ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಶು ಪಾಲನೆ: ಸುಪ್ರೀಂಕೋರ್ಟ್ ಮಹತ್ವದ ಆದೇಶ

|
Google Oneindia Kannada News

ನವದೆಹಲಿ, ಏ 16: ಕೇಂದ್ರ ಸರಕಾರದ ಮಹಿಳಾ ಉದ್ಯೋಗಿಗಳ ಪಾಲಿಗೆ ಮಂಗಳವಾರ (ಏ 15) ಮಹತ್ವದ ದಿನ. ಶಿಶುಪಾಲನೆಗಾಗಿ ಇನ್ನು ಮುಂದೆ ಎರಡು ವರ್ಷಗಳ ಅನಿರ್ಬದಿಂತ ರಜೆ ಪಡೆದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

ನ್ಯಾಯಮೂರ್ತಿ ವಿ ಗೋಪಾಲ ಗೌಡ ಮತ್ತು ಎಸ್ ಜೆ ಮುಖ್ಯೋಪಾಧ್ಯಾಯ ಇರುವ ಪೀಠ, ಈ ಎರಡು ವರ್ಷದ ರಜೆಯನ್ನು ಶಿಶುಪಾಲನೆಗೆ ಮಾತ್ರವಲ್ಲದೇ ಮಕ್ಕಳ ಅನಾರೋಗ್ಯ, ವೈದ್ಯಕೀಯ ಪರೀಕ್ಷೆಗಳಿಗೂ ಬಳಸಿಕೊಳ್ಳಬಹುದೆಂದು ತನ್ನ ಆದೇಶದಲ್ಲಿ ತಿಳಿಸಿದೆ.

Central Government women employees can get two year uninterrupted leave for child care

ಕೇಂದ್ರ ಸರಕಾರದ ಮಹಿಳಾ ಉದ್ಯೋಗಿಯೊಬ್ಬರು ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಿ ನ್ಯಾಯಾಲಯ ಈ ಮಹತ್ವದ ಆದೇಶ ನೀಡಿದೆ. 730 ದಿನಗಳ ಅನಿರ್ಬದಿಂತ ರಜೆ ನೀಡಲು ಸಾಧ್ಯವಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಕೇಂದ್ರ ಸರಕಾರದ 43C ಸರ್ಕ್ಯೂಲರ್ ಅನ್ವಯ ಮಹಿಳಾ ಉದ್ಯೋಗಿಗಳು ತಮ್ಮ ಮಕ್ಕಳಿಗೆ ಹದಿನೆಂಟು ವರ್ಷ ತುಂಬುವುದರೊಳಗೆ 730ದಿನಗಳ ರಜೆ ಪಡೆಯಲು ಅವಕಾಶವಿರುತ್ತದೆ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟ ಪಡಿಸಿದೆ.

730 ದಿನಗಳ ಮೇಲೆ ಇನ್ನೂ ರಜೆಯ ಅವಶ್ಯಕತೆ ಬಿದ್ದರೆ ಮಹಿಳಾ ಉದ್ಯೋಗಿಗಳು ತಮ್ಮ ಅಕೌಂಟಿನಲ್ಲಿರುವ ಇತರ ರಜೆಗಳನ್ನು ಹೊಂದಿಸಿಕೊಂಡು ರಜೆಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

English summary
Central Government women employees can get two year uninterrupted leave for child care, Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X