ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿಯಾಗಿ ಮೋದಿ ಮೇ.21ಕ್ಕೆ ಪ್ರಮಾಣ ವಚನ?

By Mahesh
|
Google Oneindia Kannada News

ನವದೆಹಲಿ, ಮೇ.16: ಸುಮಾರು 25 ವರ್ಷಗಳ ನಂತರ ಸ್ವಂತ ಬಲದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಈಗ ಸರ್ಕಾರ ಸ್ಥಾಪನೆ ಕಾರ್ಯದಲ್ಲಿ ಮಗ್ನವಾಗಿದೆ. ಬಿಜೆಪಿ ಮೂಲಗಳ ಪ್ರಕಾರ ಮೇ.21 ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಕಂಡು ಬಂದಿದೆ.

ಬಿಜೆಪಿ ಸಂಸದೀಯ ಸಮಿತಿ ಸಭೆ ಶನಿವಾರದಂದು ನಡೆಯಲಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರು ಈಗಾಗಲೇ ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ನಾಯಕರಾದ ಅರುಣ್ ಜೇಟ್ಲಿ, ನಿತಿನ್ ಗಡ್ಕರಿ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

Narendra Modi may take oath as Prime Minister on May 21 if NDA has numbers

ಸರ್ಕಾರ ರಚನೆ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಲ್ಲಿ ಕೋರುವುದು ಹಾಗೂ ಸಂಪುಟಕ್ಕೆ ಯಾರು ಸೇರಬೇಕು, ಎಲ್ ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರಂಥ ಹಿರಿಯ ನಾಯಕರಿಗೆ ಯಾವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ನಾಳೆ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

ಮೇ.17ರಂದು ದೆಹಲಿಗೆ ಬೆಳಗ್ಗೆ 10ಕ್ಕೆ ಆಗಮಿಸಲಿದ್ದು, ವಿಮಾನ ನಿಲ್ದಾಣದಿಂದ ಬಿಜೆಪಿ ಕಚೇರಿ ತನಕ ಬೃಹತ್ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಮೇ.21ರ ತನಕ ದೆಹಲಿಯಲ್ಲೇ ಉಳಿಯಲಿದ್ದಾರೆ. ಸರ್ಕಾರ ರಚನೆ ಅಹವಾಲು ಸಲ್ಲಿಸಿ ಒಪ್ಪಿಗೆ ಪಡೆದ ನಂತರ ಮೋದಿ ಹಾಗೂ ಸಂಪುಟ ದರ್ಜೆ ಕೆಲ ಸಚಿವರು ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.

ಇದು ನನ್ನ ಗೆಲುವಲ್ಲ, ದೇಶದ ಗೆಲುವು ಎಂದಿರುವ ಮೋದಿ ಅವರು ವಡೋದರಾ ಹಾಗೂ ವಾರಣಾಸಿಯ ಗೆಲುವಿನ ಸಂಭ್ರಮವನ್ನು ಜನರ ಜತೆ ಆಚರಿಸಲು ಇಚ್ಛಿಸಿದ್ದಾರೆ. ಮೊದಲಿಗೆ ವಾರಣಾಸಿಯಲ್ಲಿ ಗಂಗಾ ನದಿಗೆ ಅರತಿ ಬೆಳಗಿ, ಅಲ್ಲಿನ ಘಾಟ್ ಗಳಲ್ಲಿ ಜನರ ಉದ್ದೇಶಿಸಿ ಮಾತನಾಡುತ್ತಾ ಧನ್ಯವಾದ ಅರ್ಪಿಸುವುದು ಮೋದಿ ಅವರ ಮೊದಲ ಕಾರ್ಯಕ್ರಮವಾಗಿದೆ.

English summary
A buoyant BJP is looking forward to the Lok Sabha election results with senior leaders holding parleys and meetings to prepare the ground for the parliamentary board meeting on Saturday where Narendra Modi is likely to be declared prime ministerial choice by the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X