ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷರ ಜಾತ್ರೆಗೆ ಅಣಿಯಾದ ಯೋಧರ ನಾಡು

By ಎಲ್ಕೆ, ಮೈಸೂರು
|
Google Oneindia Kannada News

ಒಂದೇ ಒಂದು ಸಾಹಿತ್ಯ ಕೃತಿಗಳ ಮಾರಾಟ ಮಳಿಗೆಯಿಲ್ಲದ ಕೊಡಗಿನಲ್ಲಿ ಏಕಕಾಲದಲ್ಲಿ 300ಕ್ಕೂ ಅಧಿಕ ಪುಸ್ತಕ ಮಳಿಗೆಗಳು ಮಡಿಕೇರಿಯಲ್ಲಿ ತಲೆಯೆತ್ತಿವೆ. ಯೋಧರ ನಾಡು ಅಕ್ಷರ ಜಾತ್ರೆ ಅಣಿಯಾಗಿದೆ.

ಮಂಜಿನ ನಗರಿ ಮಡಿಕೇರಿಯಲ್ಲಿ ಜನವರಿ 7 ರಿಂದ 9 ರವರೆಗೆ ನಡೆಯುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾ. ಡಿಸೋಜ ಅವರು ಅಧ್ಯಕ್ಷರಾಗಿದ್ದಾರೆ. ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳತ್ತ ಒಂದು ಪಕ್ಷಿ ನೋಟ ಇಲ್ಲಿದೆ...

ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ 3ನೇ ಬಾರಿಗೆ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಾಖಲೆ ಸಂಖ್ಯೆಯಲ್ಲಿ ಮಳಿಗೆಗಳಿಗೆ ಅರ್ಜಿಗಳು ಬಂದಿವೆ. ಈಗ ಬಂದಿರುವ ಅರ್ಜಿಗಳಂತೆ 300 ಪುಸ್ತಕ ಮಳಿಗೆಗಳು , 40 ವಾಣಿಜ್ಯ ಸಂಬಂಧಿತ ವಸ್ತುಗಳ ಮಾರಾಟ ಮಳಿಗೆಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ತಲೆ ಎತ್ತಲಿವೆ. 10*15 ಅಡಿ ವಿಸ್ತಾರದ ಪ್ರತೀ ಮಳಿಗೆಗಳಿಗೆ ಈಗ ಅಂದಾಜಿಸಿರುವಂತೆ ಒಂದೂವರೆ ಎಕರೆ ಜಾಗದ ಅಗತ್ಯವಿದೆ.

ಸಮ್ಮೇಳನ ನಡೆಯುವ ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದ ಬಳಿಯಲ್ಲಿಯೇ ಪುಸ್ತಕ ಮತ್ತು ವಸ್ತುಗಳ ಮಾರಾಟ ಮಳಿಗೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಲೇಜಿನ ಮತ್ತೊಂದು ಬದಿಯ ವಿಶಾಲ ಗದ್ದೆಯಲ್ಲಿಯೂ ಮಳಿಗೆಗಳನ್ನು ರೂಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತದೆ.

80th Kannada Sahitya Sammelana Madikeri A Curtain Raiser

ಇಷ್ಟೊಂದು ಮಳಿಗೆಗಳಿಗೆ ಅರ್ಜಿ ಬರಬಹುದೆಂಬ ನಿರೀಕ್ಷೆ ಸಮ್ಮೇಳನ ಸಮಿತಿಯವರಿಗೆ ಇರಲಿಲ್ಲ. ಇದೀಗ ರಾಜ್ಯದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಗದಗ, ಉಡುಪಿ, ಮೈಸೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳಿಗೆ ಅರ್ಜಿಗಳು ಲಭಿಸಿವೆ ಎಂದು ಸಮ್ಮೇಳನದ ಪುಸ್ತಕ ಮಳಿಗೆ ಸಮಿತಿ ಅಧ್ಯಕ್ಷ ಕೆ.ವಿ.ಸುರೇಶ್ ತಿಳಿಸಿದ್ದಾರೆ.

ಮಳಿಗೆಗಳ ನಿರ್ವಹಣೆಗಾಗಿ 16 ಮಂದಿಯ ಸಮಿತಿ ಕಾರ್ಯಾಚರಿಸುತ್ತಿದ್ದು, ಮಳಿಗೆಗಳಿರುವ ಸ್ಥಳದಲ್ಲಿ ಸೂಕ್ತ ಮಾಹಿತಿಗೆ ಪ್ರತ್ಯೇಕ ಧ್ವನಿವರ್ಧಕದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರತೀ ಮಳಿಗೆಗೆ 3 ದಿನಗಳಿಗಾಗಿ ತಲಾ ರೂ. 2500 ದರ ನಿಗದಪಡಿಸಲಾಗಿದ್ದು, ಅರ್ಜಿ ಸಲ್ಲಿಸುವಾಗಲೇ ರೂ. 2500 ಅನ್ನು ಅರ್ಜಿದಾರರಿಂದ ಸಂಗ್ರಹಿಸಲಾಗಿದೆ.

ಅತ್ಯುತ್ತಮ ವ್ಯಾಪಾರದ ನಿರೀಕ್ಷೆ: ರಾಜ್ಯದ ಅನೇಕ ಪ್ರಮುಖ ಪುಸ್ತಕೋದ್ಯಮ ಸಂಸ್ಥೆಗಳು ಮಡಿಕೇರಿ ಸಮ್ಮೇಳನದಲ್ಲಿ ಸಾಹಿತ್ಯ ಪುಸ್ತಕಗಳ ಅತ್ಯುತ್ತಮ ವ್ಯಾಪಾರ ನಿರೀಕ್ಷಿಸಿವೆ. ಆರಂಭಿಕ ಹಂತದಲ್ಲಿ ಕೊಡಗಿನಲ್ಲಿ ಸಾಹಿತ್ಯಾಸಕ್ತರ ಸಂಖ್ಯೆ ಕಡಿಮೆ ಇದೆ ಎಂಬ ಭಾವನೆಯಿಂದಾಗಿ ರಾಜ್ಯದ ಪ್ರಮುಖ ಪುಸ್ತಕೋದ್ಯಮಿಗಳು ಈ ಬಾರಿಯ ಸಮ್ಮೇಳನದಲ್ಲಿ ಮಳಿಗೆ ಹಕಲು ಹಿಂದೇಟು ಹಾಕಿದ್ದವು. ಆದರೆ, ನಂತರದ ದಿನಗಳಲ್ಲಿ ರಾಜ್ಯದ ವಿವಿಧೆಡೆಯಿಂದ ಸಾಲು ಸಾಲಾಗಿ ಮಳಿಗೆ ಕೋರಿ ಅರ್ಜಿಗಳು ಬಂದಿವೆ. [ಸಾಹಿತ್ಯ ಸಮ್ಮೇಳನ ಏಕೆ ವೆಜಿಟೇರಿಯನ್?]

ಕೊಡಗಿನ ಸಾಹಿತ್ಯಾಭಿಮಾನಿಗಳೊಂದಿಗೆ ಹೊರ ಜಿಲ್ಲೆಯಿಂದಲೂ ಬರುವ ಸಾವಿರಾರು ಸಾಹಿತ್ಯ ಪ್ರಿಯರು ಮಡಿಕೇರಿಯಲ್ಲಿ ಪುಸ್ತಕಗಳನ್ನು ಕೊಂಡಾರು ಎಂಬ ಹಿನ್ನೆಲೆಯಲ್ಲಿ ಮಳಿಗೆ ಖರೀದಿಸಲು ಮುಂದಾಗಿರುವುದಾಗಿ ಪುಸ್ತಕ ವ್ಯಾಪಾರಿಯೊಬ್ಬರು ಹೇಳಿದರು.

ವಾಣಿಜ್ಯ ಸಂಬಂಧಿ ಮಳಿಗೆಗಳ ಪೈಕಿ ಬಟ್ಟೆ, ಫ್ಯಾನ್ಸಿ ವಸ್ತುಗಳು, ಹೋಟೆಲ್‍ಗಳು, ತಿಂಡಿ ತಿನಿಸುಗಳ ಮಾರಾಟ ಮಳಿಗೆಗಳು ತಲೆಯೆತ್ತಲಿವೆ. ಅರ್ಜಿ ಬಂದಿವೆ. ಕೊಡಗು ಜಿಲ್ಲೆಯ ವಿವಿಧ ಅಂಗಡಿಗಳಿಂದಲೂ ಸಮ್ಮೇಳನದಲ್ಲಿ ಮಳಿಗೆ ಸ್ಥಾಪಿಸಲು ಅರ್ಜಿ ಬಂದಿದೆ, ಅಂತೆಯೇ ಜಿಲ್ಲೆಯ ವಿವಿಧ ಸ್ತ್ರೀಶಕ್ತಿ ಸಂಘಟನೆಗಳು ತಮ್ಮ ಉತ್ಪನ್ನಗಳನ್ನು ಮಳಿಗೆಗಳ ಮೂಲಕ ಮಾರಾಟ ಮಾಡಲಿವೆ.

80th Kannada Sahitya Sammelana Madikeri A Curtain Raiser

ಕೊಡಗಿನಿಂದಲೂ ಸಮ್ಮೇಳನದಲ್ಲಿ ಮಳಿಗೆಗಳಿಗೆ ಉತ್ತಮ ಸ್ಪಂದನ ದೊರಕಿದ್ದು, ವಿಶೇಷವಾಗಿದೆ. ಅಂತೆಯೇ ಕೊಡಗಿನ ಲೇಖಕರ ಕೃತಿಗಳಿಗೆ ಪ್ರತ್ಯೇಕವಾಗಿ 1 ಮಳಿಗೆಯನ್ನು ನಿಗದಿಪಡಿಸಲಾಗಿದ್ದು,ಕೊಡಗಿನ ಸಾಹಿತಿಗಳು ಬರೆದ ಪುಸ್ತಕಗಳನ್ನೇ ವಿಶೇಷವಾಗಿ ಈ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಪುಸ್ತಕಗಳ ಮಾರಾಟಕ್ಕೆ ಒಂದೇ ಒಂದು ಪ್ರತ್ಯೇಕ ಅಂಗಡಿಗಳಿಲ್ಲ. ಕರ್ನಾಟಕದಲ್ಲಿಯೇ ಸಾಹಿತ್ಯ ಪುಸ್ತಕ ಮಾರಾಟದ ಪ್ರತ್ಯೇಕ ಅಂಗಡಿ ಇಲ್ಲದಿರುವ ಜಿಲ್ಲೆ ಕೊಡಗು ಮಾತ್ರ. ಇದರಿಂದಾಗಿ ಕೊಡಗಿನ ಲೇಖಕರು ತಮ್ಮ ಸಾಹಿತ್ಯ ಕೃತಿಗಳ ಮಾರಾಟಕ್ಕೆ ಸಾಕಷ್ಟು ಪ್ರಯಾಸ ಪಡಬೇಕಾಗಿತ್ತು.ಇದೀಗ ಸಾಹಿತ್ಯ ಸಮ್ಮೇಳನದಲ್ಲಿ ಕೊಡಗಿನವರ ಕೃತಿಗಳಿಗೆ ಪ್ರತ್ಯೇಕ ಮಾರಾಟ ಮಳಿಗೆ ವ್ಯವಸ್ಥೆ ಕೈಗೊಂಡಿರುವುದು ಸಹಜವಾಗಿಯೇ ಸ್ಥಳೀಯ ಲೇಖಕರಲ್ಲಿ ಸಂತಸ ಮೂಡಿಸಿದೆ.

English summary
The entire Madikeri town wore a bridal look in view of the three day Kannada Sahitya Sammelana to be inaugurated tomorrow(Jan.7). Eminent Kannada writer and novelist Norbert D'Souza is the President for 80th Kannada Sahitya Sammelana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X