ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಜಾನ್ ವ್ರತಭಂಗ ಮಾಡಲು ಚಪಾತಿ ತಿನ್ನಿಸಿದರು

|
Google Oneindia Kannada News

ನವದೆಹಲಿ, ಜು. 23 : ರಂಜಾನ್‌' ಉಪವಾಸದಲ್ಲಿದ್ದ ಸಿಬ್ಬಂದಿಗಳಿಗೆ ಶಿವಸೇನಾ ಸಂಸದರು ಬಲವಂತವಾಗಿ ಚಪಾತಿ ತಿನ್ನಿಸಿದ ಪ್ರಕರಣ ಬುಧವಾರ ಸಂಸತ್ತಿನಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತು. ಶಿವಸೇನಾ ಸಂಸದರು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಷಯ ಪ್ರಸ್ತಾಪಿಸಿದರು.

ನವದೆಹಲಿಯಲ್ಲಿರುವ ಮಹಾರಾಷ್ಟ್ರ ಸದನದಲ್ಲಿ ಶಿವಸೇನೆಯ 11 ಸಂಸದರು ಜು.17ರಂದು ಸಭೆ ನಡೆಸುತ್ತಿದ್ದರು. ಈ ವೇಳೆ ಸಂಸದರು ತಮಗೆ ಕಳಪೆ ಗುಣಮಟ್ಟದ ಊಟ ನೀಡಲಾಗಿದೆ ಮತ್ತು ಮಹಾರಾಷ್ಟ್ರ ಮಾದರಿ ಊಟ ನೀಡಿಲ್ಲ ಎಂದು ಆರೋಪಿಸಿ, ರಂಜಾನ್ ವ್ರತಾಚರಣೆಯಲ್ಲಿದ್ದ ಕ್ಯಾಟರಿಂಗ್ ಮೇಲ್ವಿಚಾರಕ ಅರ್ಷದ್ ಜುಬೈರ್‌ ಗೆ ಬಲವಂತವಾಗಿ ಚಪಾತಿ ತಿನ್ನಿಸಿದ್ದರು.

New Delhi

ಬುಧವಾರ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಿವಸೇನೆ ಸಂಸದರು ಒಬ್ಬ ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ವರ್ತಿಸಿದ್ದಾರೆ ಎಂದರು. ಆರ್ ಜೆಡಿ, ಟಿಎಂಸಿ ಸಂಸದರು ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಬೆಂಬಲ ನೀಡಿ ಸದದಲ್ಲಿ ಗದ್ದಲವೆಬ್ಬಿಸಿದರು. [ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಅತ್ಯಾಚಾರ ಪ್ರಕರಣ]

ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಮಾತಿಗೆ ಬೆಂಬಲ ನೀಡದ ಸದಸ್ಯರು ಗದ್ದಲ ಮುಂದುವರೆಸಿದಾಗ ಅನಿವಾರ್ಯವಾಗಿ ಮಧ್ಯಾಹ್ನದ ವರೆಗೆ ಕಲಾಪ ಮುಂದೂಡಬೇಕಾಯಿತು. ಚಪಾತಿ ತಿನ್ನಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜುಬೈರ್, ಶಿವಸೇನಾ ಸಂಸದರು ತನ್ನ ವ್ರತ ಭಂಗಮಾಡುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

English summary
In a highly insensitive incident, 11 Shiv Sena MPs forced a Muslim catering supervisor to break his fast by inserting a full chapati in his mouth. The reason behind this outrageous act was the fact that they were not served Maharashtrian food at the Maharashtra Sadan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X