ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕ್ಲೋಸ್ ಹೊಡೆದ್ರೆ ಗೋಲು, ಜರ್ಮನಿಗಿಲ್ಲ ಸೋಲು

By Mahesh

ಬೆಲೊ ಹಾರಿಜಾಂಟೆ, ಜು.9: ಜರ್ಮನಿಯ ಹಿರಿಯ ಸ್ಟ್ರೈಕರ್ ಮಿರೊಸ್ಲಾವ್ ಕ್ಲೋಸ್ ಈ ಬಾರಿಯ ವಿಶ್ವಕಪ್ ನಲ್ಲಿ ಕೊನೆಗೂ ಬ್ರೆಜಿಲ್ಲಿನ ದಿಗ್ಗಜ ರೊನಾಲ್ಡೊ ದಾಖಲೆಯನ್ನು ಮುರಿದಿದ್ದಾರೆ. ಆದರೆ, ಎಂದಿನಂತೆ ಪಲ್ಟಿ ಹೊಡೆದು ಗೋಲಿನ ಸಂಭ್ರಮಾಚರಣೆ ಮಾಡದಿದ್ದದ್ದು ವಿಶೇಷ.

ಅತಿಥೇಯ ಬ್ರೆಜಿಲ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು ಹಿಗ್ಗಾಮುಗ್ಗಾ ಸೋಲಿಸುವಲ್ಲಿ ಕ್ಲೋಸ್ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ 23ನೇ ನಿಮಿಷದಲ್ಲಿ ಹೊಡೆದ ಗೋಲಿನ ಮೂಲಕ ವಿಶ್ವಕಪ್ ನಲ್ಲಿ ಒಟ್ಟು 16 ಗೋಲ್​ ಹೊಡೆಯುವ ಮೂಲಕ ಅತಿಹೆಚ್ಚು ಗೋಲ್​ ಹೊಡೆದ ಮೊದಲ ಆಟಗಾರನೆಂಬ ದಾಖಲೆ ಬರೆದರು.

ಇದೇ ವಿಶ್ವಕಪ್ ನಲ್ಲಿ ರೊನಾಲ್ಡೊ ದಾಖಲೆ ಸರಿಗಟ್ಟಿದ್ದ ಕ್ಲೋಸ್ ಈ ಪಂದ್ಯದಲ್ಲಿ ದಾಖಲೆ ಮುರಿದರು. ಸಾಮಾನ್ಯವಾಗಿ ಬದಲಿ ಆಟಗಾರನಾಗಿ ಎರಡನೇ ಅವಧಿಯಲ್ಲಿ ಕಾಣಿಸಿಕೊಳ್ಳುವ ಕ್ಲೋಸ್ ಸೆಮೀಸ್ ನಲ್ಲಿ ಪಂದ್ಯದ ಆರಂಭದಿಂದಲೇ ಮುಂಪಡೆ ಸಾರಥ್ಯ ವಹಿಸಿಕೊಂಡಿದ್ದು ವಿಶೇಷ. ವಿಶ್ವಕಪ್ ನ ಅತಿ ಹೆಚ್ಚು ಗೋಲು ದಾಖಲಿಸಿದ ವೀರರ ವಿವರ ಮುಂದಿದೆ ಓದಿ...

ವಿಶ್ವಕಪ್ ನಲ್ಲಿ ಕ್ಲೋಸ್ ಜರ್ಮನಿಯ ಲಕ್ಕಿ ಸ್ಟಾರ್

ವಿಶ್ವಕಪ್ ನಲ್ಲಿ ಕ್ಲೋಸ್ ಜರ್ಮನಿಯ ಲಕ್ಕಿ ಸ್ಟಾರ್

ಈ ಬಾರಿ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಘಾನಾ ವಿರುದ್ಧದ ವಿಶ್ವಕಪ್‌ನ ‘ಜಿ' ಗುಂಪಿನ ಪಂದ್ಯದಲ್ಲಿ ಕ್ಲೋಸ್ ಹೊಡೆದ ಗೋಲ್ ಜರ್ಮನಿಗೆ ಆಸರೆಯಾಗಿತ್ತು. ಬ್ರೆಜಿಲ್ ದಿಗ್ಗಜ ರೊನಾಲ್ಡೊ ದಾಖಲೆ ಸರಿಗಟ್ಟಿ. ಎಂದಿನಂತೆ ಕ್ಲೋಸ್ ಟ್ರೇಡ್ ಮಾರ್ಕ್ ಲಾಗ ಹಾಕಿ ಕುಣಿದಾಡಿದ್ದರು.

ಮಿರೊಸ್ಲಾವ್ ಕ್ಲೋಸ್ ಅದ್ಭುತ ಸಾಧನೆ

ಮಿರೊಸ್ಲಾವ್ ಕ್ಲೋಸ್ ಅದ್ಭುತ ಸಾಧನೆ

2006ರ ವಿಶ್ವಕಪ್‌ನಿಂದ ರೊನಾಲ್ಡೊ ದಾಖಲೆಯತ್ತ ಯಾರೂ ಸುಳಿದಿರಲಿಲ್ಲ. ಇದೀಗ ತನ್ನ ನಾಲ್ಕನೆ ವಿಶ್ವಕಪ್‌ನಲ್ಲಿ ಕ್ಲೋಸ್ ಈ ದಾಖಲೆಯನ್ನು ಮುರಿದರು.

ಅನುಭವಿ ಫಾರ್ವರ್ಡ್ ಆಟಗಾರ ಕ್ಲೋಸ್ 2002ರ ವಿಶ್ವಕಪ್‌ನಲ್ಲಿ 5 ಗೋಲು, 2006ರ ವಿಶ್ವಕಪ್‌ನಲ್ಲಿ 5 ಗೋಲು, 2010ರ ವಿಶ್ವಕಪ್‌ನಲ್ಲಿ ನಾಲ್ಕು ಗೋಲು ಹಾಗೂ ಪ್ರಸ್ತುತ ವಿಶ್ವಕಪ್‌ನಲ್ಲಿ ಎರಡು ಗೋಲು ಬಾರಿಸಿ ರೊನಾಲ್ಡೊ ದಾಖಲೆ ಮುರಿದಿದ್ದಾರೆ.
ಕ್ಲೋಸ್‌ಗೆ ರೊನಾಲ್ಡೊ ಅಭಿನಂದನೆ

ಕ್ಲೋಸ್‌ಗೆ ರೊನಾಲ್ಡೊ ಅಭಿನಂದನೆ

ವಿಶ್ವಕಪ್‌ನಲ್ಲಿ ತಾನು ದಾಖಲಿಸಿದ್ದ 16 ಗೋಲುಗಳ ದಾಖಲೆಯನ್ನು ಸರಿಗಟ್ಟಿದ ಜರ್ಮನಿ ಆಟಗಾರ ಮಿರೊಸ್ಲಾವ್ ಕ್ಲೋಸ್‌ಗೆ ಬ್ರೆಜಿಲ್ ನ ಮಾಜಿ ಸ್ಟ್ರೈಕರ್ ರೊನಾಲ್ಡೊ ಅಭಿನಂದಿಸಿದ್ದಾರೆ. 'ನನ್ನ ಕ್ಲಬ್‌ಗೆ ಕ್ಲೋಸ್‌ಗೆ ಸ್ವಾಗತ, ನಾನು ಮಾತ್ರ ನಿಮ್ಮ ಖುಷಿಯನ್ನು ಊಹಿಸಲು ಸಾಧ್ಯ. ನಿಮಗಿದು ಶ್ರೇಷ್ಠ ವಿಶ್ವಕಪ್' ಎಂದು ರೊನಾಲ್ಡೊ ಅಭಿನಂದಿಸಿದ್ದಾರೆ.

ವಿಶ್ವಕಪ್ ನಲ್ಲಿ ಈ ಹಿಂದಿನ ಸಾಧಕರು

ವಿಶ್ವಕಪ್ ನಲ್ಲಿ ಈ ಹಿಂದಿನ ಸಾಧಕರು

* 1958ರಲ್ಲಿ ಫ್ರಾನ್ಸ್‌ನ ಮಾಜಿ ಸ್ಟ್ರೈಕರ್ ಜಸ್ಟ್ ಫೋಂಟೇನ್ (13) ನಿರ್ಮಿಸಿದ್ದ ದಾಖಲೆ ಒಂದೇ ಆವೃತ್ತಿಯಲ್ಲಿ ಮುರಿದುಬಿತ್ತು.
* 1958 ಹಾಗೂ 1970ರ ನಡುವೆ ನಾಲ್ಕು ವಿಶ್ವಕಪ್‌ನಲ್ಲಿ 12 ಗೋಲು ದಾಖಲಿಸಿದ ಬ್ರೆಜಿಲ್ಲಿನ ದಂತಕತೆ ಪೀಲೆ ಈ ಅವಧಿಯಲ್ಲಿ ಮೂರು ವಿಶ್ವಕಪ್‌ನ್ನು ಎತ್ತಿ ಹಿಡಿದಿದ್ದರು.
* ಹಂಗೇರಿಯದ ಸ್ಯಾಂಡರ್ ಕಾಕ್‌ಸಿಸ್, ಜರ್ಮನಿಯ ಹೀರೊ ಜರ್ಜನ್ ಕ್ಲಿನ್ಸ್‌ಮನ್ ತಲಾ 11 ಗೋಲು, ಮತ್ತೋರ್ವ ಜರ್ಮನಿಯ ಹೆಲ್ಮಟ್ ರಾಹನ್, ಇಂಗ್ಲೆಂಡ್‌ನ ಗ್ಯಾರಿ ಲೆನೆಕೆರ್, ಅರ್ಜೆಂಟೀನದ ಗ್ಯಾಬ್ರಿಯೆಲ್ ಬ್ಯಾಟಿಸ್ಟುಟ ತಲಾ 10 ಗೋಲು ದಾಖಲಿಸಿದ್ದಾರೆ.

ಜರ್ಮನಿ ಅಭಿಮಾನಿಗಳ ಸಂಭ್ರಮ

ಜರ್ಮನಿ ಅಭಿಮಾನಿಗಳ ಸಂಭ್ರಮ

ವಿಶ್ವಕಪ್ ನ ಟಾಪ್ 10 ಅತ್ಯಧಿಕ ಗೋಲು ಸ್ಕೋರರ್ ಗಳಲ್ಲಿ ನಾಲ್ವರು ಜರ್ಮನಿ, ಇಬ್ಬರು ಬ್ರೆಜಿಲಿಯನ್, ಫ್ರಾನ್ಸ್, ಹಂಗೇರಿ, ಅರ್ಜೆಂಟಿನಾ, ಇಂಗ್ಲೆಂಡ್, ಪೆರು ಹಾಗೂ ಪೋಲ್ಯಾಂಡ್ ನ ಒಬ್ಬ ಆಟಗಾರರಿದ್ದಾರೆ.

ಗೆರ್ಡ್ ಮುಲ್ಲರ್ ದಾಖಲೆ ಮುರಿದ ಕ್ಲೋಸ್

ಗೆರ್ಡ್ ಮುಲ್ಲರ್ ದಾಖಲೆ ಮುರಿದ ಕ್ಲೋಸ್

ಕ್ಲೋಸ್ ತಮ್ಮದೇ ದೇಶದ ಗೆರ್ಡ್ ಮುಲ್ಲರ್ (14 ಗೋಲು) ಗರಿಷ್ಠ ಗೋಲು ದಾಖಲೆಯನ್ನು ಇದೇ ಹಿಂದೆ ಮುರಿದಿದ್ದರು. ಮುಲ್ಲರ್ 1970 ಹಾಗೂ 1974ರ ವಿಶ್ವಕಪ್‌ನಲ್ಲಿ ಪ್ರತಿ ವಿಶ್ವಕಪ್ ಪಂದ್ಯಗಳಲ್ಲಿ 1.08ರ ಅನುಪಾತದಲ್ಲಿ ಗೋಲು ಬಾರಿಸಿದ್ದರು.ಈಗ ಕ್ಲೋಸ್ ಜರ್ಮನಿ ಅತ್ಯಧಿಕ ಗೋಲು ದಾಖಲಿಸಿದ ಆಟಗಾರ ಎನಿಸಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X