ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ: ಮಹಿಳಾ ಕಂಡಕ್ಟರ್ ಬಟ್ಟೆ ಹರಿದು, ಹಲ್ಲೆ

By Mahesh
|
Google Oneindia Kannada News

ಡೊಂಬಿವಿಲಿ(ಥಾಣೆ), ಜೂ.5: ಕರ್ತವ್ಯ ನಿರತ ಮಹಿಳಾ ಬಸ್ ಕಂಡಕ್ಟರ್ ಮೇಲೆ ಪ್ರಯಾಣಿಕರು ಹಲ್ಲೆ ನಡೆಸಿದ ದಾರುಣ ಘಟನೆ ಮುಂಬೈನ ಹೊರವಲಯದಲ್ಲಿ ಬುಧವಾರ ನಡೆದಿದೆ.

ಮಹಿಳಾ ಬಸ್ ಕಂಡಕ್ಟರ್ ಅವರನ್ನು ಬಸ್ ನಿಂದ ಹೊರಕ್ಕೆಳೆದ ಯುವಕರು ಆಕೆ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದು ಅವಹೇಳನಕಾರಿ ಶಬ್ದಗಳನ್ನು ಬಳಸಿ ಆಕೆಗೆ ಸಾರ್ವಜನಿಕವಾಗಿ ಅವಮಾನ ಮಾಡಿರುವ ಘಟನೆ ನಡೆದಿದೆ.

ಕಲ್ಯಾಣ್ ನಿಂದ ಪನ್ ವೆಲ್ ಮಾರ್ಗದಲ್ಲಿ ಬಸ್ ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಗುರುವಾರ ಬೆಳಗ್ಗೆ 8.30ಕ್ಕೆ ಮಾರ್ಗ ಮಧ್ಯೆದಲ್ಲಿ ಬಸ್ ನಿಲ್ಲಿಸಿ 34 ವರ್ಷ ವಯಸ್ಸಿನ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ. ಈ ದುರಂತ ದೃಶ್ಯವನ್ನು ನೋಡಿಯೂ ನೋಡದ ಹಾಗೆ ಸಹ ಪ್ರಯಾಣಿಕರು ಸುಮ್ಮನೆ ನಿಂತ್ತಿದ್ದು ಇನ್ನೂ ಘೋರತನವಾಗಿತ್ತು.

Mumbai: Male passenger drags, beats and strips woman conductor

ನಂತರ ಘಟನಾ ಸ್ಥಳಕ್ಕೆ ಬಂದ ವಿದ್ಯಾರ್ಥಿಗಳ ಗುಂಪೊಂದು ಮಹಿಳಾ ಕಂಡಕ್ಟರ್ ಅವರನ್ನು ರಕ್ಷಿಸಿ, ಆರೋಪಿಯನ್ನು ಅಲ್ಲಿಂದ ಅಟ್ಟಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾಗಿದ್ದ ಮಹಿಳಾ ಸಿಬ್ಬಂದಿ ನಂತರ ಮಾತನಾಡಿ,

'ನಾನು ಆರೋಪಿತ ಯುವಕನಿಗೆ ಬಸ್ ನಿಂದ ಇಳಿಯುವಂತೆ ಹೇಳಿದೆ. ಅವನು ನನ್ನ ಕಾಲು ಹಿಡಿದು ದರದರನೇ ಎಳೆದು ಬಸ್ ನಿಂದ ಹೊರಕ್ಕೆ ಹಾಕಿದ. ನನ್ನ ಬಟ್ಟೆ ಹರಿದು ಒದೆಯಲು ಶುರು ಮಾಡಿದ. ನಮ್ಮ ಬಸ್ ಹಿಂದೆ ಬರುತ್ತಿದ್ದ ಇನ್ನೊಂದು ಬಸ್ ನ ಮಹಿಳಾ ಸಿಬ್ಬಂದಿಗೂ ಅವನಿಂದ ಒದೆ ಬಿದ್ದಿದೆ. ಈ ಘಟನೆ ಬಸ್ ನಿಲ್ದಾಣದಲ್ಲೇ ನಡೆದಿದ್ದು ಬಸ್ ಹತ್ತುತ್ತಿದ್ದ ಯಾವೊಬ್ಬ ಪ್ರಯಾಣಿಕರು ನನ್ನ ನೆರವಿಗೆ ಬರಲಿಲ್ಲ' ಎಂದು ಹೇಳಿದ್ದಾರೆ.

ಅರೋಪಿಯನ್ನು 30 ವರ್ಷ ವಯಸ್ಸಿನ ಅಭಿಷೇಕ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿಯ ಮೇಲೆ ಭಾರತೀಯ ದಂಡ ಸಂಹಿತೆ 353, 354, 504 ಹಾಗೂ 323 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

'ಅಭಿಷೇಕ್ ತಪ್ಪು ಡೋರ್ ನಿಂದ ಬಸ್ ಹತ್ತಿದ್ದಾನೆ. ಇದಕ್ಕೆ ಚಾಲಕ ಆಕ್ಷೇಪಿಸಿದ್ದಾನೆ. ಅದರೆ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ನಡುವೆ ಮಹಿಳಾ ಸಿಬ್ಬಂದಿ ಬಸ್ ನಿಂದ ಕೆಳಗೆ ಇಳಿಯುವಂತೆ ಹೇಳಿದ್ದಕ್ಕೆ ಈ ರೀತಿ ನಡೆದುಕೊಂಡಿದ್ದಾನೆ' ಎಂದು ಪೊಲೀಸರು ಹೇಳಿದ್ದಾರೆ.

English summary
In a shocking incident of a woman being harassed yet again, a woman bus conductor was dragged out of the bus by a youth, before being stripped and beaten. This happened on the outskirts of Mumbai this morning in a bus that ployed between Kalyan and Panvel at around 8:30 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X