ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

CWG 2014: ಭಾರತದಿಂದ 7 ಪದಕ ಬೇಟೆ

By Mahesh

ಗ್ಲಾಸ್ಗೋ ,ಜು .25 : ಸ್ಕಾಟ್ಲೆಂಡಿನಲ್ಲಿ ನಡೆದಿರುವ 20ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಶುಭಾರಂಭ ಮಾಡಿದೆ. ಮೊದಲ ದಿನದಿಂದಲೇ ಪದಕಗಳ ಬೇಟೆ ಆರಂಭಿಸಿದ್ದು. ಕ್ರೀಡಾಪಟುಗಳಲ್ಲಿ ಉತ್ಸಾಹ ಹೆಚ್ಚಿಸಿದೆ.

ಗುರುವಾರ(ಜು.24) ರಂದು ಭಾರತ ಒಟ್ಟಾರೆ 2 ಚಿನ್ನ, ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದುಕೊಂಡಿದೆ. ವೇಟ್ ಲಿಫ್ಟಿಂಗ್ ನಲ್ಲಿ ನಾಲ್ಕು ಪದಕಗಳು ಬಂದರೆ, 3 ಪದಕಗಳು ಜುಡೋದಲ್ಲಿ ಬಂದಿದೆ. ವೇಟ್ ಲಿಫ್ಟಿಂಗ್ ನಲ್ಲಿ ಕೆ ಸಂಜಿತಾ ಚಾನು ಅವರು ಮೊದಲ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

CWG 2014: Full list of India's medal winners on day 2 (July 24)

ಜುಲೈ 24ರಂತೆ ಭಾರತದ ಪದಕ ವಿಜೇತರ ಪಟ್ಟಿ

ಚಿನ್ನ 2
*ಕೆ ಸಂಜೀತಾ ಚಾನು: ಮಹಿಳೆಯರ 48 ಕೆ.ಜಿ ವಿಭಾಗ (ಒಟ್ಟಾರೆ ಲಿಫ್ಟ್ 173 ಕೆಜಿ, 77+96)
* ಸುಕೇನ್ ಡೇ: ಪುರುಷರ 56 ಕೆ.ಜಿ ವಿಭಾಗ (ಒಟ್ಟಾರೆ ಲಿಫ್ಟ್ 248 ಕೆಜಿ, 109+139)

ಬೆಳ್ಳಿ 3
* ಎಸ್ ಮಿರಾಬಾಯಿ ಚಾನು: ಮಹಿಳೆಯರ 48 ಕೆ.ಜಿ ವಿಭಾಗ (ಒಟ್ಟಾರೆ ಲಿಫ್ಟ್ 170 ಕೆಜಿ, 75+95)
* ನವಜ್ಯೋತ್ ಚಾನ : ಪುರುಷರ ಜುಡೋ 60 ಕೆ.ಜಿ ವಿಭಾಗ (ಅಶ್ಲೆ ಮೆಕ್ ಕೆಂಜನಿ (ಇಂಗ್ಲೆಂಡ್) ಪೆನಾಲ್ಟಿ ಪಾಯಿಂಟ್ ನಲ್ಲಿ ಸೋಲು ಕಂಡರು)
* ಸುಶೀಲಾ ಲಿಕ್ಮಾಬಾಮ್ : ಮಹಿಳೆಯರ ಜುಡೋ 48 ಕೆ.ಜಿ ವಿಭಾಗ(ಸ್ಕಾಟ್ಲೆಂಡಿನ ಕಿಂಬರ್ಲಿ ರೆನಿಕ್ಸ್ ವಿರುದ್ಧ ಸೋಲು)

ಕಂಚು 2
* ಕಲ್ಪನಾ ಥೌಡಮ್ : ಮಹಿಳೆ ಜುಡೋ 52 ಕೆ.ಜಿ(ಮಾರಿಷಸ್ ನ ಕ್ರಿಶ್ಚಿಯನ್ ಲೆಗೆನ್ಟಿಲ್ ಸೋಲಿಸಿದರು)
* ಗಣೇಶ್ ಮಾಲಿ : ಪುರುಷರ ವೆಟ್ ಲಿಫ್ಟಿಂಗ್ 56 ಕೆ.ಜಿ (ಒಟ್ಟಾರೆ ಲಿಫ್ಟ್ 244 ಕೆಜಿ, 111+133)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X