ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪಘಾತದಲ್ಲಿ ಪೊಲೀಸ್ ಪೇದೆ ಸಾವು, ಕಣ್ಣು, ಕಿಡ್ನಿ ದಾನ

|
Google Oneindia Kannada News

ಮಂಗಳೂರು, ಸೆ. 17 : ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸಂಚಾರಿ ಪೊಲೀಸ್ ಪೇದೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಂಪ್‌ವೆಲ್ ಬಳಿ ಬುಧವಾರ ಬೆಳಗ್ಗೆ ನಡೆಡಿದೆ. ಸಾವನ್ನಪ್ಪಿದ ಪೇದೆ ಕಣ್ಣು ಮತ್ತು ಮೂತ್ರಪಿಂಡವನ್ನು ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಮೃತಪಟ್ಟ ಪೇದೆಯನ್ನು ಭಾಸ್ಕರ್ (45) ಎಂದು ಗುರುತಿಸಲಾಗಿದೆ. ಸುರತ್ಕಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಭಾಸ್ಕರ್ ಕಾರ್ಯನಿರ್ವಹಿಸುತ್ತಿದ್ದರು. ಬುಧವಾರ ಭಾಸ್ಕರ್ ಕೆಲಸಕ್ಕೆ ತೆರಳುವಾಗ ಅವರ ಪಲ್ಸ್‌ರ್ ಬೈಕ್‌ಗೆ ಹೊಸಂಗಡಿಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. [ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಿದ ಜೀವಂತ ಹೃದಯ!]

traffic police

ಪತ್ನಿ ಮತ್ತು ಎರಡು ಮಕ್ಕಳನ್ನು ಭಾಸ್ಕರ್ ಅಗಲಿದ್ದಾರೆ. ಸಾವಿನ ನಂತರ ಕಣ್ಣು ಮತ್ತು ಕಿಡ್ನಿಯನ್ನು ದಾನ ಮಾಡುವುದಾಗಿ ಭಾಸ್ಕರ್ ಅವರು ಬರೆದಿಟ್ಟಿದ್ದರು. ಅವರ ಆಸೆಯಂತೆ ಕಣ್ಣು ಮತ್ತು ಮೂತ್ರಪಿಂಡವನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗಿದ್ದು, ಬೇರೆಯವರಿಗೆ ಅಳಡಿಸಲು ವೈದ್ಯರು ನಿರ್ಧರಿಸಿದ್ದಾರೆ. ಅಪಘಾತದ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. [ಚಿತ್ರ : ಐಸಾಕ್ ರಿಚರ್ಡ್ ಮಂಗಳೂರು]

English summary
A police constable died in road mishap at Kankanady Pumpwell in Mangalore on September 17. The deceased has been identified as Bhasker (45), a resident of Hoigebail. Bhasker was working in the Suratkal traffic police station. A case has been registered in the Kadri police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X