ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಫೇಸ್ಬುಕ್, ಟ್ವಿಟ್ಟರ್ ಬಳಸಿ ಉಗ್ರರಿಂದ ಸಂಚು'

By Mahesh
|
Google Oneindia Kannada News

ನವದೆಹಲಿ, ಆ.24: ಇಂಡಿಯನ್ ಮುಜಾಹಿದೀನ್ (ಐಎಂ) ಸಂಘಟನೆಯ ಉಗ್ರರು ಫೇಸ್ ಬುಕ್, ಇ-ಮೇಲ್, ಚಾಟ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ತಮ್ಮ ವಿಧ್ವಂಸಕ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ದೆಹಲಿ ಕೋರ್ಟಿಗೆ ಪೊಲೀಸರು ತಿಳಿಸಿದ್ದಾರೆ.

ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸಹ ಸಂಸ್ಥಾಪಕ ರಿಯಾಜ್ ಭಟ್ಕಳ್ ತನ್ನ ಇತರೆ ಕಾರ್ಯಕರ್ತರನ್ನು ಸಂಪರ್ಕಿಸಲು ಅನೇಕ ನಕಲಿ ಖಾತೆಗಳನ್ನು ಬಳಸುತ್ತಿದ್ದ. ಅನೇಕ ಸಾರ್ವಜನಿಕರ ಐಡಿಗಳು ಹ್ಯಾಕ್ ಆಗಿರುವ ಸಾಧ್ಯತೆಗಳಿವೆ. ಅದರೆ, ಹೆಚ್ಚು ಕಾಲ ಒಂದೇ ಐಡಿ ಬಳಕೆ ಮಾಡುತ್ತಿರಲಿಲ್ಲ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣ ಪಟ್ಟಿಯಲ್ಲಿ ಹೇಳಿದ್ದಾರೆ.

ವಿವಿಧ ಐಡಿ ಬಳಸಿ ಸ್ಕೆಚ್: ಪೊಲೀಸರು ಸಲ್ಲಿಸಿರುವ ಮಾಹಿತಿ ಪ್ರಕಾರ ನಿಂಬಜ್ ಐಡಿ, ಯಹೂ ಐಡಿ, ಪಲ್ ಟಾಕ್ಕ್ ಐಡಿ, ಜಿಮೇಲ್ ಐಡಿ ಹಾಗೂ ಫೇಸ್‍ಬುಕ್ ಐಡಿಗಳನ್ನು ಬಳಸಿಕೊಂಡು ವಿವಿಧ ಸಮಯಗಳಲ್ಲಿ ಹಾಗೂ ವಿವಿಧ ಸ್ಥಳಗಳಿಂದ ಸ್ಕೆಚ್ ರವಾನಿಸುತ್ತಿದ್ದರು. ನಿರಂತರವಾಗಿ ತಮ್ಮ ಜಾಲದಲ್ಲಿರುವ ಎಲ್ಲರಿಗೂ ಮಾಹಿತಿ ಕಳಿಸುತ್ತಿದ್ದ ಅಲರ್ಟ್ ಆಗಿರುತ್ತಿದ್ದರು.ಉಗ್ರರ ಈ ಸಾಮಾಜಿಕ ತಾಣಗಳ ಬಳಕೆ ಕಳೆದ ಹಲವಾರು ವರ್ಷ/ ಅಥವಾ ತಿಂಗಳುಗಳಿಂದ ನಡೆದಿರುವುದಾಗಿಯೂ ಹೇಳಲಾಗಿದೆ.

IM men used social networking sites for communication: Police

ಶಂಕಿತ ಇಂಡಿಯನ್ ಮುಜಾಹಿದೀನ್ ನ ಜಯಾ ಉರ್ ರೆಹ್ಮಾನ್, ತೆಹ್ಸೀನ್ ಅಖ್ತರ್ ಮೊಹಮದ್ ವಕಾರ್ ಅಜರ್, ಮೊಹಮದ್ ನೂರೂಫ್, ಮೊಹಮ್ಮದ್ ಸಖೇಬ್ ಅನ್ಸಾರಿ ಹಾಗೂ ಇಮ್ತಿಯಾಜ್ ಅಲಮ್ ಅವರನ್ನು ದೆಹಲಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ವಿರೋಧ ಕಾಯ್ದೆಯಡಿ ಬಂಧಿಸಲಾಗಿದೆ.

ತಲೆ ಮರೆಸಿಕೊಂಡಿದ್ದ ಭಟ್ಕಳನ ಜೊತೆ ಸಂಘಟನೆಯ ಇತರ ಉಗ್ರರು ಇ-ಮೇಲ್ ಮತ್ತು ಮೆಸೇಜ್ ಗಳ ಮೂಲಕ ಸಂಪರ್ಕ ಇಟ್ಟುಕೊಂಡಿದ್ದರು.ಅಲ್ಲದೆ ತಾವು ಅಡಗಿದ ಸ್ಥಳಗಳ ಪತ್ತೆಯಾಗದಂತೆ ನೋಡಿಕೊಳ್ಳಲು ಈ ಉಗ್ರರು ಪದೇ ಪದೇ ಕಂಪ್ಯೂಟರ್, ಸಾಫ್ಟ್ ವೇರ್ ಹಾಗೂ ಮೊಬೈಲ್ ಅಪ್ಲಿಕೇಷನ್ ಗಳನ್ನು ಬದಲಾಯಿಸುತ್ತಿದ್ದರು. ಈ ಎಲ್ಲಾ ಮಾಹಿತಿ ಬಂಧಿತ ಉಗ್ರರ ವಿಚಾರಣೆ ವೇಳೆ ತಿಳಿದು ಬಂದಿದೆ.

2011ರಲ್ಲಿ ದೆಹಲಿಯ ಹೊರ ವಲಯದ ಮೀರ್ ವಿಹಾರ್ ಪ್ರದೇಶದ ಒಂದು ಗೋದಾಮಿನಲ್ಲಿ ಶಸ್ತ್ರಾಸ್ತ್ರ ಶೇಖರಣೆ ಇಟ್ಟಿದ್ದು ಪತ್ತೆಯಾಗಿತ್ತು. ಸ್ಫೋಟಕ ವಸ್ತುಗಳ ರವಾನೆ ಕಾರ್ಯಕ್ಕೂ ಸಂದೇಶಗಳು ಸಾಮಾಜಿಕ ಜಾಲ ತಾಣ, ಉಚಿತ ಸಂದೇಶ ಕಳಿಸುವ ಮೊಬೈಲ್ ಅಪ್ಲಿಕೇಷನ್ ಗಳಿಂದ ಆಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. (ಪಿಟಿಐ)

English summary
Indian Mujahideen (IM) operatives extensively used social networking sites like Facebook and other e-mail chats to communicate with each other, including with its co-founder Riyaz Bhatkal, to execute their terror plans, Delhi Police has told a court here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X