ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಬಸ್ ದರ ಏರಿಕೆಗೆ ಬೀಳಲಿದೆ ಕಡಿವಾಣ

|
Google Oneindia Kannada News

ಬೆಂಗಳೂರು, ಆ.15 : ಸಾಲು-ಸಾಲು ರಜೆ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದ ಖಾಸಗಿ ಬಸ್ಸುಗಳಿಗೆ ಸರ್ಕಾರ ಕಡಿವಾಣ ಹಾಕಲು ಮುಂದಾಗಿದೆ. ಈ ಸಂಬಂಧ ಸೂಕ್ತ ಕಾಯ್ದೆಯೊಂದನ್ನು ಜಾರಿಗೆ ತರಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ವಿಶೇಷ ಸಂದರ್ಭದಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳಿಂದ ನಡೆಯುತ್ತಿರುವ ಸುಲಿಗೆಯನ್ನು ತಡೆಯುವ ಸಂಬಂಧ ಕಾಂಟ್ರ್ಯಾಕ್ಟ್ ಕ್ಯಾರಿಯೇಜ್ ಆ್ಯಕ್ಟ್‌ಗೆ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ತಿದ್ದುಪಡಿ ತರಲಾಗುವುದು ಎಂದು ತಿಳಿಸಿದರು.

Ramalinga Reddy

ಸದ್ಯ ಸಾಲು-ಸಾಲು ರಜೆಗಳು ಬಂದಾಗ ಖಾಸಗಿ ಬಸ್ಸುಗಳು ಪ್ರಯಾಣ ದರವನ್ನು ಏಕಾಏಕಿ ಹೆಚ್ಚಿಸುತ್ತಿವೆ. ಇದರಿಂದಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದರು. [2014ರ ಸರ್ಕಾರಿ ರಜಾ ಪಟ್ಟಿ]

ಕಾಂಟ್ರ್ಯಾಕ್ಟ್ ಕ್ಯಾರಿಯೇಜ್ ಆ್ಯಕ್ಟ್‌ಗೆ ತಿದ್ದುಪಡಿ ತರುವುದರಿಂದ ಖಾಸಗಿ ಬಸ್ಸುಗಳಲ್ಲಿ ಅಧಿಕ ಪ್ರಯಾಣ ದರ ವಿಧಿಸುವುದನ್ನು ತಡೆಯಬಹುದು ಎಂದು ಸಚಿವರು ಹೇಳಿದರು. ಖಾಸಗಿ ಬಸ್ಸುಗಳು ಪ್ರಯಾಣದರವನ್ನು ದುಪ್ಪಟ್ಟು ಮಾಡುವು ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ಕಾಯ್ದೆಯ ಅನ್ವಯ ಖಾಸಗಿ ಬಸ್ ಪ್ರಯಾಣದ ಟಿಕೆಟ್‌ಗೆ ಮೂಲ ದರ ನಿಗದಿ ಪಡಿಸಬೇಕು. ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಕರ ಒತ್ತಡ ಆಧರಿಸಿ ಪ್ರತಿ ಕಿ.ಮೀ.ಗೆ ಎಷ್ಟು ಮೊತ್ತ ಹೆಚ್ಚಳ ಮಾಡಬಹುದು ಎನ್ನುವ ಬಗ್ಗೆ ನಿರ್ದಿಷ್ಟ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ. ಇದನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಗಣೇಶ ಚತುರ್ಥಿ, ದೀಪಾವಳಿ, ಯುಗಾದಿ, ಕ್ರಿಸ್‌ಮಸ್, ರಂಜಾನ್ ಮುಂತಾದ ಹಬ್ಬದ ಸಂದರ್ಭಗಳಲ್ಲಿ ಲಕ್ಷಾಂತರ ಜನರು ತಮ್ಮ ಊರುಗಳಿಗೆ ಪ್ರಯಾಣಿಸುತ್ತಾರೆ. ಈ ಸಂದರ್ಭದ ಲಾಭ ಮಾಡಿಕೊಳ್ಳಲು ಖಾಸಗಿ ಸಾರಿಗೆ ಸಂಸ್ಥೆಯವರು, ಪ್ರಯಾಣ ದರವನ್ನು ನಾಲ್ಕರಿಂದ ಐದು ಪಟ್ಟು ಏರಿಸುತ್ತಾರೆ ಎಂದು ದೂರುಗಳು ಬಂದಿವೆ ಎಂದು ಸಚಿವರು ತಿಳಿಸಿದರು.

English summary
Karnataka Transport Minister Ramalinga Reddy said, Transport department will amend the Contract Carriages Act to regulate fares charged by private bus operators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X