ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಸಾ ರಗಳೆ ಇಲ್ಲ, ಸೆಪ್ಟೆಂಬರಿನಲ್ಲಿ ಅಮೆರಿಕಕ್ಕೆ ಮೋದಿ

By Srinath
|
Google Oneindia Kannada News

ನವದೆಹಲಿ, ಜೂನ್ 5: ಮೋದಿ ಬಗ್ಗೆ ತನ್ನ ವರಸೆ ಬದಲಿಸಿರುವ ಅಮೆರಿಕವು 'ಭಾರತದ ನೂತನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ನಿಮಗಿನ್ನು ವೀಸಾ ರಗಳೆ ಇಲ್ಲ. ನೀವು ಸೀದಾ ಅಮೆರಿಕ್ಕೆ ಬಂದುಬಿಡಿ. ಇದೇ ಸೆಪ್ಟೆಂಬರಿನಲ್ಲಿ ನಮ್ಮ ಅಧ್ಯಕ್ಷರೊಂದಿಗೆ ನೀವು ಭೇಟಿಯಾಗಬಹುದು' ಎಂದು ಹಿಂದಿನ ತಿಂಗಳು ತಿಳಿಸಿತ್ತು.

ಆ ಆಹ್ವಾನಕ್ಕೆ ಇಂದು ಗುರುವಾರ ಸಕಾರಾತ್ಮಕವಾಗಿ ಸ್ಪ0ದಿಸಿರುವ ಪ್ರಧಾನಿ ಮೋದಿ ಅವರು ಆಯ್ತು ಸೆಪ್ಟೆಂಬರ್ ತಿಂಗಳಲ್ಲಿ ವಾಷಿಂಗ್ಟನ್ನಿನಲ್ಲಿ ದ್ವಿಪಕ್ಷೀಯ ಮಾತುಕತೆಗೆ ಬರುವೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಮನವಿಗೆ ಓಗೊಟ್ಟಿದ್ದಾರೆ. ಅಂದಹಾಗೆ, ಸೆಪ್ಟೆಂಬರ್ 26ರಂದು ವಿಶ್ವಸಂಸ್ಥೆಯ ಮಹಾ ಸಭೆಯನ್ನುದ್ದೇಶಿ ಮೋದಿ ಭಾಷಣ ಮಾಡಲಿದ್ದಾರೆ. ಅದಾದ ನಂತರ ಮೋದಿ-ಒಬಾಮಾ ಭೇಟಿ ನಡೆಯುವ ಸಾಧ್ಯತೆಯಿದೆ.

pm-narendra-modi-accepts-us-president-obama-s-invitation-to-meet-in-september

ಇದರೊಂದಿಗೆ 2002ರ ಗುಜರಾತ್ ಗಲಭೆಗಳ ಬಳಿಕ ಮೋದಿಗೆ ವೀಸಾ ನೀಡಬೇಕೇ, ಬೇಡವೇ? ಎಂಬ ಜಿಜ್ಞಾಸೆಯಲ್ಲಿದ್ದ ಅಮೆರಿಕ ಇದೀಗ ಮೋದಿ ಕುರಿತು ಸ್ಪಷ್ಟ ನಿರ್ಧಾರ ತೆಗದುಕೊಂಡಿದೆ. ಆದರೆ ಭೇಟಿ ದಿನಾಂಕಗಳಿನ್ನೂ ನಿಗದಿಯಾಗಿಲ್ಲ.

ಕಳೆದ ತಿಂಗಳು ನರೇಂದ್ರ ಮೋದಿ ಅವರು ಅಭೂತಪೂರ್ವ ಜಯ ಸಾಧಿಸುತ್ತಿದ್ದಂತೆ ಅಧ್ಯಕ್ಷ ಒಬಾಮಾ ಅವರು ಮೋದಿ ಅವರನ್ನು ಅಭಿನಂದಿಸುತ್ತಾ, ನೀವು ಯಾವಾಗ ಬೇಕಾದರೂ ಅಮೆರಿಕಕ್ಕೆ ಬರಬಹುದು. ನಿಮ್ಮ ಬರುವಿಕೆಗಾಗಿ ನಾನು ಎದುರು ನೋಡುತ್ತಿರುವೆ. ಭಾರತದ ಪ್ರಧಾನಿಯಾಗಿ ನಿಮ್ಮೊಂದಿಗೆ ಮುಂದಿನ ದಿನಗಳಲ್ಲಿ ಉತ್ತಮ ಭಾಂದವ್ಯ ಹೊಂದಲು ಬಯಸುವುದಾಗಿ ಹೇಳಿದ್ದರು.

English summary
India Prime minister Narendra Modi accepts US President Barack Obama's invitation to meet in September. Prime Minister Narendra Modi on Thursday confirmed to United States President Barack Obama that he will have a bilateral meeting with him in Washington, in September this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X