಗೆಲುವು ಅನ್ನುತ್ತಿವೆ. ಗಮನಾರ್ಹವೆಂದರೆ ಬಿಹಾರದಲ್ಲಿ 40ರಲ್ಲಿ ಬಿಜೆಪಿ ಮೈತ್ರಿಗೆ 24 ದಕ್ಕಲಿವೆ. ಹಾಗೆಯೇ ಮಹಾರಾಷ್ಟ್ರದಲ್ಲಿ 48ರಲ್ಲಿ 37 ಬಿಜೆಪಿ ಮೈತ್ರಿಯ ಪಾಲಾಗಲಿದೆ. ಉತ್ತರಪ್ರದೇಶದಲ್ಲಿ 80 ಪೈಕಿ 51 ಸ್ಥಾನ ಬಿಜೆಪಿಗೇ ಅನ್ನುತ್ತಿದೆ NDTV.

ಕೈ ಕೈ ಹಿಸುಕಿಕೊಂಡ ಅರವಿಂದ್ ಕೇಜ್ರಿವಾಲ್

ಕೈ ಕೈ ಹಿಸುಕಿಕೊಂಡ ಅರವಿಂದ್ ಕೇಜ್ರಿವಾಲ್

ದಿಲ್ಲಿಯಲ್ಲಿ ಏಪ್ರಿಲ್ 10ರಂದೇ ಮತದಾನ ಮುಗಿದಿದೆ. ಅರವಿಂದ್ ಕೇಜ್ರಿವಾಲ್ ಸಾರಥ್ಯದ ಎಎಪಿ ತನ್ನ ಹವಾ ಕಳೆದುಕೊಂಡಿದೆ. ಆತುರಕ್ಕೆ ಬಿದ್ದು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟೆ ಎಂದು ಕೇಜ್ರಿವಾಲ್ ಕಳೆದ ವಾರ ಕೈ ಕೈ ಹಿಸುಕಿಕೊಂಡಿದ್ದರು. 7 ರಲ್ಲಿ 6 ಬಿಜೆಪಿಗೆ ದಕ್ಕಲಿದೆ. ಉಳಿದದ್ದೊಂದಷ್ಟೆ ಆಮ್ ಆದ್ಮಿಗೆ. ಅದೇ 2009ರಲ್ಲಿ ಎಲ್ಲ 7 ಸ್ಥಾನಗಳನ್ನೂ ಬಾಚಿದ್ದ ಕಾಂಗ್ರೆಸಿಗೆ ಶೂನ್ಯ ಸಂಪಾದನೆ.

ಇನ್ನು ಬಿಹಾರದಲ್ಲಿ ನಿತೀಶ್ ಕುಮಾರ್ ಗೆ ಭಾರಿ ದಂಡ

ಇನ್ನು ಬಿಹಾರದಲ್ಲಿ ನಿತೀಶ್ ಕುಮಾರ್ ಗೆ ಭಾರಿ ದಂಡ

ಬಿಜೆಪಿಯಿಂದ ದೂರವಾಗಿದ್ದಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾರಿ ದಂಡ ತೆರಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ನಿತೀಶ್ ರಾಜ್ಯದಲ್ಲಿ 40 ಸಂಸದೀಯ ಸ್ಥಾನಗಳ ಪೈಕಿ ಬಿಜೆಪಿ ಮೈತ್ರಿ 24 ಸ್ಥಾನಗಳನ್ನು ಹಂಚಿಕೊಳ್ಳಲಿವೆ. ಅದೇ 2009ರಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು 20 ಸ್ಥಾನ ಗೆದ್ದಿತ್ತು. ಈ ಬಾರಿ 16 ಸ್ಥಾನ ಕಳೆದುಕೊಂಡು 4ಕ್ಕೆ ಕುಸಿಯಲಿದೆ. ಲಾಲೂ ಮತ್ತು ಕಾಂಗ್ರೆಸ್ ಮೈತ್ರಿ 12 ಸ್ಥಾನ ಗೆಲ್ಲುವ ಅಂದಾಜಿದೆ.

English summary
Lok Sabha Election 2014: NDTV latest poll survey BJP NDA to reach 275 seats. NDTV's latest opinion poll shows the BJP and its allies collecting 275 seats, three more than needed to form the government. The BJP, led by prime ministerial candidate Narendra Modi, gets 226 seats, the party's strongest performance ever and a very long way from the two it had won in 1984.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X