ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಮೇಥಿಯಲ್ಲಿ ನಮ್ಮ ಕುಟುಂಬದ ಹೃದಯವಿದೆ'

By Mahesh
|
Google Oneindia Kannada News

ಅಮೇಥಿ, ಏ.26: ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಗುಡುಗುತ್ತಿದ್ದ ಪ್ರಿಯಾಂಕಾ ಗಾಂಧಿ ವಾಧ್ರಾ ಅವರು ಶನಿವಾರ ತಮ್ಮ ಸೋದರನ ಗುಣಗಾನ ಮಾಡಿದರು. ಅಮೇಥಿಯಲ್ಲಿ ಚುನಾವಣಾ ಪ್ರಚಾರ ಪ್ರಿಯಾಂಕಾ ಅವರು ಭರ್ಜರಿ ಭಾಷಣ ಮಾಡಿ, 'ಇಲ್ಲಿನ ಜನ ಏನಾದರೂ ನಿರ್ಣಯ ಕೈಗೊಳ್ಳಲಿ, ನಮ್ಮನ್ನು ದೂರ ಮಾಡಲಿ, ನಮ್ಮ ಕುಟುಂಬದ ಹೃದಯ ಈ ಕ್ಷೇತ್ರದಲ್ಲೇ ನೆಲೆಗೊಂಡಿದೆ' ಎಂದರು.

ಮೋದಿ ಅವರು ಸಾವಿರಾರು ಎಕರೆ ಜಮೀನನ್ನು 'ಜುಜುಬಿ ಕಾಸಿಗೆ' ತಮ್ಮ ಸ್ನೇಹಿತರಿಗೆ ನೀಡಿದ್ದಾರೆ. ಮೋದಿ ಈ ದೇಶವನ್ನು ಒಂದು 'ತರಗತಿ ಕೋಣೆ'ಯಂತೆ ಭಾವಿಸಿದ್ದಾರೆ ಎಂದು ಆರೋಪಿಸಿದ್ದರು. 'ಕಬಿ ಎಬಿಸಿಡಿ, ಕಬಿ ಆರ್ ‌ಎಸ್ ‌ವಿಪಿ. ಔರ್ ಕಬಿ ದಾ ಸೇ ದೇಶ್ ಔರ್ ಕಾ ಸೇ ಕೌವ್ವಾ. ಬ ಸೇ ಬಂದ್ ಭಿ ತೊ ಕರಿಯೇ' ಎಂದು ಅವರು ಮೋದಿ ಅವರನ್ನು ಲೇವಡಿ ಮಾಡಿದ್ದರು.

ಆದರೆ, ಅಮೇಥಿಯಲ್ಲಿಂದು ಪ್ರಿಯಾಂಕಾ ಗಾಂಧಿ ಭಾಷಣ ರಾಹುಲ್ ಗಾಂಧಿ ಹೊಗಳಿಕೆಗೆ ಮೀಸಲಾಗಿತ್ತು. ತಮ್ಮ ತಾಯಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪರವಾಗಿ ರಾಯ್ ‌ಬರೇಲಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ನಂತರ ಪ್ರಿಯಾಂಕಾ ಗಾಂಧಿ ಅವರು ಎರಡು ದಿನಗಳ ಕಾಲ ಅಮೇಥಿಯಲ್ಲಿ ರಾಹುಲ್ ಪರ ಮತಯಾಚಿಸುತ್ತಿದ್ದಾರೆ. ಸೋದರನ ಪರ ಪ್ರಚಾರ ನಿರತ ಪ್ರಿಯಾಂಕಾ ಅವರು ಹೇಳಿದ್ದೇನು? ಮುಂದೆ ಓದಿ...

ರಾಜೀವ್ ಗಾಂಧಿ ಸ್ಮರಿಸಿದ ಪ್ರಿಯಾಂಕಾ

ರಾಜೀವ್ ಗಾಂಧಿ ಸ್ಮರಿಸಿದ ಪ್ರಿಯಾಂಕಾ

* ರಾಜೀವ್ ಗಾಂಧಿ ಅವರು ಕಂಪ್ಯೂಟರ್ ಬಗ್ಗೆ ಮೊದಲಿಗೆ ಮಾತನಾಡಿದಾಗ ಎಂಥಾ ವಿರೋಧ ವ್ಯಕ್ತವಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಮುಂದೆ ನಡೆದ ಸಂವಹನ ಕ್ರಾಂತಿ ದೇಶದ ಸ್ಥಿತಿ ಬದಲಿಸಿದೆ.
* ರಾಜೀವ್ ಗಾಂಧಿ ಅವರನ್ನು ಅಂದು ಬೈಯ್ದ ಜನರೇ ಇಂದು ರಾಹುಲ್ ಗಾಂಧಿಯನ್ನು ಹೀಯಾಳಿಸಿದ್ದಾರೆ ಆದರೆ, ಜನರಿಗೆ ನಾವೇನು ಎಂಬುದು ಚೆನ್ನಾಗಿ ಗೊತ್ತಿದೆ.
* ಇಲ್ಲಿನ ಜನತೆ ನಮ್ಮನ್ನು ದೂರ ಮಾಡಿದರೂ ಚಿಂತೆಯಿಲ್ಲ. ನಮ್ಮ ಕುಟುಂಬದ ಹೃದಯ ಇಲ್ಲೇ ನೆಲೆಸಿದೆ.
* ರಾಹುಲ್ ಇಲ್ಲಿ ಅನೇಕ ಕೇಂದ್ರಿಯ ವಿದ್ಯಾಲಯಗಳನ್ನು ಸ್ಥಾಪಿಸಿದ್ದಾರೆ.

ಕ್ಷೀರಕ್ರಾಂತಿ ಹರಿಕಾರ ರಾಹುಲ್ ಗಾಂಧಿ

ಕ್ಷೀರಕ್ರಾಂತಿ ಹರಿಕಾರ ರಾಹುಲ್ ಗಾಂಧಿ

* ಅಮೇಥಿಯಲ್ಲಿ ರಾಹುಲ್ ಕ್ಷೀರ ಕ್ರಾಂತಿಗೆ ಕಾರಣರಾಗಿದ್ದಾರೆ. ಈಗ ಮದರ್ ಡೈರಿಗೆ ಇಲ್ಲಿಂದ ಹಾಲು ಸರಬರಾಜಾಗುತ್ತಿದೆ. ಭಾರತದೆಲ್ಲೆಡೆ ಈ ಕ್ರಾಂತಿಗೆ ರಾಹುಲ್ ಗಾಂಧಿ ಕಾರಣ.
* ರಾಹುಲ್ ಗಾಂಧಿ ಅವರು ಅಮೇಥಿಯನ್ನು ಭಾರತದ ಇತರೆಡೆಗೆ ಸಂಪರ್ಕ ಒದಗಿಸಲು ಶ್ರಮಿಸಿದ್ದಾರೆ. ರಸ್ತೆ, ರೈಲ್ವೆ ಸಂಪರ್ಕ ಒದಗಿಸಿದ್ದಾರೆ.
* 1999ರಲ್ಲಿ ತಂದೆ ನಿಧನ ನಂತರ ನನ್ನ ಪಾಲಿಗೆ ಅಮೇಥಿಯಲ್ಲಿ ಸ್ಪರ್ಧಿಸಲು ಚಿಂತಿಸಿದ್ದು ನಿಜ.

ಇಲ್ಲಿನ ಜನಕ್ಕೆ ಡ್ರಾಮಾ, ರಿಯಾಲಿಟಿ ಗೊತ್ತಿದೆ

ಇಲ್ಲಿನ ಜನಕ್ಕೆ ಡ್ರಾಮಾ, ರಿಯಾಲಿಟಿ ಗೊತ್ತಿದೆ

* ಇಲ್ಲಿನ ಜನಕ್ಕೆ ಡ್ರಾಮಾ, ರಿಯಾಲಿಟಿ ಗೊತ್ತಿದೆ ನಾವೇನು ಹೆಚ್ಚಿಗೆ ಹೇಳಬೇಕಾಗಿಲ್ಲ.
* ಅಮೇಥಿಗೆ ಬರುವುದೆಂದರೆ ಪವಿತ್ರ ಸ್ಥಳಕ್ಕೆ ಕಾಲಿಟ್ಟಂತೆ : ಪ್ರಿಯಾಂಕಾ ಗಾಂಧಿ.

ಸ್ಮೃತಿ ಇರಾನಿ ವಿರುದ್ಧ ವಾಗ್ದಾಳಿ

ಸ್ಮೃತಿ ಇರಾನಿ ವಿರುದ್ಧ ವಾಗ್ದಾಳಿ

ಹೊರಗಿನಿಂದ ಬಂದವರಿಗೆ ಇಲ್ಲಿನ ಸಮಸ್ಯೆ ಬಗ್ಗೆ ಏನು ತಿಳಿದಿದೆ. ಚಾಂದಿನಿ ಚೌಕ್ ನಲ್ಲಿರಬೇಕಾದವರು ಇಲ್ಲಿ ಬಂದು ಏನು ಮಾಡುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಸ್ಮೃತ್ ಇರಾನಿ ವಿರುದ್ಧ ವಾಗ್ದಾಳಿ ನಡೆಸಿದರು.

ಹೈದರಾಬಾದಿನಲ್ಲಿ ರಾಹುಲ್ ಗಾಂಧಿ

ಹೈದರಾಬಾದಿನಲ್ಲಿ ರಾಹುಲ್ ಗಾಂಧಿ

ಹೈದರಾಬಾದಿನಲ್ಲಿ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರ ನಡೆಸಿ ತೆಲಂಗಾಣ ರಚನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ ನಿಂದ ಕೊಡುಗೆಗಳ ಮಹಾಪೂರ ಸಿಗಲಿದೆ ಎಂದಿದ್ದಾರೆ.

English summary
We brought the milk revolution here in Amethi. He built roads, railway tracks so that Amethi could connect to the rest of India said Priyanka Gandhi Vadra during her election campaign for Rahul Gandhi today(Apr.26).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X