ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವನಹಳ್ಳಿ ಬಳಿ ಬ್ರಿಗೇಡ್ ನಿವೃತ್ತಿ ಮನೆ ಯೋಜನೆ

By Rajendra
|
Google Oneindia Kannada News

ಬೆಂಗಳೂರು, ಏ.22: ದೇಶದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ನಿವೃತ್ತರಿಗೆ ಮನೆಗಳ ಅಗತ್ಯವಿದೆ ಎಂದು ಜೋನ್ಸ್ ಲ್ಯಾಂಗ್ ಲಾಸಲ್ಲೆ ವರದಿ ತಿಳಿಸುತ್ತದೆ. ನಿವೃತ್ತರ ಮನೆಗಳ ಪೂರೈಕೆ ಮತ್ತು ಬೇಡಿಕೆ ಕುರಿತು ಸಂದರ್ಶನ ನೀಡಿರುವ ಬ್ರಿಗೇಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಜೈಶಂಕರ್, ಪ್ರಸ್ತುತ ನಿವೃತ್ತಿ ಹೊಂದುವವರ ಮನೆಗಳ ಬೇಡಿಕೆಗೂ ಪೂರೈಕೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳುತ್ತಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ನಿವೃತ್ತಿ ನಿವಾಸ ಎಂದರೇನು?
ಜೈಶಂಕರ್-ಈ ಹಿಂದಿನವರೆಗೆ ವೃದ್ಧರ ಆಶ್ರಯ ತಾಣ ಅಥವಾ ವೃದ್ಧರ ಮನೆ ಎಂದು ಹೇಳಲಾಗುತ್ತಿತ್ತು. ಆದರೆ, ದಿನ ಕಳೆದಂತೆ ಈ ಪರಿಕಲ್ಪನೆ ಕಾಣೆಯಾಗಿ ಈ ವಿಚಾರದಲ್ಲಿ ಹಲವಾರು ಚಿಂತನೆಗಳು, ಬದಲಾವಣೆಗಳು ನಡೆದಿವೆ. ಹೀಗಾಗಿ ಈಗ ವೃದ್ಧರ ಮನೆ ಎನ್ನುವುದಕ್ಕಿಂತ ಹೆಚ್ಚಾಗಿ ನಿವೃತ್ತಿ ನಿವಾಸಗಳು ಎಂದಾಗಿದೆ. ಈ ನಿವಾಸಗಳು ಈಗ ಅಪಾರ್ಟ್ ಮೆಂಟ್ ಗಳಾಗಿ ಬದಲಾವಣೆ ಹೊಂದಿದ್ದು, ಹಿರಿಯ ನಾಗರೀಕರಿಗೆ ಅಗತ್ಯವಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕೇಂದ್ರಗಳಾಗಿವೆ.

ಸುರಕ್ಷಿತವಾದ, ಸಾಮಾಜಿಕ ವ್ಯವಸ್ಥೆಯೊಂದಿಗೆ ಸದಾ ಸಂಪರ್ಕದಲ್ಲಿರುವಂತಹ ನಿವಾಸಗಳಾಗಿ ಮಾರ್ಪಟ್ಟಿವೆ. ಈ ನಿಟ್ಟಿನಲ್ಲಿ ಬೆಂಗಳೂರು, ಕೊಚ್ಚಿನ್, ಚೆನ್ನೈ, ಕೊಯಮತ್ತೂರು, ಪುಣೆ, ಗೋವಾ, ಕೊಲ್ಕತ್ತಾ, ಹೈದರಾಬಾದ್, ಮುಂಬೈ, ಭೋಪಾಲ್, ದೆಹಲಿ, ನಾಗ್ಪುರ ಮತ್ತು ಪಂಜಾಬ್ ನಲ್ಲಿ ಈ ನಿವೃತ್ತಿ ಮನೆಗಳ ಯೋಜನೆ ಸದ್ಯದಲ್ಲೇ ಜಾರಿಗೆ ಬರಲಿದೆ.

ಸಾಮಾನ್ಯ ಅಪಾರ್ಟ್ ಮೆಂಟ್ ಗಳಿಗೂ ಈ ಅಪಾರ್ಟ್ ಮೆಂಟ್ ಗಳಿಗೂ ಏನು ವ್ಯತ್ಯಾಸ?
ಜೈಶಂಕರ್- ಸಾಮಾನ್ಯ ಅಪಾರ್ಟ್ ಮೆಂಟ್ ಗಿಂತ ಭಿನ್ನವಾಗಿ ಈ ನಿವಾಸಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇಲ್ಲಿ ವಾಸ ಮಾಡುವ ಹಿರಿಯ ನಾಗರಿಕರಿಗೆ ಪ್ರಮುಖವಾಗಿ ಭದ್ರತೆ ಒದಗಿಸುವ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಹಿರಿಯ ನಾಗರಿಕರ ಅನುಕೂಲಕ್ಕೆ ಅನುಗುಣವಾಗಿ ಪಾದಚಾರಿ ಮಾರ್ಗಗಳು, ಸುಂದರ ಉದ್ಯಾನವನಗಳು, ಜಿಮ್ ಗಳನ್ನು ನಿರ್ಮಿಸಲಾಗುತ್ತದೆ. ನಿರಂತರವಾಗಿ ಜನಸಾಮಾನ್ಯರ ಜೊತೆ ಬೆರೆಯುವಂತಹ ವ್ಯವಸ್ಥೆ ಹಾಗೂ ತುರ್ತು ಸೇವೆಗಳೂ ಇಲ್ಲಿ ಸಿಗುತ್ತದೆ.

ಈ ನಿವೃತ್ತಿ ಮನೆ ಯೋಜನೆ ಯಾವ ತರಹದ ಮಾದರಿಯಲ್ಲಿ ಇರುತ್ತದೆ?
ಒಬ್ಬರು ಅಥವಾ ಇಬ್ಬರು ಜೀವನ ಸಾಗಿಸುವಂತಹ ರೀತಿಯಲ್ಲಿ ಈ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅಪಾರ್ಟ್ ಮೆಂಟ್ ಗಳಲ್ಲಿ ಸಿಂಗಲ್ ಬೆಡ್ ರೂ, ಡಬ್ಬಲ್ ಬೆಡ್ ರೂ ಮತ್ತು ತ್ರಿಬಲ್ ಬೆಡ್ ರೂಂ ಇರುತ್ತವೆ. ಇವುಗಳ ವಿಸ್ತೀರ್ಣ 500 ಚದರಡಿಯಿಂದ 2500 ಚದರಡಿವರೆಗೆ ಇರಲಿದೆ. ಪಾರ್ಕ್ ಸೈಡ್ ನಲ್ಲಿನ ಅಪಾರ್ಟ್ ಮೆಂಟ್ ಗಳು 1050 ಚದರಡಿಯಿಂದ 1450 ಚದರಡಿವರೆಗೆ ವಿಸ್ತೀರ್ಣ ಹೊಂದಿರುತ್ತವೆ.

ಇಂತಹ ನಿವೃತ್ತಿ ನಿವಾಸಗಳಿಗೆ ಏಕೆ ಇಷ್ಟೊಂದು ಬೇಡಿಕೆ ಇದೆ?
ಈಗಿನ ಪೀಳಿಗೆ ಸಣ್ಣಸಣ್ಣ ಕುಟುಂಬಗಳನ್ನು ಬಯಸುತ್ತದೆ. ಯುವ ಜನಾಂಗ ತಮ್ಮ ಕುಟುಂಬದಿಂದ ದೂರ ಉಳಿದು ಸ್ವತಂತ್ರ ಜೀವನವನ್ನು ನಡೆಸುವುದನ್ನು ಬಯಸುತ್ತಾರೆ. ಒಂದೇ ಊರಿನಲ್ಲಿ ತಂದೆ ತಾಯಿ ಇದ್ದರೂ ಈಗಿನ ಯುವಕರು ಪ್ರತ್ಯೇಕ ಜೀವನ ಬಯಸುತ್ತಾರೆ. ಹೀಗಾಗಿ ಬಹುತೇಕ ಹಿರಿಯ ನಾಗರಿಕರು ತಮ್ಮ ಮಕ್ಕಳು ಸೇರಿದಂತೆ ಇತರರ ಅವಲಂಬನೆ ಮೇಲೆ ಬದುಕುವುದನ್ನು ಇಷ್ಟಪಡುವುದಿಲ್ಲ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು ತಾವು ಪ್ರತ್ಯೇಕವಾದ ಜೀವನ ಸಾಗಿಸಲು ಬಯಸುವುದರಿಂದ ಈ ನಿವೃತ್ತಿ ನಿವಾಸಗಳಿಗೆ ಹೆಚ್ಚಿನ ಬೇಡಿಕೆ ಬರತೊಡಗಿದೆ.

Parkside retirement homes at Devanahalli

ಈ ನಿವೃತ್ತಿ ಮನೆಗಳ ವೈಶಿಷ್ಟ್ಯಗಳೇನು?
ಈ ಮನೆಗಳಲ್ಲಿ ಅತ್ಯಂತ ಕಡಿಮೆ ಮೆಟ್ಟಿಲುಗಳಿರುತ್ತವೆ. ವ್ಹೀಲ್ ಚೇರ್ ಗಳನ್ನು ಬಳಸಲು ಅವಕಾಶವಾಗುವ ರೀತಿಯಲ್ಲಿ ಅಗಲವಾದ ಬಾಗಿಲುಗಳಿರುತ್ತವೆ. ನೆಲ ಗಡುಸಾಗಿದ್ದು, ಹಿರಿಯ ನಾಗರಿಕರು ಜಾರಿ ಬೀಳುವ ಸಾಧ್ಯತೆಗಳು ಕಡಿಮೆ ಇರುತ್ತವೆ. ಇದರ ಜತೆಗೆ ಸ್ಕಿಡ್ ಆಗದ ರೀತಿಯ ಟೌನ್ ಶಿಪ್ ಗಳನ್ನು ಬಳಸಲಾಗುತ್ತದೆ. ಬಾತ್ ರೂಂ, ಶೌಚಾಲಯ ಸೇರಿದಂತೆ ಅಗತ್ಯ ಇರುವ ಕಡೆ ಹಿರಿಯ ನಾಗರಿಕರ ಆಸರೆಗೆಂದು ಕಬ್ಬಿಣದ ರಾಡ್ ಗಳನ್ನು ಅಳವಡಿಸಲಾಗುತ್ತದೆ. ಮನೆಯ ಪ್ರತಿಯೊಂದು ಕೋಣೆಯಲ್ಲೂ ತುರ್ತು ಕರೆ ಮಾಡಲು ಸ್ವಿಚ್ ಅಳವಡಿಸಲಾಗಿರುತ್ತದೆ. ತಮ್ಮ ಅಗತ್ಯ ಪದಾರ್ಥಗಳನ್ನು ಖರೀದಿಸಲೆಂದು ಹಿರಿಯ ನಾಗರಿಕರು ಬಹುದೂರ ಹೋಗುವ ಅಗತ್ಯವಿಲ್ಲ. ಇದೇ ವಸತಿ ಸಮುಚ್ಚಯದಲ್ಲಿ ಔಷಧ, ದಿನಸಿ ಪದಾರ್ಥಗಳು, ಸಾರಿಗೆ ವ್ಯವಸ್ಥೆ ಸೇರಿದಂತೆ ಮತ್ತಿತರೆ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಬ್ರಿಗೇಡ್ ಪಾರ್ಕ್ ಸೈಡ್ ಅಪಾರ್ಟ್ ಮೆಂಟ್ ಬಗ್ಗೆ ಮಾಹಿತಿ ನೀಡಿ?
ನಿವೃತ್ತರ ಬೇಡಿಕೆಯನ್ನು ಗಮನಿಸಿ ಬ್ರಿಗೇಡ್ ಆರ್ಚರ್ಡ್‍ನಲ್ಲಿ ಅವರಿಗಾಗಿ ಪಾರ್ಕ್ ಸೈಡ್ ಅಪಾರ್ಟ್ ಮೆಂಟ್ ನಿರ್ಮಾಣ ಮಾಡಲಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದ ದೇವನಹಳ್ಳಿಯಲ್ಲಿ 130 ಎಕರೆ ಪ್ರದೇಶದಲ್ಲಿ ಈ ಟೌನ್ ಶಿಪ್ ಅನ್ನು ಬ್ರಿಗೇಡ್ ಗ್ರೂಪ್ ನಿರ್ಮಾಣ ಮಾಡುತ್ತಿದೆ.

ಪಾರ್ಲ್ ಸೈಡ್ ನಲ್ಲಿ 1050 ಚದರಡಿಯಿಂದ 1450 ಚದರಡಿವರೆಗಿನ 156 ಮನೆಗಳು ನಿರ್ಮಾಣವಾಗುತ್ತಿವೆ. ಇಲ್ಲಿ ಸಿಂಗಲ್ ಮತ್ತು ಡಬಲ್ ಬೆಡ್ ರೂಂಗಳ ಮನೆ ತಯಾರಾಗುತ್ತಿದೆ. ಏಜ್ ವೆಂಚರ್ ಇಂಡಿಯಾ (ಎವಿಐ) ದೊಂದಿಗೆ ಬ್ರಿಗೇಡ್ ಗ್ರೂಪ್ ಹೆಲ್ಪ್ ಏಜ್ ಇಂಡಿಯಾ ಸಹಯೋಗದೊಂದಿಗೆ ಈ ನಿವೃತ್ತಿ ಮನೆಗಳನ್ನು ನಿರ್ಮಾಣ ಮಾಡುತ್ತಿದೆ.

ಬ್ರಿಗೇಡ್ ಆರ್ಚರ್ಡ್ಸ್ ಪಾರ್ಕ್ ಸೈಡ್ ವಿಶೇಷತೆಗಳೇನು?
ಆರಾಮದಾಯಕ ವಾತಾವರಣ ನಿರ್ಮಾಣವಾಗುವ ರೀತಿಯಲ್ಲಿ ಬ್ರಿಗೇಡ್ ಆರ್ಚಡ್ರ್ಸ್‍ನ ಪಾರ್ಕ್ ಸೈಡನ್ನು ನಿರ್ಮಿಸಲಾಗುತ್ತಿದೆ. ಇಲ್ಲಿನ ಮನೆಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗಾಳಿ, ನೀರು, ಬೆಳಕು ಸಿಗುವಂತಹ ರೀತಿಯಲ್ಲಿವೆ. (ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ Mr.Mathew Abraham: 080-40467600 or visit www.brigadegroup.com)

English summary
There is a huge demand- supply gap and therefore an urgent need to address the needs of retired folks and senior citizens in India, says Mr M R Jaishankar, Chairman & Managing Director, Brigade Group in an exclusive interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X