ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಫೀಡರ್ 'ಚಕ್ರ' ಬಸ್ ಇನ್ನಷ್ಟು ವಿಸ್ತರಣೆ

By Mahesh
|
Google Oneindia Kannada News

ಬೆಂಗಳೂರು, ಜು.12: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ರೌಂಡ್ ಟ್ರಿಪ್ ಹೊಡೆಯುವ ಫೀಡರ್ ಸೇವೆ ಚಕ್ರ ಬಸ್ ಸಾರಿಗೆ ಸೇವೆಯನ್ನು ನಗರದ ಇನ್ನಷ್ಟು ಭಾಗಗಳಿಗೆ ವಿಸ್ತರಿಸಲಾಗಿದೆ. ಕೋರಮಂಗಲ, ಶಿವಾಜಿನಗರ, ಬನಶಂಕರಿ ಮುಂತಾದ ಕಡೆ ಸಂಪರ್ಕ ಸಾಧಿಸುವ ಹೊಸ ಬಸ್ ಮಾರ್ಗಗಳನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶನಿವಾರ ಉದ್ಘಾಟಿಸಿದರು.

ಮೊದಲ ಹಂತದಲ್ಲಿ ಬನಶಂಕರಿ ಟಿಟಿಎಂಸಿ, ವಿಜಯನಗರ ಟಿಟಿಎಂಸಿ ಹಾಗೂ ಸಿಟಿ ಸಿವಿಲ್ ಕೋರ್ಟ್ ಪ್ರದೇಶಕ್ಕೆ ಸಂಪರ್ಕ ಸಾಧಿಸುವ ಚಕ್ರ 'ಮಿಡಿ' ಬಸ್ ಗಳನ್ನು ಓಡಿಸಲಾಯಿತು. ಬನಶಂಕರಿ ಮಾರ್ಗದ ಚಕ್ರ 3 ಹಾಗೂ 3A, ವಿಜಯನಗರ ಮಾರ್ಗದ ಚಕ್ರ 4 ಹಾಗೂ 4A ಹಾಗೂ ಸಿಟಿ ಸಿವಿಲ್ ಕೋರ್ಟ್ ಮಾರ್ಗದ ಚಕ್ರ 6 ಹಾಗೂ 6 A ಬಸ್ ಗಳ ನಂತರ ಚಕ್ರ ಸರಣಿಯ ಹೊಸ ಬಸ್ ಗಳನ್ನು ಶನಿವಾರ ರಸ್ತೆಗಿಳಿಸಲಾಗಿದೆ.

ಇದಕ್ಕೂ ಮುನ್ನ ಕೋರಮಂಗಲ, ಕೆ.ಆರ್.ಮಾರುಕಟ್ಟೆ ನಡುವೆ 163ಜಿ ಮತ್ತು 163ಕೆ ಎಂಬ ನೂತನ ಮಾರ್ಗಗಳನ್ನು ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಫರ್ವೇಜ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋರಮಂಗಲದಿಂದ ಜಾನ್‌ಫ್ಲೊವರ್, ಕೋರಮಂಗಲದ ವಾಟರ್ ಟ್ಯಾಂಕ್, ಕೋರಮಂಗಲದ ಕಲ್ಯಾಣಮಂಟಪ, ಆಡುಗೋಡಿ, ವಿಲ್ಸನ್‌ಗಾರ್ಡ್‌ನ್ ಪೊಲೀಸ್ ಠಾಣೆ, ಲಾಲ್‌ಬಾಗ್ ಮೇನ್ ಗೇಟ್ ಮೂಲಕ ಕೆ.ಆರ್.ಮಾರುಕಟ್ಟೆಯನ್ನು 163ಜಿ ಬಸ್ ತಲುಪಲಿದೆ. 163ಕೆ ಬಸ್ ಕೋರಮಂಗಲದಿಂದ ಆಡುಗೋಡಿ,ಶೋಲೆ ಸರ್ಕಲ್, ಕಾರ್ಪೋರೇಷನ್ ಮೂಲಕ ಕೆ.ಆರ್.ಮಾರುಕಟ್ಟೆ ತಲುಪಲಿದೆ.

ಚಕ್ರ ಮಾರ್ಗ ಸಾರಿಗೆ 7: ಬನಶಂಕರಿಯಿಂದ ಜಯನಗರ ಬಸ್ ನಿಲ್ದಾಣ, ಕಾರ್ಮಲ್ ಕಾನ್ವೆಂಟ್, ಡೈರಿ ವೃತ್ತ, ಹೊಸೂರು ರಸ್ತೆ, ಆಡುಗೋಡಿ ಮೈಕೋ ಗೇಟ್, ವಿಲ್ಸನ್‌ಗಾರ್ಡ್‌ನ್, ಲಾಲ್‌ಬಾಗ್ ಮೇನ್ ಗೇಟ್, ವಿಜಯ ಕಾಲೇಜು, ಜಯನಗರದಿಂದ ಬನಶಂಕರಿ ತಲುಪಲಿದೆ.

ಚಕ್ರ ಮಾರ್ಗ ಸಾರಿಗೆ : 7ಎ ಬಸ್ ಬನಶಂಕರಿಯಿಂದ ಜಯನಗರ ಬಸ್ ನಿಲ್ದಾಣ, ಸೌತ್‌ ಎಂಡ್ ಸರ್ಕಲ್, ಲಾಲ್‌ಬಾಗ್ ಮೇನ್‌ಗೇಟ್, ಆಡುಗೋಡಿ ಮೈಕೋಗೇಟ್, ವಿಲ್ಸನ್‌ ಗಾರ್ಡನ್ ಪೊಲೀಸ್ ಠಾಣೆ, ವಿಜಯ ಕಾಲೇಜು, ಜಯನಗರ ಬಸ್ ನಿಲ್ದಾಣದಿಂದ ಬನಶಂಕರಿ ತಲುಪಲಿದೆ.

ಚಕ್ರ ಮಾರ್ಗ ಸಾರಿಗೆ : 2- ಬನಶಂಕರಿ, ಕುಮಾರಸ್ವಾಮಿ ಲೇಔಟ್, ವಸಂತಪುರ, ಉತ್ತರಹಳ್ಳಿ, ಕದಿರೇನಹಳ್ಳಿ, ಮೋನೊಟೈಪ್ ತಲುಪಲಿದೆ.

ಚಕ್ರ ಮಾರ್ಗ ಸಾರಿಗೆ-3- ಬಸ್ ಬನಶಂಕರಿಯಿಂದ ಕುಮಾರಸ್ವಾಮಿ ಲೇಔಟ್, ಇಸ್ರೋಲೇಔಟ್, ಉತ್ತರಹಳ್ಳಿ, ಚನ್ನಸಂದ್ರ, ರಾಜರಾಜೇಶ್ವರಿ ದೇವಸ್ಥಾನ, ಪಂತರಪಾಳ್ಯ, ಪಿಇಎಸ್ ಕಾಲೇಜು, ಕತ್ರಿಗುಪ್ಪೆ, ಕದಿರೇನಹಳ್ಳಿ ಮೂಲಕ ಸಂಚರಿಸಲಿವೆ.

ಚಕ್ರ ಮಾರ್ಗ ಸಾರಿಗೆ-4 ಮತ್ತು 4ಎ ಬಸ್ :ವಿಜಯನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ಶ್ರೀನಿವಾಸನಗರ, ಮಾಳಗಾಳ, ಬಿಡಿಎ ಕಾಂಪ್ಲೆಕ್ಸ್, ಅನ್ನಪೂರ್ಣೇಶ್ವರಿನಗರ, ಮುದ್ದೇನಪಾಳ್ಯ, ಮಲ್ಲತ್ತಳ್ಳಿ ಕ್ರಾಸ್, ಪಾಪರೆಡ್ಡಿಪಾಳ್ಯ, ನಾಗರಬಾವಿ ವೃತ್ತ, ಚಂದ್ರಾಲೇಔಟ್ ಮೂಲಕ ವಾಪಾಸಾಗಲಿದೆ.

ಚಕ್ರ ಮಾರ್ಗ ಸಾರಿಗೆ-6 ಮತ್ತು 6A ಬಸ್ : ಸಿಟಿ ಸಿವಿಲ್ ನ್ಯಾಯಾಲಯದಿಂದ ಕೆ.ಆರ್.ವೃತ್ತ, ಕಾರ್ಪೊರೇಷನ್, ಮಿಷನ್‌ರಸ್ತೆ, ಊವರ್ಶಿ ಚಿತ್ರಮಂದಿರ, ಶಾಂತಿನಗರ, ರಿಚ್‌ಮಂಡ್‌ವೃತ್ತ, ಮೇಯೋಹಾಲ್, ಶಿವಾಜಿನಗರ ಬಸ್ ನಿಲ್ದಾಣ, ಇಂಡಿಯನ್ ಎಕ್ಸ್‌ಪ್ರೆಸ್, ಹೈಕೋರ್ಟ್, ಕೆ.ಆರ್.ಸರ್ಕಲ್ ಮೂಲಕ ಮತ್ತೆ ಸಿಟಿ ಸಿವಿಲ್‌ಕೋರ್ಟ್ ತಲುಪಲಿದೆ.

English summary
The Bangalore Metropolitan Transport Corporation (BMTC) recently introduced Chakra (round-trip) feeder services from three centres — Banashankari TTMC, Vijayanagar TTMC and City Civl Court has been extended to Jayanagar and other areas said Transport Minister Ramalinga Reddy after inaugurating new routes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X