ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರೇ ಮೊದಲು ಕೋಮುವಾದಿಗಳಾಗಿ: ಶಾಜಿಯಾ

By Srinath
|
Google Oneindia Kannada News

ನವದೆಹಲಿ, ಏ.23: 'ಮುಸಲ್ಮಾನರೇ ನೀವು ಹೀಗೇ ಜಾತ್ಯಾತೀತರಾಗುಳಿದರೆ ಸಾಲದು; ನೀವು ಇನ್ನಷ್ಟು ಕೋಮುವಾದಿಗಳಾಗಬೇಕು' ಎಂದು ಆಮ್ ಆದ್ಮಿ ಪಕ್ಷದ ವರ್ಚಸ್ವೀ ನಾಯಕಿ ಶಾಜಿಯಾ ಇಲ್ಮಿ ಮುಸ್ಲಿಂ ಬಾಂಧವರಿಗೆ ಕರೆ ನೀಡಿದ್ದಾರೆ.

'ಮುಸ್ಲಿಮರೇ ನೀವು ಕಡಿಮೆ ಜಾತ್ಯಾತೀತರಾಗಿ; ಹೆಚ್ಚು ಹೆಚ್ಚು ಕೋಮುವಾದಿಗಳಾಗಿ' ಎಂಬ ಇಲ್ಮಿಯ ಈ ಅನಾಹುತಕಾರಿ/ಆತಂಕಕಾರಿ ಹೇಳಿಕೆಯ ವಿರುದ್ಧ ವ್ಯಾಪಕ ಟೀಕೆಗಳು ಹರಿದುಬರುತ್ತಿವೆ. ಮುಸ್ಲಿಮರನ್ನುದ್ದೇಶಿಸಿ ಇಲ್ಮಿ (ಮುಂಬೈನಲ್ಲಿ) ಈ ಹೇಳಿಕೆ ನೀಡುವ ವಿಡಿಯೋ ದೃಶ್ಯಾವಳಿಗಳು ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದೆ.

Lok Sabha Election 2014: Aam Aadmi Party Shazia Ilmi controversy Muslims should become more communal less secular

Shazia Ilmi ಹೇಳಿಕೆಯು ಸ್ವತಃ ಆಮ್ ಆದ್ಮಿ ಪಕ್ಷಕ್ಕೂ ಇರುಸುಮುರುಸು ತಂದಿದೆ. ಅಂದಹಾಗೆ, ಶಾಜಿಯಾ ಇಲ್ಮಿ ಗಾಜಿಯಾಬಾದ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. 'ಚುನಾವಣೆಗಳು ನಡೆಯುತ್ತಿವೆ. ನೀವು ಜಾತ್ಯಾತೀತರಾಗಿ ಯೋಚಿಸುವುದನ್ನು ಇನ್ನಾದರೂ ಬಿಡಿ; ನೀವು ಕೋಮುವಾದಿಗಳಾಗಿಲ್ಲ. ಇನ್ನಾದರೂ ಕೋಮುವಾದಿಗಳಾಗಿ ನಿಮ್ಮ ಮತ ಹಕ್ಕನ್ನು ಚಲಾಯಿಸಿ. ನಮ್ಮ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರು ನಮ್ಮವರೇ' ಎಂದು ಇಲ್ಮಿ ಮುಸಲ್ಮಾನರನ್ನುದ್ದೇಶಿಸಿ ಹೇಳಿದ್ದಾರೆ.

ಶಾಜಿಯಾ ಇಲ್ಮಿಯ ಮಾತುಗಳನ್ನು ಕೇಳಿ ಆಮ್ ಆದ್ಮಿ ಪಕ್ಷದ ನಾಯಕರು ಬೆಚ್ಚಿಬಿದ್ದಿದ್ದಾರೆ. 'ನಮ್ಮ ಪಕ್ಷದಲ್ಲಿ ಇಂತಹ ಮಾತುಗಳಿಗೆ ಜಾಗವಿಲ್ಲ. ಇಂತಹ ರಾಜಕೀಯ ನಮಗೆ ಬೇಕಿಲ್ಲ. ನಾವು ಇಲ್ಮಿ ಹೇಳಿಕೆಯನ್ನು ಸಮರ್ಥಿಸುವುದಿಲ್ಲ' ಎಂದಿದ್ದಾರೆ.

'ಶಾಜಿಯಾ ಮಾತನಾಡಿರುವ ವಿಡಿಯೋ ನೋಡಿದ್ದೇನೆ. ಅವರು ಹಾಗೆ ಹೇಳಬಾರದಿತ್ತು. AAP ಕೋಮುವಾದಿ ರಾಜಕೀಯಯವನ್ನು ನಾವು ಪಾಲಿಸುವುದಿಲ್ಲ. ಸರ್ವಜನರನ್ನೂ ಒಂದುಗೂಡಿಸುವುದು ನಮ್ಮ ಧ್ಯೇಯೋದ್ದೇಶ' ಎಂದು ಎಎಪಿ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಪ್ರತಿಕ್ರಿಯಿಸಿದ್ದಾರೆ.

ಶಾಜಿಯಾ ಇನ್ನೂ ಏನು ಹೇಳಿದ್ದಾರೆಂದರೆ 'ನಾವು ಇದುವರೆಗೂ ಕಾಂಗ್ರೆಸ್ ಗೆಲ್ಲುವಂತೆ ಮಾಡುತ್ತಿದ್ದೇವೆ. ಆದರೆ ಅಷ್ಟು ಜಾತ್ಯಾತೀತರಾಗಿರಬೇಡಿ. ಈ ಬಾರಿ ನಿಮ್ಮ ಹಿತಾಸಕ್ತಿಗಳ ಬಗ್ಗೆಯೂ ಸ್ವಲ್ಪ ಯೋಚಿಸಿ. ನೀವು ಮುಸ್ಲಿಮರು ಜಾತ್ಯಾತೀತರಾಗಿ ಆಲೋಚಿಸುತ್ತೀರಿ. ಹಾಗಾಗಿ ಎಲ್ಲರಿಗೂ ಮತ ಹಾಕುತ್ತೀರಿ. ಬೇರೆ ಪಕ್ಷಗಳು ಹಾಗಿಲ್ಲ. ಅವರಿಗೆ ನಿರ್ಧಾರಿತ ಮತ ಬ್ಯಾಂಕ್ ಇದೆ. ಅದನ್ನೇ ಪೋಷಿಸಿಕೊಂಡು ಬರುತ್ತಾರೆ. ಆದರೆ ನಿಮ್ಮ ಮತಗಳು ಹಂಚಿಹೋಗುತ್ತಾ ಬಂದಿವೆ. ಆದ್ರೆ ಈ ಬಾರಿ ತುಸು ಭಿನ್ನವಾಗಿ ನಿಮ್ಮ ಬಗ್ಗೆಯೇ ಯೋಚಿಸಿ ನೋಡಿ' ಎಂದು ಫರ್ಮಾನು ಹೊರಡಿಸಿದ್ದಾರೆ.

English summary
Lok Sabha Election 2014: Aam Aadmi Party Shazia Ilmi controversy Muslims should become more communal less secular. Days before the crucial fifth phase of Lok Sabha elections, Aam Aadmi Party (AAP) leader Shazia Ilmi has landed into a controversy because of her alleged "Muslims ought to be communal this time" remark. The party distanced itself from her remark and said she should not have said it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X