ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ ಚಾಲನೆ

By Srinath
|
Google Oneindia Kannada News

ಮಂಡ್ಯ, ಮಾರ್ಚ್ 13: ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಐತಿಹಾಸಿಕ ಚೆಲುವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೈರಮುಡಿ ಬ್ರಹ್ಮೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ನೆರೆಯ ಮೈಸೂರಿನಲ್ಲಿ ನಡೆಯುವ ದಸರಾ ಉತ್ಸವದ ನಂತರ ಹೆಚ್ಚು ಜನಮನ್ನಣೆ ಗಳಿಸಿರುವ, ಭಕ್ತಿಭಾವದ ಬ್ರಹ್ಮೋತ್ಸವ ಇದಾಗಿದೆ. ಕಾವೇರಿ ತಟದಲ್ಲಿರುವ ತಿರುನಾರಾಯಣಪುರಂ ಬಳಿ ಯದುಗಿರಿ, ಯಾದವಗಿರಿ, ಯದುಶೈಲದ್ವೀಪ ಬೆಟ್ಟದ ಮೇಲೆ ನೆಲೆಸಿರುವ ಈ ದೇವಸ್ಥಾನವಿದೆ.

ಮೇಲುಕೋಟೆಯಲ್ಲಿ ನಡೆಯುವ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಇಂದು ಗುರುವಾರ ಮಂಡ್ಯದ ಜಿಲ್ಲಾ ಖಜಾನೆಯಿಂದ ವೈರಮುಡಿ ಮತ್ತು ರಾಜಮುಡಿಯನ್ನು ಮೇಲುಕೋಟೆಗೆ ಕೊಂಡೊಯ್ಯಲಾಯಿತು. ಇಂದು ಬೆಳಗ್ಗೆ 7.30ರಲ್ಲಿ ಜಿಲ್ಲಾ ಖಜಾನೆಯಿಂದ ನೂತನ ಜಿಲ್ಲಾಧಿಕಾರಿ ಡಾ. ಎಂಎನ್ ಅಜಯ್‌ ನಾಗಭೂಷಣ್ ಅವರ ಸಮ್ಮುಖದಲ್ಲಿ ರಾಜಮುಡಿ ಮತ್ತು ವೈರಮುಡಿಯನ್ನು ಹೊರ ತೆಗೆಯಲಾಯ್ತು.

ಸುಪ್ರಸಿದ್ದ ಮೇಲುಕೋಟೆ ಚಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಇಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಖಜಾನೆಯಲ್ಲಿರಿಸಲಾಗಿದ್ದ ರಾಜಮುಡಿ ಮತ್ತು ವೈರಮುಡಿಯನ್ನು ಇಂದು ಮೇಲುಕೋಟೆಗೆ ತರಲಾಗಿದೆ.

ನೂತನ ಜಿಲ್ಲಾಧಿಕಾರಿ ಸಮಕ್ಷಮದಲ್ಲಿ ಪ್ರಥಮ ಪೂಜೆ

ನೂತನ ಜಿಲ್ಲಾಧಿಕಾರಿ ಸಮಕ್ಷಮದಲ್ಲಿ ಪ್ರಥಮ ಪೂಜೆ

ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಜಿಲ್ಲಾ ಖಜಾನೆಯಲ್ಲಿ ರಾಜಮುಡಿ ಮತ್ತು ವೈರಮುಡಿಗೆ ಪ್ರಥಮ ಪೂಜೆ ಸಲ್ಲಿಸಿ ಕೆಲ ಕಾಲ ಸಾರ್ವಜನಿಕರ ದರ್ಶನಕ್ಕಿಡಲಾಯ್ತು. ನಂತರ ಪರಕಾಲ ಮಠದ ವಾಹನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಶ್ರೀ ಲಕ್ಷ್ಮಿ ಜನಾರ್ಧನಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಾಂಡವಪುರ ಮಾರ್ಗವಾಗಿ ಮೇಲುಕೋಟೆಗೆ ಕೊಂಡೊಯ್ಯಲಾಯಿತು.

ವೈರಮುಡಿ ಬ್ರಹ್ಮೋತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್

ವೈರಮುಡಿ ಬ್ರಹ್ಮೋತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್

ಮೇಲುಕೋಟೆಗೆ ಹೋಗುವ ಮಾರ್ಗಮಧ್ಯೆ ಸಿಗುವ ಪ್ರತಿಯೊಂದು ಗ್ರಾಮದಲ್ಲೂ ಗ್ರಾಮಸ್ಥರು ರಾಜಮುಡಿ ಮತ್ತು ವೈರಮುಡಿಗೆ ಪೂಜೆ ಸಲ್ಲಿಸಲಿದ್ದಾರೆ. ವೈರಮುಡಿ ಬ್ರಹ್ಮೋತ್ಸವಕ್ಕೆ ರಾಜ್ಯವಲ್ಲದೆ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸುವುದರಿಂದ ಯಾವುದೇ ತೊಂದರೆಯಾಗದಂತೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಅಲ್ಲದೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ ಬೊರಸೆ ತಿಳಿಸಿದ್ದಾರೆ.

ಇಂದು ಗುರುವಾರ ಸಂಜೆ ಮೇಲುಕೋಟೆಗೆ

ಇಂದು ಗುರುವಾರ ಸಂಜೆ ಮೇಲುಕೋಟೆಗೆ

ಇಂದು ಗುರುವಾರ ಸಂಜೆ 5.30ರ ವೇಳೆಗೆ ಮೇಲುಕೋಟೆ ತಲುಪಲಿರುವ ರಾಜಮುಡಿ ಮತ್ತು ವೈರಮುಡಿಯನ್ನು ಅಧಿಕಾರಿಗಳು, ಗಣ್ಯರುಗಳ ಎದುರು ಶಂಕ, ಚಕ್ರ, ಗಧಾ, ಪದ್ಮ, ಗಂಡಭೇರುಂಡ ಸೇರಿದಂತೆ 12 ಪ್ರಮುಖ ವಜ್ರ ಖಚಿತ ಆಭರಣಗಳನ್ನು ಪರಿಶೀಲನೆ (ಪರ್ಕಾವಣೆ) ಮಾಡಲಾಗುವುದು.

ಕಿರೀಟ ಧಾರಣೆ ಮಾಡಿ ರಾತ್ರಿ 8.30ರ ವೇಳೆಗೆ

ಕಿರೀಟ ಧಾರಣೆ ಮಾಡಿ ರಾತ್ರಿ 8.30ರ ವೇಳೆಗೆ

ನಂತರ ಶ್ರೀದೇವಿ, ಭೂದೇವಿ ಜೊತೆಯಲ್ಲಿರುವಂತಹ ಶ್ರೀ ಚಲುವನಾರಾಯಣಸ್ವಾಮಿಗೆ ಕಿರೀಟ ಧಾರಣೆ ಮಾಡಿ ರಾತ್ರಿ 8.30ರ ವೇಳೆಗೆ ವೈರಮುಡಿ ಬ್ರಹ್ಮೋತ್ಸವ ಆರಂಭಗೊಳ್ಳಲಿದೆ. ಈ ಬ್ರಹ್ಮೋತ್ಸವವನ್ನು ವೀಕ್ಷಿಸಲು ಲಕ್ಷಾಂತರ ಮಂದಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

12ನೆಯ ಶತಮಾನದ ಐತಿಹಾಸಿಕ ತಿರುನಾರಾಯಣಪುರಂನಲ್ಲಿ

12ನೆಯ ಶತಮಾನದ ಐತಿಹಾಸಿಕ ತಿರುನಾರಾಯಣಪುರಂನಲ್ಲಿ

ಕಾವೇರಿ ತಟದಲ್ಲಿರುವ 12ನೆಯ ಶತಮಾನದ ಐತಿಹಾಸಿಕ ತಿರುನಾರಾಯಣಪುರಂನಲ್ಲಿ ಯೋಗನರಸಿಂಹ ದೇವಸ್ಥಾನ ನಿರ್ಮಾಣವಾಗಿದೆ. ಯದುಗಿರಿ, ಯಾದವಗಿರಿ ಮತ್ತು ಯದುಶೈಲದ್ವೀಪವೆಂಬ ಬೆಟ್ಟದ ಮೇಲೆ ಇದು ನೆಲೆಗೊಂಡಿದೆ. ಮೇಲುಕೋಟೆಯು ಬೆಂಗಳೂರಿನಿಂದ 133 ಕಿಮೀ ದೂರದಲ್ಲಿ, ಮೈಸೂರಿನಿಂದ 51 ಕಿಮೀ ದೂರದಲ್ಲಿದೆ.

English summary
Mandya Melukote Vairamudi bramhotsava procession began today Mar 13. This temple of Melkote is popular for its Vairamudi Utsav, which is held in the month of March/April, the procession idol of Cheluvaraya Narayana Swamy is decorated with a diamond crown and taken out in procession. The Vairamudi utsav, which is the main annual celebration, is witnessed by more than 4 lakh people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X