ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಸಮಾವೇಶದಲ್ಲಿ ದೇವೇಗೌಡರ ಖಡಕ್ ನುಡಿಗಳು

|
Google Oneindia Kannada News

ಬೆಂಗಳೂರು, ಆ.18 : ಪಕ್ಷದ ವಿರೋಧಿಗಳಿಗೆ ಗುದ್ದು, ತಮ್ಮ ಪಕ್ಷದ ಶಾಸಕರ ವಿರುದ್ಧ ಅಸಮಾಧಾನ, ನನಗೆ ಪಾಠ ಮಾಡಬೇಡಿ ಎಂಬ ಖಡಕ್ ನುಡಿ, ಬೇರೆ ಪಕ್ಷಕ್ಕೆ ಹೋಗುವವರನ್ನು ಕಟ್ಟಿ ಹಾಕೋಲ್ಲ ಎಂಬ ಅಚಲ ನಿರ್ಧಾರ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಇವು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬೆಂಗಳೂರು ಸಮಾವೇಶದಲ್ಲಿ ಮಾಡಿದ ಭಾಷಣದ ಮುಖ್ಯಾಂಶಗಳು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕರ್ತರು ಮತ್ತು ರಾಜ್ಯ ಮಟ್ಟದ ನಾಯಕರ ಸಮಾವೇಶ ಉದ್ದೇಶಿಸಿ ಮಾತನಾಡಿದ ಎಚ್.ಡಿ.ದೇವೇಗೌಡರು, ಜೆಡಿಎಸ್ ಪಕ್ಷವನ್ನು ಉಳಿಸಲು ನಿರ್ಣಾಯಕ ಹೋರಾಟಕ್ಕೆ ಇಳಿದಿದ್ದೇನೆ. ಯಾವುದೇ ಫಲಾಪೇಕ್ಷೆ ಇಲ್ಲದವರ ನನ್ನೊಂದಿಗೆ ಬನ್ನಿ, ಬರದಿದ್ದರೆ ನಿಮ್ಮ ದಾರಿ ನಿಮಗೆ ಎಂದು ಗೌಡರು ಗುಡುಗಿದರು.

H.D.Deve Gowda

ಐವತ್ತು ವರ್ಷಗಳ ಕಾಲ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನನಗೆ ಹೋರಾಟ ಹೊಸದೇನಲ್ಲ. ಪ್ರತಿ ಜಿಲ್ಲೆಗೂ ಹೋಗಿ ಪ್ರವಾಸ ಮಾಡುತ್ತೇನೆ. ಇದು ನನಗೆ ಅಗ್ನಿ ಪರೀಕ್ಷೆಯ ಕಾಲ ಎಂದು ಹೇಳಿದ ಎಚ್.ಡಿ.ದೇವೇಗೌಡರು. ಕಟ್ಟಾ ಬೆಂಬಲಿಗರು ನನ್ನ ಜೊತೆ ಬನ್ನಿ, ಉಳಿದವರ ದಾರಿ ನಿಮಗೆ ಬಿಟ್ಟಿದ್ದು ಎಂದು ಖಡಕ್ ಆಗಿ ಕಡ್ಡಿ ಮುರಿದಂತೆ ಹೇಳಿದರು. [ದೇವೇಗೌಡರ ಸುದ್ದಿಗೋಷ್ಠಿ ವಿವರಗಳು]

ದೇವೇಗೌಡರಿಗೆ ವಯಸ್ಸಾಗಿದೆ, ಅವರ ಬಳಿ ಹಣವಿಲ್ಲ ಎಂದು ಮಾತನಾಡುವವರು ನನ್ನೊಂದಿಗೆ ಬರಬೇಡಿ ಎಂದು ನೇರವಾಗಿ ಹೇಳಿದ ದೇವೇಗೌಡರು, ಪ್ರತಿಫಲ ಬಯಸದೇ ಪಕ್ಷ ಸಂಘಟನೆ ಮಾಡುವ ನಿಷ್ಠಾವಂತ ಕಾರ್ಯಕರ್ತರು ಮಾತ್ರ ನನ್ನೊಂದಿಗೆ ಬನ್ನಿ ಎಂದು ಕರೆ ನೀಡಿದರು. ಸಮಾವೇಶಕ್ಕೆ ಗೈರು ಹಾಜಾರಿದ್ದ ಪಕ್ಷದ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೈ ವಿರುದ್ಧ ಗುಡುಗಿದ ಗೌಡರು : ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡರು, ಕಾಂಗ್ರೆಸ್ ಪಕ್ಷ ನಮ್ಮ ಪಕ್ಷದವರನ್ನು ಹೈಜಾಕ್ ಮಾಡಲು ಹೊರಟಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ರಾಷ್ಟ್ರಮಟ್ಟದಲ್ಲಿ ಏನಾಗಿದೆ ಎಂಬುದು ಜನತೆಗೆ ತಿಳಿದಿದೆ ಎಂದು ಲೇವಡಿ ಮಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಪಕ್ಷದ ಕೆಲ ಸದಸ್ಯರಿಗೆ ಪ್ರಚೋದನೆ ನೀಡಿ ಪಕ್ಷವನ್ನು ಒಡೆಯುತ್ತಿದ್ದಾರೆ ಎಂದು ದೂರಿದರು.

English summary
Former Prime Minister and JD(S) supremo H.D.Deve Gowda addressed party workers state level conference on Monday, August 18 at Palace Grounds Bangalore. Here is speech highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X