ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರು ಅಪಘಾತದಲ್ಲಿ ಕೇಂದ್ರ ಸಚಿವ ಮುಂಡೆ ಸಾವು

By Srinath
|
Google Oneindia Kannada News

ನವದೆಹಲಿ, ಜೂನ್ 3: ಇಂದು ಬೆಳಗ್ಗೆ ದೆಹಲಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕೇಂದ್ರದ ನೂತನ ಸಚಿವ ಗೋಪಿನಾಥ್ ಮುಂಡೆ ಅವರು ಹೃದಯಾಘಾತಕ್ಕೆ ಒಳಗಾಗಿ ಸಫ್ದರಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

'6.20ಕ್ಕೆ ಅಫಘಾತ ಸಂಭವಿಸಿದೆ. ಅಡ್ವಾಣಿ ನಿವಾಸವಿರುವ ರಸ್ತೆಯಲ್ಲಿ ಅಫಘಾತ ಸಂಭವಿಸಿದೆ. ಸಚಿವ ಗೋಪಿನಾಥ್ ಮುಂಡೆ ಅವರ ಮಾರುತಿ ಸುಜುಕಿ ಎಸೆಕ್ಸ್ 4 ಕಾರಿಗೆ ಹಿಂದಿನಿಂದ ಬಂದ ಟಾಟಾ ಇಂಡಿಕಾ ಕಾರು ಡಿಕ್ಕಿ ಹೊಡೆದಿದೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸಚಿವ ಮುಂಡೆ ಕಾರಿನಲ್ಲೇ ಕುಸಿದುಬಿದ್ದಿದ್ದಾರೆ.'

Car accident Union Minister Gopinath Munde injured admitted to AIIMS

'ತಕ್ಷಣ ಅವರನ್ನು ಕಾರಿನ ಚಾಲಕ ಆಸ್ಪತ್ರೆಗೆ ಸೇರಿಸಿದ್ದಾನೆ. ಆದರೆ ಆಸ್ಪತ್ರೆಗೆ ಬರುವ ವೇಳೆಗೆ ಅವರ ರಕ್ತದೊತ್ತಡ ಸಾಕಷ್ಟು ಏರುಪೇರಾಗಿತ್ತು. ಅವರನ್ನು ಸುಸ್ಥಿತಿಗೆ ತರಲು Cardio Pulmonary Resuscitation (CPR) ಯತ್ನಿಸಿದೆವು. ದೇಹಕ್ಕೆ ಬಾಹ್ಯ ಗಾಯಗಳು ಆಗಿರಲಿಲ್ಲವಾದರೂ ಆಘಾತಕ್ಕೊಳಗಾದ ಸಚಿವರು ಸಾವನ್ನಪ್ಪಿರಬಹುದು' ಎಂದು ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೋದಿ ಟ್ವೀಟ್:

ಹಿಂದಿನ ಸುದ್ದಿ: ಕೇಂದ್ರದ ನೂತನ ಸಚಿವ ಗೋಪಿನಾಥ್ ಮುಂಡೆ ಅವರ ಕಾರು ಇಂದು ಬೆಳಗ್ಗೆ ಅಪಘಾತಕ್ಕೀಡಾಗಿದ್ದು ಸಚಿವರ ಸ್ಥಿತಿ ಗಂಭೀರವಾಗಿದೆ. ತಕ್ಷಣ ಅವರನ್ನು ದಿಲ್ಲಿಯ ಸಫ್ದರಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. (ಸಚಿವ ಮುಂಡೆ ಸಾವು, ಬುಧವಾರ ಅಂತಿಮ ಸಂಸ್ಕಾರ)

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ, ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರಿಗೆ ಸಫ್ದರಜಂಗ್ ಆಸ್ಪತ್ರೆಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. (ಮುಂಡೆ ಸಾವು: ಇದೇನಿದು ಶೋಭಾ ಡೆ ಸಂಸ್ಕಾರ!?)

ಸಚಿವ ಮುಂಡೆ ಅವರು ಮುಂಬೈಗೆ ಹೋಗಲು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದಾಗ ಮೋತಿ ಭಾಗ್ ಬಳಿ ಈ ಅಪಘಾತ ಸಂಭವಿಸಿದೆ. ಸಚಿವರು ಬೆಳಗಿನ ಸಮಯವೆಂದು ಭದ್ರತೆಯಿಲ್ಲದೆ ಕಾರಿನಲ್ಲಿ ಹೊರಟಿದ್ದರು ಎಂದು ತಿಳಿದುಬಂದಿದೆ.

ಅಪಘಾತವು ಇಂದು ಬೆಳಗ್ಗೆ 6 ಗಂಟೆಯಲ್ಲಿ ಸಂಭವಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

English summary
Union Minister Gopinath Munde who was critically injured in a car accident near an airport in New Delhi passes away in Safdarjung Hospital. The incident took place at around 6:00 am
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X