ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ.19: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಮೇ.19: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

7.00: ಕಾಂಗ್ರೆಸ್ ಕಾರ್ಯಕಾರಿ ಸಭೆ ಮುಕ್ತಾಯ ಗೊಂಡಿದ್ದು, ಸಭೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜಿನಾಮೆ ನೀಡುವುದಾಗಿ ಘೋಷಿಸಿದರು, ಆದರೆ, ಒಕ್ಕೊರಲ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ನಿರ್ಣಯವನ್ನು ಹಿಂಪಡೆದರು.
1.00: ಹಿಟ್ ಅಂಡ್ ರನ್ ಕೇಸ್: ಸೆಷನ್ಸ್ ಕೋರ್ಟಿನಲ್ಲಿ ನಟ ಸಲ್ಮಾನ್ ಖಾನ್ ವಿಚಾರಣೆ ಜಾರಿ.
12.55: ಮೋದಿ ನೇತೃತ್ವದ ಸರ್ಕಾರಕ್ಕೆ ವಿಷಯಾಧಾರಿತ ಬೆಂಬಲವನ್ನು ನೀಡುತ್ತೇವೆ ಎಂದು ವೈಎಸ್ಸಾಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಹೇಳಿಕೆ.

News in brief on May 19

12.50: ಕೊಲಂಬಿಯಾದಲ್ಲೂ ಬಸ್ ಅಪಘಾತ ಸುಮಾರು 31 ವಿದ್ಯಾರ್ಥಿಗಳ ದುರ್ಮರಣ.
11.30: ಉತ್ತರಪ್ರದೇಶದ ಸಚಿವ ಸತಾಯಿ ರಾಮ್ ಅವರು ಮಾನವ ರಹಿತ ರೈಲ್ವೆ ಕ್ರಾಸಿಂಗ್ ದಾಟುವಾಗ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.

11.15: ಬ್ರೆಜಿಲ್ ನ ಬಸ್ ಅಪಘಾತದಲ್ಲಿ 11 ಜನ ಸಾವು.
11.00: ಎಂಎಚ್ 370 ವಿಮಾನ ನಾಪತ್ತೆ ರಹಸ್ಯ ಬಯಲು ಮಾಡಿದ ಪುಸ್ತಕ. 71 ದಿನಗಳಾದರೂ ಕಣ್ಣಿಗೆ ಕಾಣದ ಮಲೇಷಿಯಾದ ವಿಮಾನವನ್ನು ಯುಎಸ್ ಹಾಗೂ ಥಾಯ್ ಆರ್ಮಿಗಳು ಜಂಟಿ ಕಾರ್ಯಾಚರಣೆ ಸಂದರ್ಭದಲ್ಲಿ ಹೊಡೆದುರಳಿಸಿದ್ದಾರೆ ಎಂದು ಪುಸ್ತಕವೊಂದು ಹೇಳಿದೆ.
10.45 : ಮಾಧ್ಯಮ ಪ್ರತಿನಿಧಿಗಳನ್ನು ಹತ್ಯೆ ಮಾಡಲು ಯತ್ನಿಸಿದ ಆರೋಪದ ಮೇಲೆ ಡಿಎಂಕೆ ಪಕ್ಷದ 11 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
10.30: ಎಐಎಡಿಎಂಕೆ ಅಧ್ಯಕ್ಷೆ ಜಯಲಲಿತಾ ಅವರು ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
10.15: ಪತ್ರಕರ್ತ ತರುಣ್ ತೇಜ್ ಪಾಲ್ ಅವರ ತಾಯಿ ಸಾವನ್ನಪ್ಪಿದ್ದಾರೆ.

10.00: ಪಾಟ್ನದಲ್ಲಿ ನಿತೀಶ್ ಕುಮಾರ್ ಅವರ ನಿವಾಸದ ಎದುರು ಆತ್ಮಹತ್ಯೆಗೆ ಯತ್ನಿಸಿದ ಜೆಡಿಯು ಕಾರ್ಯಕರ್ತ.

English summary
Congress president Sonia Gandhi and vice president Rahul Gandhi offered to resign in wake of the party's worst-ever performance in the Lok Sabha polls here on Monday, but the Congress Working Committee (CWC) refused to accept it. Here are the news in brief for the day from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X