ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚಿತ್ರಗಳಲ್ಲಿ ಕಾಮನ್ ವೆಲ್ತ್ ಪದಕದೊಂದಿಗೆ ಕ್ರೀಡಾಪಟುಗಳು

By Mahesh

ಗ್ಲಾಸ್ಗೋ, ಜು.25: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತನ್ನ ಪದಕ ಬೇಟೆ ಆರಂಭಿಸಿದ್ದು, ಟೂರ್ನಿಯ ಎರಡನೇ ದಿನವೇ ಏಳು ಪದಕವನ್ನು ಬಾಚಿಕೊಂಡಿದೆ. 20ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಬೇಟೆಯ ಜೊತೆಗೆ ಸ್ಪರ್ಧಿಸಿದ ಎಲ್ಲಾ ಕ್ರೀಡೆಗಳಲ್ಲೂ ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ಗೆದ್ದಿದೆ.

ಗುರುವಾರ (ಜು.24) ರಂದು ಭಾರತ ಒಟ್ಟಾರೆ 2 ಚಿನ್ನ, ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದುಕೊಂಡಿದೆ. ವೇಟ್ ಲಿಫ್ಟಿಂಗ್ ನಲ್ಲಿ ನಾಲ್ಕು ಪದಕಗಳು ಬಂದರೆ, 3 ಪದಕಗಳು ಜುಡೋದಲ್ಲಿ ಬಂದಿದೆ. ವೇಟ್ ಲಿಫ್ಟಿಂಗ್ ನಲ್ಲಿ ಕೆ ಸಂಜಿತಾ ಚಾನು ಅವರು ಮೊದಲ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. [ಕ್ರೀಡಾಕೂಟ ವರ್ಣರಂಜಿತ ಆರಂಭ]

ಗೇಮ್ಸ್‌ಗೆ 12 ವರ್ಷಗಳ ನಂತರ ಸೇರ್ಪಡೆಯಾಗಿರುವ ಜುಡೋ ಸ್ಪರ್ಧೆಯಲ್ಲಿ ಪುರುಷರ 60 ಕೆಜಿ ವಿಭಾಗದಲ್ಲಿ ನವಜೋತ್ ಚಾನಾ ಹಾಗೂ ಮಹಿಳೆಯರ ವಿಭಾಗದಲ್ಲಿ ಸುಶೀಲಾ ಲಿಕ್ಮಾಬಾಮ್ (48 ಕೆಜಿ) ಫೈನಲ್‌ಗೆ ತಲುಪಿ ಇಬ್ಬರೂ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು. ಇದಲ್ಲದೆ ಭಾರತದ ಪುರುಷ ಹಾಗೂ ಮಹಿಳಾ ಟೇಬಲ್ ಟೆನಿಸ್ ತಂಡ, ಸ್ಕ್ವಾಷ್ ತಂಡ ಗ್ಲಾಸ್ಗೋ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿವೆ. ಭಾರತದ ಕ್ರೀಡಾಪಟುಗಳ ಸಂಭ್ರಮಾಚಾರಣೆ ಚಿತ್ರಗಳು ನಿಮ್ಮ ಮುಂದೆ...

ಚಿನ್ನದ ಪದಕದೊಂದಿಗೆ ಸಂಜಿತಾ ಕುಮುಕ್ ಚಮ್

ಚಿನ್ನದ ಪದಕದೊಂದಿಗೆ ಸಂಜಿತಾ ಕುಮುಕ್ ಚಮ್

ಗ್ಲಾಸ್ಗೋ: 20ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ವೇಟ್ ಲಿಫ್ಟಿಂಗ್ ನ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಸಂಜಿತಾ ಅವರು ಪದಕವನ್ನು ಪ್ರದರ್ಶಿಸುತ್ತಿದ್ದಾರೆ.

ನವಜ್ಯೋತ್ ಚಾನಗೆ ಬೆಳ್ಳಿ ಪದಕ

ನವಜ್ಯೋತ್ ಚಾನಗೆ ಬೆಳ್ಳಿ ಪದಕ

ಪುರುಷರ ಜುಡೋ 60 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು

ಸುಶೀಲಾ ಲಿಕ್ಮಾಬಾಮ್ ಗೆ ಬೆಳ್ಳಿ ಪದಕ

ಸುಶೀಲಾ ಲಿಕ್ಮಾಬಾಮ್ ಗೆ ಬೆಳ್ಳಿ ಪದಕ

ಸುಶೀಲಾ ಲಿಕ್ಮಾಬಾಮ್ : ಮಹಿಳೆಯರ ಜುಡೋ 48 ಕೆ.ಜಿ ವಿಭಾಗ (ಸ್ಕಾಟ್ಲೆಂಡಿನ ಕಿಂಬರ್ಲಿ ರೆನಿಕ್ಸ್ ವಿರುದ್ಧ ಸೋಲು)

ವೇಟ್ ಲಿಫ್ಟಿಂಗ್ ಪದಕ ವಿಜೇತರು

ವೇಟ್ ಲಿಫ್ಟಿಂಗ್ ಪದಕ ವಿಜೇತರು

48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಸಂಜಿತಾ (ಮಧ್ಯೆ), ಬೆಳ್ಳಿ ಗೆದ್ದ ಭಾರತದ ಚಾನು ಸೈಖೋಮ್(ಎಡ) ಹಾಗೂ ಕಂಚಿನ ಪದಕ ಗೆದ್ದ ನೈಜೀರಿಯಾ ಒಪರಾ ಕೆಚಿ ಅವರು ಪದಕದೊಂದಿಗೆ

ಬೆಳ್ಳಿ ಗೆದ್ದ ಭಾರತದ ಚಾನು ಸೈಖೋಮ್

ಬೆಳ್ಳಿ ಗೆದ್ದ ಭಾರತದ ಚಾನು ಸೈಖೋಮ್

48 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದ ಭಾರತದ ಚಾನು ಸೈಖೋಮ್ ಕೇವಲ 3 ಅಂಕಗಳಲ್ಲಿ ಚಿನ್ನದ ಪದಕ ತಪ್ಪಿಸಿಕೊಂಡರು. ಚಿನ್ನ ಗೆದ್ದೆ ಎಂಬ ಖುಷಿಯಲ್ಲಿ ಕುಣಿದ ಚಾನು ಕೊನೆಗೆ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು.

ನವಜ್ಯೋತ್ ಚಾನ ನೋವಿನ ಭಂಗಿ

ನವಜ್ಯೋತ್ ಚಾನ ನೋವಿನ ಭಂಗಿ

ಪುರುಷರ ಜುಡೋ 60 ಕೆ.ಜಿ ವಿಭಾಗದಲ್ಲಿ ಅಶ್ಲೆ ಮೆಕ್ ಕೆಂಜನಿ (ಇಂಗ್ಲೆಂಡ್) ಪೆನಾಲ್ಟಿ ಪಾಯಿಂಟ್ ನಲ್ಲಿ ಸೋಲು ಕಂಡ ನವಜ್ಯೋತ್ ಚಾನ ಅವರು ಆಟದ ನಡುವೆ ನೋವಿನಿಂದ ಮುಖ ಕಿವಿಚಿದ್ದು ಹೀಗೆ

ಸ್ಕ್ವಾಷ್ ಸಿಂಗಲ್ಸ್‌ನಲ್ಲಿ ಗೆಲುವು

ಸ್ಕ್ವಾಷ್ ಸಿಂಗಲ್ಸ್‌ನಲ್ಲಿ ಗೆಲುವು

ಭಾರತದ ಅನಕಾ ಅಲಂಕಮೊನಿ, ಹರಿಂದರ್ ಪಾಲ್ ಸಂಧು ಹಾಗೂ ಮಹೇಶ್ ಮಂಗಾಂವ್ಕರ್ ಸ್ಕ್ವಾಷ್ ಸಿಂಗಲ್ಸ್‌ನಲ್ಲಿ ಗೆಲುವು ಸಾಧಿಸಿದ್ದಾರೆ.

ಅನಕಾ ಕೀನ್ಯದ ಖಲೆಕಾ ನಿಂಜಿ ಅವರನ್ನು 11-2, 11-3, 11-6 ಸೆಟ್‌ಗಳಿಂದ ಮಣಿಸಿ ಅಂತಿಮ 32ರ ಸುತ್ತನ್ನು ತಲುಪಿದರು. ಮುಂದಿನ ಸುತ್ತಿನಲ್ಲಿ ಮಲೇಷ್ಯಾದ ಡೆಲಿಯ ಅರ್ನಾಲ್ಡ್‌ರನ್ನು ಎದುರಿಸುವರು.

ಪುರುಷರ ಸಿಂಗಲ್ಸ್‌ನಲ್ಲಿ ಕೀನ್ಯದ ರೀಲ್ ಅವರನ್ನು 3-0 ಅಂತರದಿಂದ ಸುಲಭವಾಗಿ ಮಣಿಸಿದ ಮಹೇಶ್ ಅಂತಿಮ 32ರ ಹಂತಕ್ಕೆ ತೇರ್ಗಡೆಯಾದರು.

ಲಾನ್ ಬೌಲ್ಸ್ ಸ್ಪರ್ಧೆಯಲ್ಲಿ ಸೋಲು

ಲಾನ್ ಬೌಲ್ಸ್ ಸ್ಪರ್ಧೆಯಲ್ಲಿ ಸೋಲು

ಲಾನ್ ಬೌಲ್ಸ್ ಸ್ಪರ್ಧೆಯಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಸೋಲುಂಡಿವೆ. ಭಾರತದ ಪುರುಷರ ತಂಡ ಸ್ಕಾಟ್ಲೆಂಡ್‌ಗೆ ಸೋತರೆ, ಮಹಿಳಾ ತಂಡ ಫಿಜಿ ತಂಡಕ್ಕೆ ಶರಣಾಗಿದೆ.

ಚಿತ್ರದಲ್ಲಿ ಭಾರತದ ಟೇಬಲ್ ಟೆನಿಸ್ ತಂಡದ ಆಟದ ಭಂಗಿ
ಹರ್ಮೀತ್ ಆಟದ ಭಂಗಿ

ಹರ್ಮೀತ್ ಆಟದ ಭಂಗಿ

ಭಾರತದ ಹರ್ಮೀರ್ ರಾಜುಲ್ ದೇಸಾಯಿ ಅವರು ವಾನಾತುವಿನ ಹಾಮ್ ಲೂಲು ವಿರುದ್ಧ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿನ ಭಂಗಿ

ನವಜ್ಯೋತ್ ಜುಡೋ ಆಟದ ಭಂಗಿ

ನವಜ್ಯೋತ್ ಜುಡೋ ಆಟದ ಭಂಗಿ

ಬೆಳ್ಳಿ ಗೆದ್ದ ನವಜ್ಯೋತ್ ಅವರ ನವಜ್ಯೋತ್ ಜುಡೋ ಆಟದ ಭಂಗಿ

ಮಹಿಳಾ ಜುಡೋ ಸ್ಪರ್ಧೆಯ ಚಿತ್ರ

ಮಹಿಳಾ ಜುಡೋ ಸ್ಪರ್ಧೆಯ ಚಿತ್ರ

ಸ್ಕಾಟ್ಲೆಂಡಿನ ಕಿಂಬರ್ಲಿ ಅವರು ಭಾರತೀಯ ಪಟು ಸುಶೀಲ ಲಿಕ್ಮಾಬಮ್ ಅವರ ಮೇಲೆ ಸವಾರಿ ಮಾಡುತ್ತಿದ್ದಾರೆ.

ಮೊದಲ ದಿನ ಸಚಿನ್ ರಿಂದ ಸಂದೇಶ

ಮೊದಲ ದಿನ ಸಚಿನ್ ರಿಂದ ಸಂದೇಶ

ಯುನಿಸೆಫ್ ನ ಗುಡ್ ವಿಲ್ ರಾಯಭಾರಿಯಾಗಿ ವಿಡಿಯೋ ಸಂದೇಶ ಕಳುಹಿಸಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್

ಕೆ ಸಂಜೀತಾ ಚಾನು

ಕೆ ಸಂಜೀತಾ ಚಾನು

ಕೆ ಸಂಜೀತಾ ಚಾನು: ಮಹಿಳೆಯರ 48 ಕೆ.ಜಿ ವಿಭಾಗ (ಒಟ್ಟಾರೆ ಲಿಫ್ಟ್ 173 ಕೆಜಿ, 77+96)

ಎಸ್ ಮಿರಾಬಾಯಿ ಚಾನು

ಎಸ್ ಮಿರಾಬಾಯಿ ಚಾನು

ಎಸ್ ಮಿರಾಬಾಯಿ ಚಾನು: ಮಹಿಳೆಯರ 48 ಕೆ.ಜಿ ವಿಭಾಗ (ಒಟ್ಟಾರೆ ಲಿಫ್ಟ್ 170 ಕೆಜಿ, 75+95)

ಚಿನ್ನದ ಗೆದ್ದ ಸುಖೇನ್ ಡೇ

ಚಿನ್ನದ ಗೆದ್ದ ಸುಖೇನ್ ಡೇ

ಪುರುಷರ 56 ಕೆಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಸುಖೇನ್ ಡೇ ಹಾಗೂ ಕಂಚಿನ ಪದಕ ಗೆದ್ದ ಗಣೇಶ್ ಮಾಲಿ PTI Photo by Manvender Vashist

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X