ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೇತರಿಕೆ ಹಾದಿಯಲ್ಲೇ ಸಾಗುತಿದೆ ರೂಪಾಯಿ

|
Google Oneindia Kannada News

ಬೆಂಗಳೂರು, ಸೆ. 8: ಕಳೆದ ಐದು ವಾರಗಳಲ್ಲೇ ಭಾರತದ ರೂಪಾಯಿ ಡಾಲರ್‌ ಎದುರು ಸೋಮವಾರ ಅತಿ ಹೆಚ್ಚಿನ ಚೇತರಿಕೆ ದಾಖಲಿಸಿದೆ. ಇದರೊಂದಿಗೆ ಏಷ್ಯಾದ ಇತರ ಕರೆನ್ಸಿಗಳು ಚೇತರಿಕೆ ಹಾದಿಯಲ್ಲಿ ಸಾಗಿವೆ.

ಸೋಮವಾರ ಬೆಳಗ್ಗೆ 9.05ಕ್ಕೆ ದಾಖಲಾದ ಮಾಹಿತಿಯಂತೆ ಒಂದು ಡಾಲರ್‌ಗೆ 60.24 ರೂಪಾಯಿಯಾಗಿತ್ತು. ಇದು ಕಳೆದ ಐದು ವಾರಗಳಲ್ಲೇ ಅತಿ ಹೆಚ್ಚಿನ ಚೇತರಿಕೆಯಾಗಿದೆ. ಜುಲೈ ಕೊನೆಯ ವಾರದಲ್ಲಿ ಡಾಲರ್‌ ಎದುರು 60.39 ಸಾಧನೆ ಮಾಡಿದ್ದು ಸದ್ಯದ ದಾಖಲೆಯಾಗಿತ್ತು.

ruppe

ಅಮೆರಿಕದಲ್ಲಿ ಕಳೆದ ಎಂಟು ತಿಂಗಳಿನಿಂದೀಚೆಗೆ ಉಂಟಾದ ಉದ್ಯೋಗ ಕೊರತೆ ಮುಂತಾದ ಸಮಸ್ಯೆಗಳು ಅಲ್ಲಿನ ಆರ್ತಿಕ ಸ್ಥಿತಿ ಮೇಲೆ ಪರಿಣಾಂ ಬೀರಿವೆ. ಶುಕ್ರವಾರದಿಂದ ಕುಸಿಯುತ್ತಿರುವ ಡಾಲರ್‌ ಮೌಲ್ಯ ಗಮನಿಸಿದೆ ಆ ದೇಶ ಎದುರಿಸುತ್ತಿರವ ಆಂತರಿಕ ಸಮಸ್ಯೆ ಅರಿವಾಗುತ್ತದೆ. ಅಲ್ಲದೇ ಇದು ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಬಲಗೊಳ್ಳುತ್ತಿರುವ ಲಕ್ಷಣವಾಗಿದೆ ಎಂದು ವರದಿಯೊಂದು ಹೇಳಿದೆ.

ಇತ್ತ ಮುಂಬೈ ‍ಷೇರುಪೇಟೆ ಕೂಡ ತನ್ನ ನಾಗಾಲೋಟ ಮುಂದುವರಿಸಿದೆ. ಅಲ್ಲದೇ ಇತ್ತೀಚಿನ ವರದಿ ಪ್ರಕಾರ ದೇಶದ ಆರ್ಥಿಕ ಅಭಿವೃದ್ಧಿ ದರ(ಜಿಡಿಪಿ)ಯಲ್ಲೂ ಗಣನೀಯ ಏರಿಕೆಯಾಗಿದೆ. ಕಳೇದ ಎರಡು ತಿಂಗಳಲ್ಲೆ ಅತಿ ಹೆಚ್ಚಿನ ಜೆಡಿಪಿ ದರ ದಾಖಲಾಗಿದೆ.

ಒಂದೆಡೆ ರೂಪಾಯಿ ಬಲವರ್ಧನೆ, ಇನ್ನೊಂದೆಡೆ ಷೇರು ಮಾರುಕಟ್ಟೆ ಸೂಚ್ಯಂಕ ಏರಿಕೆ ಮತ್ತು ಜೆಡಿಪಿ ದರ ಹೆಚ್ಚಳ ಎಲ್ಲವೂ ಭಾರತಕ್ಕೆ ಆಶಾದಾಯಕ ಬೆಳವಣಿಗೆಯಾಗಿ ಪರಿಣಮಿಸಿದೆ.

English summary
The rupee strengthened to a more than five-week high on Monday, tracking broad overnight losses in the dollar versus major currencies following the weaker-than-anticipated U.S. jobs data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X