ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.14: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಸೆ.14: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

6.30: ಸೆ.17ರಂದು ನನ್ನ ಹುಟ್ಟುಹಬ್ಬವನ್ನು ಆಚರಿಸಲು ತಯಾರಿ ನಡೆಸುತ್ತಿರುವವರಲ್ಲಿ ನನ್ನದೊಂದು ಮನವಿ. ದಯವಿಟ್ಟು ಹುಟ್ಟುಹಬ್ಬ ಆಚರಣೆ ನಿಲ್ಲಿಸಿ ನಿಮ್ಮ ದೇಣಿಗೆಯನ್ನು ಜಮ್ಮು ಮತ್ತು ಕಾಶ್ಮೀರದ ಸಂತ್ರಸ್ತರಿಗೆ ನೀಡಿ. ಕಾಶ್ಮೀರದ ನೋವಿಗೆ ಸ್ಪಂದಿಸಿ ಇದೇ ನೀವು ನನಗೆ ನೀಡುವ ಶುಭ ಹಾರೈಕೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Narendra Modi

10.25: ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಮೂರು ತಿಂಗಳ ಅಧಿಕಾರದಲ್ಲಿ ಒಟ್ಟಾರೆ 350 ಯೋಜನೆಗಳ ಪೈಕಿ 240 ಯೋಜನೆಗಳನ್ನು ಪೂರೈಸಿದ್ದಾರೆ.
10.16: 26 ಹೊಸ ಟಿವಿ ಚಾನೆಲ್ ಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಅನುಮತಿ ನೀಡಿದೆ. ಇನ್ನಷ್ಟು ವಾಹಿನಿಗಳು ಅನುಮತಿಗಾಗಿ ಕಾದಿವೆ. ಒಟ್ಟಾರೆ 800ಕ್ಕೂ ಅಧಿಕ ಟಿವಿ ಚಾನೆಲ್ ಗಳು ದೇಶದಲ್ಲಿ ಚಾಲ್ತಿಯಲ್ಲಿವೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

Prakash Javedekar

10.10: ಇತ್ತೀಚೆಗೆ ನಗರಿ ಎಂಬಲ್ಲಿ ನಡೆದ ಉತ್ಸವದಲ್ಲಿ ಅರತಿ ಬೆಳಗಲು ಹೋಗಿ ಟಿಡಿಪಿ ಕಾರ್ಯಕರ್ತರಿಂದ ವೈಎಸ್ಸಾರ್ ಸಂಸದೆ, ನಟಿ ರೋಜಾ ಗಾಯ ಗೊಂಡಿದ್ದರು. ನಂತರ ಪ್ರತಿಭಟನೆ ನಡೆಸಿದ್ದರು.
9.45: ದೆಹಲಿ ವಿಶ್ವವಿದ್ಯಾಲಯದಲ್ಲಿ ಸುಮಾರು 18 ವರ್ಷಗಳ ಬಳಿಕ ಬಿಜೆಪಿ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿ ಒಕ್ಕೂಟದ ಅಧಿಕಾರ ಪಡೆದುಕೊಂಡಿದೆ. ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎನ್ ಎಸ್ ಯುಐಗೆ ಸೋಲುಂಟಾಗಿದೆ
English summary
Top news in brief for the day:My humble request-do not celebrate my birthday. Instead, dedicate yourselves towards relief work in Jammu & Kashmir through your time and resources: Prime Minister Narendra Modi and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X