ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಮೃಗಾಲಯದ ವಿಜಯ್‌ನರಭಕ್ಷಕನಲ್ಲ

|
Google Oneindia Kannada News

ನವದೆಹಲಿ, ಸೆ. 25 : ದೆಹಲಿ ಮೃಗಾಲಯದಲ್ಲಿ ಬಾಲಕನನ್ನು ಕೊಂದ ಬಿಳಿಹುಲಿ ವಿಜಯ್ ಆರೋಗ್ಯವಾಗಿದ್ದು, ಇನ್ನೂ ನಾಲ್ಕದಿನ ಅದರ ಆರೋಗ್ಯದ ಬಗ್ಗೆ ನಿಗಾವಹಿಸಲಾಗುತ್ತದೆ ಎಂದು ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ. ವಿಜಯ್ ನರಭಕ್ಷಕನಾಗಿರಲಿಲ್ಲ ಮತ್ತು ಯಾವುದೇ ಅಸ್ವಾಭಾವಿಕ ವರ್ತನೆಯನ್ನು ತೋರಿಸುತ್ತಿಲ್ಲ ಎಂದು ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ದೆಹಲಿ ಮೃಗಾಲಯದಲ್ಲಿ 12 ವರ್ಷದ ಬಾಲಕನನ್ನು ವಿಜಯ್ ಕೊಂದು ಹಾಕಿತ್ತು. ಘಟನೆ ನಡೆದ ದಿನದಿಂದ ವಿಜಯ್ ವರ್ತನೆ ಮತ್ತು ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದು, ಅದು ಆರೋಗ್ಯವಾಗಿದೆ. ಪ್ರತಿದಿನ ಅದಕ್ಕೆ 10 ಕೆಜಿ ಮಾಂಸ ನೀಡಲಾಗುತ್ತಿದೆ. ಬಾಲಕ ಹುಲಿ ಇರುವ ಪ್ರದೇಶಕ್ಕೆ ಬಿದ್ದಾಗ, ಜನರು ವಿಜಯ್ ಮೇಲೆ ಕಲ್ಲು ಎಸೆದಿದ್ದಾರೆ ಇದರಿಂದ ಕೆರಳಿದ ಅದು ಬಾಲಕನ ಮೇಲೆ ದಾಳಿ ಮಾಡಿದೆ ಎಂದು ಮೃಗಾಲಯದ ಮೇಲ್ವಿಚಾರಕ ಎ.ಆರ್.ಖಾನ್ ಹೇಳಿದ್ದಾರೆ. [ಶಾಲಾ ಬಾಲಕನನ್ನು ಕೊಂದ ವಿಜಯ್]

New Delhi zoo

ವಿಜಯ್ 2007ರಲ್ಲಿ ಮೃಗಾಲಯದಲ್ಲಿ ಜನಿಸಿದ್ದು, ಅಂದಿನಿಂದಲೂ ಆರೋಗ್ಯವಾಗಿದೆ. ವಿಜಯ್‌ನನ್ನು ನರಭಕ್ಷಕ ಎಂದು ಕರೆಯುವುದು ತಪ್ಪು ಎಂದು ಖಾನ್ ಹೇಳಿದ್ದಾರೆ. ಬಾಲಕ ಹುಲಿಯ ಜಾಗಕ್ಕೆ ಬಿದ್ದಾಗ ಅದು ಮತ್ತೊಂದು ಭಾಗದಲ್ಲಿ ಇತ್ತು. ಜನರ ಕೂಗಾಟ ಕೇಳಿ ಅದು ಅಲ್ಲಿಂದ ಓಡಿ ಬಂದಿತ್ತು. ದಾಳಿ ಮಾಡುವ ಉದ್ದೇವಿದ್ದರೆ, ಬಾಲಕನ ಮೇಲೆ ತಕ್ಷಣ ದಾಳಿ ಮಾಡುತ್ತಿತ್ತು ಎಂದು ವಿವರಣೆ ನೀಡಿದ್ದಾರೆ.

ತನ್ನ ವಾಸಸ್ಥಳಕ್ಕೆ ಬಾಲಕ ಬಿದ್ದಾಗ ವಿಜಯ್ ಕೂಡಾ ಕುತೂಹಲದಿಂದ ಸ್ವಲ್ಪ ಸಮಯ ಅವನನ್ನು ನೋಡಿದ್ದಾನೆ. ಜನರು ಆಗ ಜೋರಾಗಿ ಕೂಗಲಾರಂಭಿಸಿದರು ಮತ್ತು ಆತನ ಮೇಲೆ ಕಲ್ಲುಗಳನ್ನು ಎಸೆದರು. ಇದರಿಂದ ಕೆರಳಿದ ವಿಜಯ್ ಬಾಲಕನ ಮೇಲೆ ದಾಳಿ ಮಾಡಿದೆ. ಇದರಲ್ಲಿ ವಿಜಯ್ ತಪ್ಪಿಲ್ಲ ಎಂದು ಖಾನ್ ತಿಳಿಸಿದ್ದಾರೆ. [ದೆಹಲಿ ಮೃಗಾಲಯದ ಭೀಕರ ಘಟನೆ ಮರುಕಳಿಸದಿರಲಿ]

ದೆಹಲಿಯ ಮೃಗಾಲಯದಲ್ಲಿ ಬಾಲಕ ವಿಜಯ್ ಬಾಯಿಗೆ ಸಿಲುಕಿ ಮೃತಪಟ್ಟ ಘಟನೆ ಹಿನ್ನಲೆಯಲ್ಲಿ ಕರ್ನಾಟಕದ ಎಲ್ಲಾ ಮೃಗಾಲಯದಲ್ಲಿನ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ಮುಂದಾಗಿದೆ. ಮೃಗಾಲಯದಲ್ಲಿ ಹೆಚ್ಚಿನ ಭದ್ರತೆ ಅಗತ್ಯವಿದ್ದರೆ ತಕ್ಷಣ ನೀಡಲಾಗುತ್ತದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

English summary
The Tiger of New Delhi is not killer after all, it is not a Man Eater said Zoo official. White Tiger Vijay who killed student showed no signs of restlessness or unusual behavior after the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X