ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ ರಾಜ್ಯಪಾಲೆ ಮಿಜೋರಾಂಗೆ ವರ್ಗಾವಣೆ

By Ashwath
|
Google Oneindia Kannada News

ನವದೆಹಲಿ, ಜು.7: ಗುಜರಾತ್‌‌ ರಾಜ್ಯಪಾಲೆ ಕಮಲಾ ಬೇನಿವಾಲ್ ಅವರು ಮಿಜೋರಂಗೆ ವರ್ಗಾವಣೆಯಾಗಿದ್ದಾರೆ. ರಾಷ್ಟ್ರಪತಿ ಭವನ ಈ ಕುರಿತು ಪ್ರಕಟಣೆ ಹೊರಡಿಸಿದ್ದು ಹಾಲಿ ರಾಜಸ್ಥಾನದ ರಾಜ್ಯಪಾಲೆಯಾಗಿರುವ ಮಾರ್ಗರೆಟ್‌‌ ಅಳ್ವರ ಅವರಿಗೆ ಗುಜರಾತ್‌ ಹೆಚ್ಚುವರಿ ಹೊಣೆ ನೀಡಲಾಗಿದೆ.

ಮಿಜೋರಂ ರಾಜ್ಯಪಾಲರಾಗಿದ್ದ ವಕ್ಕೋ ಪುರುಷೋತ್ತಮನ್‌ ಅವರನ್ನು ನಾಗಲ್ಯಾಂಡ್‌‌‌ನ ರಾಜ್ಯಪಾಲರಾಗಿ ವರ್ಗಾವಣೆಯಾಗಿದ್ದಾರೆ. ವಕ್ಕೋ ಪುರುಷೋತ್ತಮನ್‌ ಅವರಿಗೆ ಹೆಚ್ಚುವರಿಯಾಗಿ ತ್ರಿಪುರ ರಾಜ್ಯದ ಹೊಣೆಯನ್ನು ನೀಡಲಾಗಿದೆ.

 Kamla Beniwal

87 ವರ್ಷದ ಕಮಲಾ ಬೇನಿವಾಲರ ಅವಧಿ ನವೆಂಬರ್‌ನಲ್ಲಿ ಪೂರ್ಣ‌ಗೊಳ್ಳಲಿದೆ. ನರೇಂದ್ರ ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಲೋಕಾಯುಕ್ತರನ್ನು ನೇಮಿಸುವ ವೇಳೆ ಮೋದಿ ಅಭಿಪ್ರಾಯವನ್ನು ಕೇಳದೇ ನೇರವಾಗಿ ನಿರ್ಧಾರ ಕೈಗೊಂಡಿದ್ದರು. ಲೋಕಾಯುಕ್ತ ನೇಮಕಗೊಳಿಸಿದ್ದಕ್ಕೆ ಬೇನಿವಾಲ್‌ ಹಾಗೂ ಮೋದಿ ಮಧ್ಯೆ ಜಟಾಪಟಿ ನಡೆದಿತ್ತು.[ಪ್ರತಿಷ್ಠೆಯ ಕಾದಾಟ:ಸೊರಗುತ್ತಿರುವ ಲೋಕಾಯುಕ್ತ ಹುದ್ದೆ]

ಕರ್ನಾಟಕ ರಾಜ್ಯಪಾಲರಾಗಿ ಸೋಲಿ ಸೊರಾಬ್ಜಿ? ಹಂಸರಾಜ್‌‌‌ ಭಾರದ್ವಾಜ್‌ ಅವರ ನಿವೃತ್ತಿಯಿಂದ ತೆರವಾಗಿರುವ ಕರ್ನಾಟಕ ರಾಜ್ಯಪಾಲರ ಹುದ್ದೆಗೆ ದೇಶದ ಪ್ರಖ್ಯಾತ ನ್ಯಾಯವಾದಿ ಸೋಲಿ ಸೊರಾಬ್ಜಿ ನೇಮಕವಾಗುವ ಸಾಧ್ಯತೆಯಿದೆ. ಶುಕ್ರವಾರ ರಾತ್ರಿ ಗೃಹ ಸಚಿವ ರಾಜನಾಥ್‌ ಸಿಂಗ್ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಸೊಲಿ ಸೊರಾಬ್ಜಿ ಸೇರಿದಂತೆ ಏಳು ಜನರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

English summary
Gujarat Governor Kamla Beniwal, who shared an uneasy relationship with Narendra Modi when he was the Chief Minister of the state, was tonight sent off to Mizoram in a reshuffle of governors set in motion by the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X