ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಜೆ ಜಾರ್ಜ್‌ ನಾಲಾಯಕ್‌ ಗೃಹಮಂತ್ರಿ: ಕರಂದ್ಲಾಜೆ

By Ashwath
|
Google Oneindia Kannada News

ನವದೆಹಲಿ, ಜು.17: ಕೆ.ಜೆ ಜಾರ್ಜ್‌ ನಾಲಾಯಕ್‌ ಗೃಹಮಂತ್ರಿ. ರಾಜ್ಯ ಸರ್ಕಾರ ಮಹಿಳೆಯರ ಪಾಲಿಗೆ ಸತ್ತು ಹೋಗಿದೆ.

ಅತ್ಯಾಚಾರ ಪ್ರಕರಣವನ್ನು ನಿಯಂತ್ರಿಸಲು ವಿಫಲವಾದ ರಾಜ್ಯ ಸರ್ಕಾರ ವಿರುದ್ಧ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಾಂದ್ಲಜೆ ಆಕ್ರೋಶ ವ್ಯಕ್ತಪಡಿಸಿದ ಪರಿಯಿದು.

ನವದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ, ರಾಜ್ಯ ಸರ್ಕಾರ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಕಾರಣ ಈಗ ಸರಣಿ ಅತ್ಯಾಚಾರಗಳಾಗುತ್ತಿವೆ. ಹಿಂದೆ ಬಿಹಾರ, ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಾಖಲಾಗುತಿತ್ತು. ಈಗ ಕರ್ನಾಟಕ ಅತ್ಯಾಚಾರ ಪ್ರಕರಣಗಳಲ್ಲಿ ಈ ರಾಜ್ಯಗಳನ್ನು ಮೀರಿಸುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.[ಫ್ರೇಜರ್ ಟೌನ್ ಪ್ರಕರಣ: ಇನ್ಸ್ ಪೆಕ್ಟರ್ ಮೇಲೆ ಎಫ್ಐಆರ್]

Shobha Karandlaje
ರಾಜ್ಯ ಸರ್ಕಾರದ ಕಲಾಪಗಳನ್ನು ನಾನು ಮಾಧ್ಯಮದಗಳಲ್ಲಿ ನೋಡುತ್ತಿದ್ದೆನೆ. ಅತ್ಯಾಚಾರದಂತಹ ಗಂಭೀರವಾದ ವಿಷಯದ ಬಗ್ಗೆ ಸದನದಲ್ಲಿ ಚರ್ಚೆ ಆಗುತ್ತಿದ್ದರೆ, ಗೃಹ ಸಚಿವ ಕೆ. ಜೆ. ಜಾರ್ಜ್‌ ನಗುತ್ತಿದ್ದಾರೆ. ಬಿಸಿನೆಸ್‌ ವ್ಯಕ್ತಿಯನ್ನು ಗೃಹ ಸಚಿವರಾಗಿ ನೇಮಕ ಮಾಡಿದ್ದರ ಫಲವಿದು ಎಂದು ಗೃಹ ಸಚಿವರ ವಿರುದ್ಧ ಕಿಡಿ ಕಾರಿದರು.[ಸದನದಲ್ಲಿ ಸಹನೆ ಕಳೆದುಕೊಂಡ ಗೃಹ ಸಚಿವ ಜಾರ್ಜ್]

ಸೇವೆಯಿಂದ ಅಮಾನತಾದ ಪುಲಿಕೇಶಿನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ರಫೀಕ್‌ ನಾಪತ್ತೆಯಾಗಿದ್ದು, ಕರೆ ಮಾಡಿದ್ದರೆ ನಾಟ್‌ ರಿಚೆಬಲ್ ಆಗಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ರಫೀಕ್‌ ಬಂಧಿಸಲು ಸಾಧ್ಯವಾಗದ ಸರ್ಕಾರಕ್ಕೆ ನಾಚಿಕೆಯಾಗಬೇಕು. ಜನರಿಗೆ ಸರ್ಕಾರ ನಾಟ್‌ ರಿಚೆಬಲ್ ಆಗಿದೆ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.[ಎಸ್‌ಐ ರಫೀಕ್‌ ಅಮಾನತು ಆಗಿದ್ದು ಯಾಕೆ?]

ಹಿಂದುಳಿದ ವರ್ಗದವರ, ಶೋಷಿತರ ಸಮಸ್ಯೆಗಳಿಗೆ ಸ್ಪಂದಿಸುವ ಮುಖ್ಯಮಂತ್ರಿಗಳು ಈ ಪ್ರಕರಣಗಳ ಬಗ್ಗೆ ಏನು ಮಾತಡಿಲ್ಲ. ಇಷ್ಟೆಲ್ಲಾ ಸುದ್ದಿಯಾಗಿದ್ದರೂ ಮೌನವಾಗಿ ಕುಳಿತಿರುವುದು ಏಕೆ ಎಂದು ಶೋಭಾ ಕರಾಂದ್ಲಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

English summary
Shobha Karandlaje blamed Congress government for the increase in number of rape cases in the Karnatka. She said "governmet is dead". She called "Home Minister K J George unfit to be home Minister"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X