ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯಾ ಖಾನ್ ಸಾವು ಪ್ರಕರಣ ಸಿಬಿಐ ತನಿಖೆಗೆ

By ಜೇಮ್ಸ್ ಮಾರ್ಟಿನ್
|
Google Oneindia Kannada News

ಮುಂಬೈ, ಜು.4: ಬಾಲಿವುಡ್ ನಟಿ ಜಿಯಾ ಖಾನ್ ಅವರ ನಿಗೂಢ ಸಾವು ಸಂಭವಿಸಿ ಒಂದು ವರ್ಷದ ನಂತರ ಕೊನೆಗೂ ಆಕೆ ತಾಯಿಯ ಮನವಿಗೆ ಬೆಲೆ ಸಿಕ್ಕಿದೆ. ಜಿಯಾ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಒಪ್ಪಿಸಿದೆ.

ಜಸ್ಟೀಸ್ ವಿಎಂ ಕಾನಡೆ ಹಾಗೂ ಪಿಡಿ ಕೊಡೆ ಅವರಿದ್ದ ನ್ಯಾಯಪೀಠ ಈ ತೀರ್ಪನ್ನು ನೀಡಿದೆ. ಜಿಯಾ ಖಾನ್ ಸಾವಿನ ತನಿಖೆ ನಡೆಸುತ್ತಿದ್ದ ಮುಂಬೈ ಪೊಲೀಸ್ ಪಡೆಯ ವಿಶೇಷ ತನಿಖಾ ದಳ ಈಗ ಕೇಸಿನ ಸಂಪೂರ್ಣ ವಿವರವನ್ನು ಸಿಬಿಐಗೆ ಹಸ್ತಾಂತರಿಸಬೇಕಾಗಿದೆ.

'ಮುಂಬೈ ಪೊಲೀಸರಿಂದ ನ್ಯಾಯಯುತ ತನಿಖೆ ಅಸಾಧ್ಯ. ಜಿಯಾಖಾನ್ ಳನ್ನು ಹತ್ಯೆ ಮಾಡಲಾಗಿದೆ' ಎಂದು ಜಿಯಾಖಾನ್ ಅವರ ತಾಯಿ ಹಲವು ಬಾರಿ ಕೋರ್ಟಿನ ಮುಂದೆ ಕೈ ಜೋಡಿಸಿ ಬೇಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆಯಾಗಿದೆ ಎಂಬ ಅಂಶದ ಮೇಲೆ ಸಿಬಿಐ ತನ್ನ ತನಿಖೆ ಮುಂದುವರೆಸಲಿ ಎಂದು ನ್ಯಾಯಪೀಠ ನಿರ್ದೇಶಿಸಿದೆ.[ಆತ್ಮಹತ್ಯೆ ದಿನ ಸಿಸಿಟಿವಿಯಲ್ಲಿ ಕಂಡಿದ್ದೇನು?]

Bombay HC orders CBI probe in actress Jiah Khan's death

ಜಿಯಾಖಾನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಆದಿತ್ಯ ಪಂಚೋಲಿ ಅವರ ಮಗ ಸೂರಜ್ ಪಂಚೋಲಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬ್ರಿಟಿಷ್-ಅಮೆರಿಕನ್ ನಟಿ ಜಿಯಾ ಜುಹು ಅಪಾರ್ಟ್ಮೆಂಟ್ ನಲ್ಲಿ ಕಳೆದ ವರ್ಷ ಜೂ.3ರಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮುನ್ನ 6 ಪುಟಗಳ ಡೆಟ್ ನೋಟ್‌ ಬರೆದಿದ್ದರು. ಸೂರಜ್ ಹಾಗೂ ತನ್ನ ನಡುವಿನ ಸಂಬಂಧವನ್ನು ತಿಳಿಸಿದ್ದರು. ಡೆಟ್ ನೋಟ್ ಆಧಾರದ ಮೇಲೆ ಕಳೆದ ವರ್ಷ ಜೂನ್ 10 ರಂದು ಸೂರಜ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದರು.

ಇದಾದ ನಂತರ ಜುಲೈ 1 ರಂದು ಮುಂಬೈ ಹೈಕೋರ್ಟ್ ಸೂರಜ್‌ಗೆ ಜಾಮೀನು ನೀಡಿತ್ತು. ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಅವಳನ್ನು ಕೊಲೆ ಮಾಡಲಾಗಿದೆ ಎಂದು ಜಿಯಾ ಖಾನ್ ತಾಯಿ ರಾಬಿಯಾ ಖಾನ್ ಆರೋಪಿಸುತ್ತಾ ಬಂದಿದ್ದರು. ಅಲ್ಲದೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದರು. ಮುಂಬೈ ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಿದ್ದರೂ ಪ್ರಕರಣದ ತನಿಖೆ ನಡೆಸುವಂತೆ ಎಫ್ ಬಿಐ ಮೊತೆ ಹೊಕ್ಕುವುದಾಗಿ ಜಿಯಾ ಖಾನ್ ತಾಯಿ ಹೇಳಿದ್ದರು.

English summary
A year after Bollywood actress Jiah Khan was found dead at her Juhu home, the Bombay High Court today handed over the case to CBI for further probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X