ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ : ಶೂಟರ್ ಗಳಿಂದ ಕಂಚಿನ ಪದಕ ಬೇಟೆ

By Mahesh

ಇಂಚಿಯಾನ್‌, ಸೆ.21: ದಕ್ಷಿಣ ಕೊರಿಯಾದಲ್ಲಿ ನಡೆದಿರುವ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಗಳ ತಂಡ ಕಂಚಿನ ಪದಕ ಗೆದ್ದಿದ್ದಾರೆ, ಭಾನುವಾರ ನಡೆದ ಪಂದ್ಯದಲ್ಲಿ ಜೀತೂ ರಾಯ್ ಅವರಿದ್ದ ತಂಡ 10 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಪದಕ ಗೆದ್ದಿದೆ.

17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಜೀತೂ ರಾಯ್ ಅವರು ಶೂಟಿಂಗ್ ನಲ್ಲಿ ವೈಯಕ್ತಿಕ ಚಿನ್ನದ ಪದಕ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಏಷ್ಯನ್ ಗೇಮ್ಸ್ ಗ್ಯಾಲರಿ | ಕ್ರೀಡಾಕೂಟದ ಬಗ್ಗೆ ಎಬಿಸಿಡಿ

50 ಮೀ. ಪಿಸ್ತೂಲ್ ವಿಭಾಗದಲ್ಲಿ 186 ಪಾಯಿಂಟ್ಸ್ ಗಳಿಸುವುದರ ಮೂಲಕ ಜೀತೂ ರಾಯ್ ಚಿನ್ನದ ಪದಕ ಗೆದ್ದು ಹೊಸ ದಾಖಲೆ ಮಾಡಿದ್ದರು. ಭಾನುವಾರ ನಡೆದ ಟೀಂ ಇವೆಂಟ್ ನಲ್ಲಿ ಜೀತೂ ರಾಯ್, ಪ್ರಕಾಶ್ ನಂಜಪ್ಪ ಹಾಗೂ ಸಮ್ರೇಶ್ ಜಂಗ್ ಅವರು ಕಂಚಿನ ಪದಕ ಗೆದ್ದಿದ್ದಾರೆ.

Asian Games 2014: Indian men's team wins bronze in 10m air pistol

10 ಮೀ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅತಿಥೇಯ ದಕ್ಷಿಣ ಕೊರಿಯಾದ ಕಿಮ್ ಚಿಯಾಂಗ್ ಗ್ಯಾಯಾಂಗ್(585), ಜಿನ್ ಜಾನ್ ಗೊ(581). ಲೀ ಡಿಯಾಯಾಂಗ್(578) ಚಿನ್ನದ ಪದಕ ಗೆದ್ದರು. ಒಟ್ಟಾರೆ 1744 ಅಂಕ ಗಳಿಸಿದರು.

ಚೀನಾ ತಂಡದ ಪಾಂಗ್ ವೈ(585). ಪೂ ಕ್ವಿಫೆಂಗ್ (583) ಹಾಗೂ ವಾಂಗ್ ಝಿವೈ(575) ಒಟ್ಟು 1743 ಅಂಕ ಗಳಿಸಿ ರಜತ ಪದಕ ಕೊರಳಿಗೇರಿಸಿಕೊಂಡರು. ರೋಚಕವಾಗಿದ್ದ ಸ್ಪರ್ಧೆಯಲ್ಲಿ ಚೀನಾ ತಂಡದಷ್ಟೇ ಅಂಕ ಗಳಿಸಿದ್ದ ಭಾರತಕ್ಕೆ ಅದೃಷ್ಟ ಕೈ ಕೊಟ್ಟಿತು.

ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಭಾರತದಿಂದ ಈ ಬಾರಿ 679 ಕ್ರೀಡಾ ಪ್ರತಿನಿಧಿಗಳು ತೆರಳಲಿದ್ದು ಈ ಪೈಕಿ 516 ಅಥ್ಲೀಟ್ ಗಳು 163 ಕೋಚ್ ಗಳು ಹಾಗೂ ಸಹಾಯಕ ಸಿಬ್ಬಂದಿ ಇದ್ದಾರೆ. ಭಾರತ ಈ ಬಾರಿ 28 ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದೆ. ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಸುಮಾರು 45 ದೇಶಗಳು 39 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿವೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X