ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮುಲ್ಲರ್ ಮ್ಯಾಜಿಕಿಗೆ ಮಕಾಡೆ ಮಲಗಿದ ಪೋರ್ಚುಗೀಸರು

By Mahesh

ಸಾಲ್ವಡಾರ್, ಜೂ.16: ಮದಗಜಗಳ ಕಾಳಗ ಎಂದೇ ಬಿಂಬಿತವಾಗಿದ್ದ ಜರ್ಮನಿ ಹಾಗೂ ಪೋರ್ಚುಗಲ್ ಪಂದ್ಯ ಪ್ರೇಕ್ಷಕರಿಗೆ ಸಕತ್ ಕಿಕ್ ನೀಡಿತು. ಜರ್ಮನಿ ತನ್ನ 100ನೇ ಪಂದ್ಯದಲ್ಲಿ ಬಲಿಷ್ಠ ಎದುರಾಳಿ ಪೋರ್ಚುಗೀಸ್ ವಿರುದ್ಧ 4-0 ಗೋಲು ಗಳ ಅಂತರದ ಜಯ ದಾಖಲಿಸಿ ತಿಗಣೆಯಂತೆ ಹೊಸಕಿ ಹಾಕಿಬಿಟ್ಟಿತು. ಫೀಫಾ ವಿಶ್ವಕಪ್ ನ ಜಿ ಗುಂಪಿನ ಪಂದ್ಯದಲ್ಲಿ ಮಿಂಚಿದ್ದು ಮುಲ್ಲರ್ ಹಾಗೂ ಜರ್ಮನಿಯ ವೀರರು ಮಾತ್ರ. ಪೋರ್ಚುಗೀಸರು ಆರಂಭ ಆಘಾತದಿಂದ ಚೇತರಿಸಿಕೊಳ್ಳದೆ ಹೀನಾಯ ಸೋಲು ಕಂಡಿದ್ದಾರೆ.

ಮುಲ್ಲರ್ ಹ್ಯಾಟ್ರಿಕ್ ಹಾಗೂ ಹಮೆಲ್ಸ್ ಒಂದು ಗೋಲಿನ ನೆರವಿನಿಂದ ಜರ್ಮನಿ ತಂಡ ಪೋರ್ಚುಗೀಸರ ವಿರುದ್ಧ 4-0 ಅಂತರದ ಭರ್ಜರಿ ಜಯ ದಾಖಲಿಸಿದೆ. ಜರ್ಮನಿ ವಿರುದ್ಧ ಸೋಲಿನ ಸರಣಿ ಮುಂದುವರೆದಿದೆ. ಯುರೋ 2000 ರ ನಂತರ ಜರ್ಮನ್ನರನ್ನು ಪೋರ್ಚುಗೀಸರು ಸೋಲಿಸಿಲ್ಲ.

ಮುಲ್ಲರ್ ಮ್ಯಾಜಿಕ್: ಪಂದ್ಯದ 12ನೇ ನಿಮಿಷದಲ್ಲೇ ಪೆನಾಲ್ಟಿ ಮೂಲಕ ಗೋಲು ದಾಖಲಿಸಿದ ಮುಲ್ಲರ್ ಪೋರ್ಚುಗೀಸರ ಪಾಲಿಗೆ ಮಾರಕವಾದರು. 45+1 ಹಾಗೂ 78 ನೇ ನಿಮಿಷದಲ್ಲಿ ಗೋಲು ಗಳಿಸಿ ಹ್ಯಾಟ್ರಿಕ್ ಸಾಧಿಸಿದರು. [ಸಾಂಬಾ ನಾಡಲ್ಲಿ ವಿಶ್ವಕಪ್ ಸಮರ ಸಂಭ್ರಮ]

2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಉರುಗ್ವೆಯ ಫೊರ್ಲಾನ್, ಹಾಲೆಂಡ್ ನ ಸ್ನೈಡರ್, ಸ್ಪೇನ್ ನ ಡೇವಿಡ್ ವಿಲ್ಲಾ ಹಿಂದಿಕ್ಕಿ ಒಟ್ಟಾರೆ 5 ಗೋಲು ಗಳಿಸಿ ಚಿನ್ನದ ಬೂಟು ಗಳಿಸಿದ್ದ ಥಾಮಸ್ ಮುಲ್ಲರ್ ಈ ಬಾರಿ ಕೂಡಾ ಚಿನ್ನದ ಬೂಟಿನ ರೇಸಿನಲ್ಲಿ ಮುಂದಿದ್ದಾರೆ. [ಚಿನ್ನದ ಬೂಟು ಗೆದ್ದ ವೀರರನ್ನು ನೋಡಿ]

Fifa World Cup 2014: Germany toy with Portugal, win 4-0

ಲೂಕಸ್ ಪೊಡೊಲ್ಸ್ಕಿ, ಕ್ಲೋಸ್ ಆರಂಭಿಕ XIನಲ್ಲಿ ಇಲ್ಲದೆ ಮುಲ್ಲರ್, ಓಜಿಲ್ ಮುಂದಿಟ್ಟುಕೊಂಡು ರಣತಂತ್ರ ಹೆಣೆದ ಜರ್ಮನ್ನರು ಪೋರ್ಚುಗೀಸರ ರಕ್ಷಣಾ ಪಡೆಯನ್ನು ಛೇದಿಸಿ ಸತತ ದಾಳಿ ನಡೆಸಿ ಫಲ ಕಂಡರು. ಪೋರ್ಚುಗೀಸರ ಡಿಫೆನ್ಸ್ ಗೆ ಚಳ್ಳೆಹಣ್ಣು ತಿನ್ನಿಸಿ ರೊನೊಲ್ಡೋ ಮುಖದಲ್ಲಿ ಚಿಂತೆಯ ರೇಖೆ ಮೂಡಿಸಿದರು.

ಪೋರ್ಚುಗೀಸರ ಕಳಪೆ ಅಟ: ಬ್ರೆಜಿಲ್ಲಿನ ಹುಟ್ಟಿರುವ ಪೋರ್ಚುಗೀಸಿನ ಪ್ರಮುಖ ಆಟಗಾರ ಪೆಪೆ ತನ್ನ ಒರಟಾಟ ಮುಂದುವರೆಸಿದ್ದು ಪಂದ್ಯದ 38ನೇ ನಿಮಿಷದಲ್ಲಿ ಮುಲ್ಲರ್ ಗೆ ಡಿಚ್ಚಿ ಹೊಡೆಯುವಂತೆ ನಟಿಸಿ ಫೌಲ್ ಮಾಡಿದ್ದು ನೇರವಾಗಿ ರೆಡ್ ಕಾರ್ಡ್ ಪಡೆಯುವಂತೆ ಮಾಡಿತು.

ಜರ್ಮನಿಯ ಸತತ ದಾಳಿಯನ್ನು ತಡೆಗಟ್ಟಲು ಪೋರ್ಚುಗೀಸ್ ರಕ್ಷಣಾ ಪಡೆ ಸಂಪೂರ್ಣ ವಿಫಲವಾಯಿತು. ಆಲ್ಮೆಡಾ ಗಾಯಗೊಂಡಿದ್ದು, ನಾನಿ ಕಿಕ್ ಗಳು ಗೋಲ್ ಪೋಸ್ಟ್ ತಲುಪದಿದ್ದದ್ದು, ಪೆಪೆ ಇಲ್ಲದೆ ಡಿಫೆನ್ಸ್ ನಲ್ಲಿ ಆಲ್ವೆಸ್ ವಿಫಲವಾಗಿದ್ದು ಗೋಲಿ ಪೆರೆರಾ ಕೂಡಾ ಹಳದಿ ಕಾರ್ಡ್ ಪಡೆದಿದ್ದು ಪೋರ್ಚುಗೀಸರಿಗೆ ಮುಳುವಾಯಿತು. [ಜಿ ಗುಂಪಿನ ವೇಳಾಪಟ್ಟಿ]

ಎರಡನೇ ಅವಧಿಯಲ್ಲಿ ಪೋರ್ಚುಗೀಸರ ದುರಾದೃಷ್ಟಕ್ಕೆ ಸಿಗಬೇಕಿದ್ದ ಪೆನಾಲ್ಟಿ ಕಿಕ್ ಕೂಡಾ ಸಿಗಲಿಲ್ಲ. 60ನೇ ನಿಮಿಷದಲ್ಲಿ ರೊನಾಲ್ಡೊ ಹೊಡೆದ ಕಿಕ್ ಗೋಲಾಗಲಿಲ್ಲ. ರೊನಾಲ್ಡೊ ಪ್ರತಿಭೆ ಪ್ರಯೋಜನಕ್ಕೆ ಬರಲಿಲ್ಲ. ಜರ್ಮನಿಯ ಪರ ಖದೀರ,ಓಜಿಲ್, ಮುಲ್ಲರ್, ಹಮ್ಮೆಲ್, ಕೊನೆಯಲ್ಲಿ ಪೊಡೊಲ್ಸ್ಕಿ, ಗೊಟ್ಜೆ ಉತ್ತಮ ಜತೆಯಾಟ ಪ್ರದರ್ಶಿಸಿ ಸಾಂಘಿಕ ಹೋರಾಟ ಮೂಲಕ ಜಯ ತಂದಿತ್ತರು.

Thomas Müller


ಜರ್ಮನಿ ಅಟ್ಯಾಕ್ vs ಪೋರ್ಚುಗೀಸ್ ಡಿಫೆನ್ಸ್ ಅಂಕಿ ಅಂಶ :
* ಒಟ್ಟು ಕಿಕ್(ಟಾರ್ಗೆಟ್): ಜರ್ಮನಿ 13(9) vs ಪೋರ್ಚುಗೀಸ್ 12(7)
* ಫೌಲ್ಸ್ : 6 vs 10
* ಚೆಂಡಿನ ಹಿಡಿತ: 53% vs 47%
* ಕಾರ್ನರ್ : 4 vs 6
* ಆಫ್ ಸೈಡ್ : 1 vs 1
* ಹಳದಿ ಕಾರ್ಡ್ : ೦ vs ಪೆರೆರಾ
* ಕೆಂಪು ಕಾರ್ಡ್ : 0 vs ಪೆಪೆ

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X