ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌.ಎಂ.ಲೋಧಾ ನೂತನ ಮುಖ್ಯ ನ್ಯಾಯಮೂರ್ತಿ

|
Google Oneindia Kannada News

ನವದೆಹಲಿ, ಏ. 27 : ನ್ಯಾಯಮೂರ್ತಿ ಆರ್‌.ಎಂ ಲೋಧಾ ಅವರು ಸುಪ್ರೀಂಕೋರ್ಟ್ ನ 41ನೇ ಮುಖ್ಯ ನ್ಯಾಯಮೂರ್ತಿಯಾಗಿ ಭಾನುವಾರ ಅಧಿಕಾರ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಲೋಧಾ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದ ಪಿ. ಸದಾಶಿವಂ ಅವರು ಏ.26ರಂದು ನಿವೃತ್ತರಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಅವರನ್ನು ಆಯ್ಕೆ ಮಾಡಲಾಗಿದೆ. ಇವರ ಸೇವಾವಧಿ ಐದು ತಿಂಗಳಿದ್ದು, ಸೆ. 27 ಕ್ಕೆ ಮುಕ್ತಾಯಗೊಳ್ಳಲಿದೆ. [ಪಿಟಿಐ ಚಿತ್ರಗಳು]

ಅಧಿಕಾರ ಸ್ವೀಕರಿಸಿದ ಆರ್‌.ಎಂ ಲೋಧಾ

ಅಧಿಕಾರ ಸ್ವೀಕರಿಸಿದ ಆರ್‌.ಎಂ ಲೋಧಾ

ಸುಪ್ರೀಂಕೋರ್ಟ್ ನ 41ನೇ ಮುಖ್ಯ ನ್ಯಾಯಮೂರ್ತಿಯಾಗಿ ಎಂ.ಆರ್.ಲೋಧಾ (Rajendra Mal Lodha) ಶನಿವಾರ ಅಧಿಕಾರ ಸ್ವೀಕರಿಸಿದರು. ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಲೋಧಾ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಸೆಪ್ಟೆಂಬರ್ ವರೆಗೆ ಸೇವೆ

ಸೆಪ್ಟೆಂಬರ್ ವರೆಗೆ ಸೇವೆ

ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದ ಪಿ. ಸದಾಶಿವಂ ಅವರು ಏ.26ರಂದು ನಿವೃತ್ತರಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಅವರನ್ನು ಆಯ್ಕೆ ಮಾಡಲಾಗಿದೆ. ಇವರ ಸೇವಾವಧಿ ಐದು ತಿಂಗಳಿದ್ದು, ಸೆ. 27 ಕ್ಕೆ ಮುಕ್ತಾಯಗೊಳ್ಳಲಿದೆ.

ಮಹತ್ವದ ತೀರ್ಪುಗಳು

ಮಹತ್ವದ ತೀರ್ಪುಗಳು

ಆ್ಯಸಿಡ್‌ ಮಾರಾಟ ನಿಷೇಧಿಸಬೇಕು, ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ 3 ಲಕ್ಷ ರೂ. ಪರಿಹಾರ ಕೊಡಬೇಕು, ನ್ಯಾಯಾಲಯದ ಉಸ್ತುವಾರಿಯಲ್ಲಿ ಹಿರಿಯ ಅಧಿಕಾರಿಗಳ ವಿರುದ್ಧ ನಡೆಸಲಾಗುವ ತನಿಖೆಗೆ ಸರ್ಕಾರದ ಅನುಮತಿ ಬೇಕಿಲ್ಲ ಎಂಬ ಹಲವಾರು ಮಹತ್ವದ ತೀರ್ಪುಗಳನ್ನು ಆರ್‌.ಎಂ. ಲೋಧಾ ಅವರು ನೀಡಿದ್ದಾರೆ

ಆರ್.ಎಂ.ಲೋಧಾ ಪರಿಚಯ

ಆರ್.ಎಂ.ಲೋಧಾ ಪರಿಚಯ

1994ರ ಜ.31ರಂದು ರಾಜಸ್ಥಾನ ಹೈಕೋರ್ಟ್‌ ನ್ಯಾಯಾಧೀಶರಾಗಿ ಸೇವೆ ಆರಂಭಿಸಿದ ಲೋಧಾ ಅವರು,ಬಾಂಬೆ ಹೈಕೋರ್ಟ್‌ ನಲ್ಲಿ 13 ವರ್ಷ ಕಾರ್ಯನಿರ್ವಹಿಸಿದ್ದಾರೆ. 2008ರ ಮೇನಲ್ಲಿ ಪಟ್ನಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವರು, ಅದೇ ವರ್ಷದ ಡಿಸೆಂಬರ್‌ ನಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು.

ಕನ್ನಡಿಗ ಮುಖ್ಯ ನ್ಯಾಯಮೂರ್ತಿ

ಕನ್ನಡಿಗ ಮುಖ್ಯ ನ್ಯಾಯಮೂರ್ತಿ

ಜಸ್ಟೀಸ್ ಆರ್.ಎಂ.ಲೋಧಾ ಅವರ ಸೇವಾವಧಿ ಸೆ. 27 ಕ್ಕೆ ಮುಕ್ತಾಯಗೊಳ್ಳಲಿದೆ. ನಂತರ, ಬೆಂಗಳೂರಿನವರಾದ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರು ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಲಿದ್ದು 2015ರ ಡಿಸೆಂಬರ್‌ 3ರವರೆಗೆ ಕಾರ್ಯಭಾರ ನಿರ್ವಹಿಸಲಿದ್ದಾರೆ. [ಆರ್ ಟಿ ನಗರದ ದತ್ತು ಭಾವಿ ಸುಪ್ರೀಂ ಜಸ್ಟೀಸ್]

English summary
Justice Rajendra Mal Lodha was on Sunday sworn in as the 41st Chief Justice of India. He was administered the oath of office by President Pranab Mukharjee at the Rashtrapati Bhavan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X