ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈದಿಗಳಿಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಾಧ್ಯತೆ

By Srinath
|
Google Oneindia Kannada News

Bangalore Parappana Agrahara central jail prisoners may be released on Aug 15
ಬೆಂಗಳೂರು, ಮೇ 24: ಅಕ್ಷರಶಃ ಆರೇಳು ವರ್ಷಗಳಿಂದ ಜೈಲಿನಲ್ಲಿ ಸಜಾಬಂಧಿಗಳಾಗಿ ನರಕಯಾತನೆ ಅನುಭವಿಸುತ್ತಿದ್ದ ರಾಜ್ಯದ ನಾನಾ ಭಾಗಗಳ ಕೆಲ ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲು ಹಾಲಿ ಸರಕಾರ ಮುಂದಾಗಿದೆ. ಈ ವಿಷಯವಾಗಿ ಮುಂದೆ ಯಾವುದೇ ತಕರಾರು ಬಾರದಿದ್ದರೆ ಈ ಬಾರಿಯ ಸ್ವಾತಂತ್ರ್ಯದಿನದಂದು ಬಿಡುಗಡೆಯಾಗಲಿದ್ದಾರೆ.

ಗೃಹ ಸಚಿವ ಕೆಜೆ ಜಾರ್ಜ್‌ ಕೈದಿಗಳಿಗೆ ಈ ಬಿಡುಗಡೆಯ ಭಾಗ್ಯ ಕಲ್ಪಿಸುವ ಭರವಸೆ ನೀಡಲಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳು ಮೂರು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಶುಕ್ರವಾರ ಹಿಂಪಡೆದರು.

ನಾನಾ ಬೇಡಿಕೆಗಳನ್ನು ಮುಂದಿಟ್ಟು ಜೈಲಿನಲ್ಲಿರುವ ಮೂರು ಬ್ಯಾರಕ್‌ ಗಳ 600 ಕೈದಿಗಳು ಬುಧವಾರದಿಂದ ಉಪವಾಸ ಪ್ರತಿಭಟನೆಯಲ್ಲಿ ತೊಡಗಿದ್ದರು. ಈ ವಿಷಯ ಗೃಹ ಸಚಿವ ಜಾರ್ಜ್‌ ಅವರ ಗಮನಕ್ಕೆ ಬಂದ ಬಳಿಕ ಶುಕ್ರವಾರ ಬೆಳಿಗ್ಗೆ ಅವರು ಕಾರಾಗೃಹಕ್ಕೆ ಭೇಟಿ ನೀಡಿ ಕೈದಿಗಳ ಸಮಸ್ಯೆಗಳನ್ನು ಆಲಿಸಿದರು.

'ಸರಿಯಾದ ಮಾರ್ಗಸೂಚಿಗಳಿಲ್ಲದೆ ಅನೇಕ ಕೈದಿಗಳು 14 ವರ್ಷಗಳಿಂದಲೂ ಸಜೆ ಅನುಭವಿಸುತ್ತಿದ್ದಾರೆ. ಅಂತಹ ಸಜಾ ಬಂಧಿಗಳ ವಿವರ ನೀಡುವಂತೆ ಗೃಹ ಸಚಿವ ಕೆಜೆ ಜಾರ್ಜ್‌ ಸೂಚಿಸಿದ್ದಾರೆ. ಹೀಗಾಗಿ ಎಡಿಜಿಪಿ ನೇತೃತ್ವದ ತಂಡ ಅಂತಹ ಕೈದಿಗಳ ಹೆಸರು, ವಿವರ ಹಾಗೂ ಅವರ ನಡತೆಯನ್ನೊಳಗೊಂಡ ಪಟ್ಟಿಯನ್ನು ಸಿದ್ಧಪಡಿಸಲಿದೆ. ಉತ್ತಮ ನಡತೆಯುಳ್ಳ ಕೈದಿಗಳು ಈ ಬಾರಿ ಆಗಸ್ಟ್ 15ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ' ಗೃಹ ಸಚಿವ ಕೆಜೆ ಜಾರ್ಜ್‌ ಸಮ್ಮುಖದಲ್ಲಿ ರಾಜ್ಯ ಕಾರಾಗೃಹಗಳ ಇಲಾಖೆ ಹೆಚ್ಚುವರಿ ಪೊಲೀಸ್‌ ಮಹಾನಿರೀಕ್ಷಕ ವಿಎಸ್ ರಾಜ ತಿಳಿಸಿದ್ದಾರೆ.

'ಜೈಲಿನ ಹಿರಿಯ ಅಧಿಕಾರಿಗಳು ಕೈದಿಗಳ ಮನವೊಲಿಕೆಗೆ ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಗೃಹ ಸಚಿವರೇ ಸ್ಥಳಕ್ಕೆ ಬರಬೇಕು ಎಂದು ಅವರು ಪಟ್ಟು ಹಿಡಿದಿದ್ದರು. ಈ ಕಾರಣದಿಂದ ಸಚಿವರು ಸ್ಥಳಕ್ಕೆ ಭೇಟಿ ನೀಡಿ, ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು' ಎಂದು ವಿಎಸ್ ರಾಜ ತಿಳಿಸಿದ್ದಾರೆ.

'ಸೈಕೊ ಶಂಕರ್‌ ಜೈಲಿನಿಂದ ತಪ್ಪಿಸಿಕೊಂಡ ನಂತರ ಕಾರಾಗೃಹದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹಾಗಾಗಿ ಕೈದಿಗಳು ಮನೆಯಿಂದ ಊಟ ತರಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಆದರೆ, ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಚಾರಣಾಧೀನ ಕೈದಿಗಳು ಮನೆ ಊಟ ತಿನ್ನಲು ಅವಕಾಶ ಮಾಡಿಕೊಡಿ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದರು. ಅದಕ್ಕೂ ಅವಕಾಶ ಮಾಡಿಕೊಡಲಾಗಿದೆ' ಅವರು ತಿಳಿಸಿದ್ದಾರೆ.

'ಕೈದಿಗಳನ್ನು ನೋಡಲು ಅವರ ಕುಟುಂಬ ಸದಸ್ಯರು ದೂರದ ಊರುಗಳಿಂದ ಬರುತ್ತಿರುತ್ತಾರೆ. ಈ ವೇಳೆ ಆಸೆಯಿಂದ ಊಟವನ್ನೂ ಹೊತ್ತು ತಂದಿರುತ್ತಾರೆ. ಅದನ್ನು ಒಳಗೆ ಕೊಂಡೊಯ್ಯಲು ಅವಕಾಶ ನೀಡದೆ ವಾಪಸ್‌ ಕಳುಹಿಸಿದರೆ ಅವರ ಮನಸಿಗೆ ನೋವುಂಟಾಗುತ್ತದೆ. ಹಾಗಾಗಿ ಮಾನವೀಯತೆ ಆಧಾರದಲ್ಲಿ ಮನೆ ಊಟಕ್ಕೆ ಅವಕಾಶ ನೀಡಲಾಗಿದೆ. ಅದೇ ರೀತಿ ಭದ್ರತೆ ಹೆಚ್ಚಸುವ ಉದ್ದೇಶದಿಂದ ಜೈಲಿನ ಪ್ರವೇಶ ದ್ವಾರದಲ್ಲಿ ಹೊಸ ಸ್ಕ್ಯಾನರ್‌ ಉಪಕರಣಗಳನ್ನು ಇತ್ತೀಚೆಗೆ ಅಳವಡಿಸಲಾಗಿದೆ' ಎಂದು ವಿಎಸ್ ರಾಜ ಹೇಳಿದ್ದಾರೆ.

English summary
Some of the prisoners with good conduct who are jailed for the past 6-7 yeras in Bangalore Parappana Agrahara central jail prisoners may be released on Aug 15 home minister KJ George hinted at it yesterday. Several prisoners have served more than 14 years but have not been released owing to absence of guidelines. There was delay in the release of prisoners with good conduct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X