ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿನಲ್ಲೂ ಸಾರ್ಥಕತೆ ಮೆರೆದ ಹುತಾತ್ಮನ ಪತ್ನಿ

By Mahesh
|
Google Oneindia Kannada News

ಮುಂಬೈ, ಸೆ.29: ಮುಂಬೈ ಮೇಲೆ ಉಗ್ರರ ದಾಳಿ(26/11) ಸಂದರ್ಭದಲ್ಲಿ ವೀರ ಮರಣ ಹೊಂದಿದ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಅವರ ಪತ್ನಿ ಕವಿತಾ ಕರ್ಕರೆ ಅವರು ಸೋಮವಾರ ಬೆಳಗ್ಗೆ ಮೃತರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಹುತಾತ್ಮನ ಕುಟುಂಬ ಕವಿತಾ ಅವರ ಅಂಗಾಂಗಗಳನ್ನು ಆಸ್ಪತ್ರೆಗೆ ದಾನ ಮಾಡುತ್ತಿದ್ದಾರೆ.

ಮಾಹಿಂನ ಪಿಡಿ ಹಿಂದೂಜಾ ಆಸ್ಪತ್ರೆಗೆ ಶನಿವಾರ ದಾಖಲಾಗಿದ್ದ ಕವಿತಾ ಕರ್ಕರೆ(57) ಅವರು ತೀವ್ರವಾದ ಮೆದುಳು ರಕ್ತ ಸ್ರಾವದಿಂದ ಬಳಲುತ್ತಿದ್ದರು,ಇತ್ತೀಚೆಗಷ್ಟೇ ಚಿಕಿತ್ಸೆ ಫಲಕಾರಿಯಾಗದೆ ಕವಿತಾ ಕರ್ಕರೆ ಅವರು ಕೋಮಾ ಸ್ಥಿತಿಗೆ ಜಾರಿದ್ದರು. ಆದರೆ, ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಕವಿತಾ ಅವರು ಸಾವನ್ನಪ್ಪಿದ್ದಾರೆ ಎಂದು ನರರೋಗ ತಜ್ಞ ವೈದ್ಯ ಡಾ. ಪಿಪಿ ಅಶೋಕ್ ಹೇಳಿದ್ದಾರೆ. [ದಾಳಿ ರುವಾರಿ ಹೆಡ್ಲಿಗೆ 35 ವರ್ಷ ಶಿಕ್ಷೆ]

ಕವಿತಾ ಅವರ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡದೇ ವೈದ್ಯಕೀಯ ವಿದ್ಯಾರ್ಥಿಗಳ ಸಹಾಯಕ್ಕಾಗಿ ಸಂಶೋಧನೆಗಾಗಿ ನೀಡಲಾಗುತ್ತಿದ್ದು, ಅವರ ದೇಹದ ಪ್ರಮುಖ ಅಂಗಗಳನ್ನು ದಾನ ಮಾಡಲಾಗುತ್ತದೆ. ಕಿಡ್ನಿಗಳು, ಯಕೃತ್ತು, ಕಣ್ಣುಗಳು, ಚರ್ಮವನ್ನು ಅಗತ್ಯಬಿದ್ದ ಇತರೆ ರೋಗಿಗಳಿಗೆ ನೀಡಲಾಗುವುದು ಎಂದು ಕುಟುಂಬ ವರ್ಗ ಹೇಳಿದೆ. ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಹಾಗೂ ಕವಿತಾ ದಂಪತಿಗೆ ಜೂಯಿ, ಸಯಾಲಿ ಎಂಬ ಇಬ್ಬರು ಪುತ್ರಿಯರು ಹಾಗೂ ಆಕಾಶ್ ಎಂಬ ಒಬ್ಬ ಪುತ್ರರಿದ್ದಾರೆ. [ಅಮೆರಿಕಕ್ಕೆ ಇರುವ ಕಿಚ್ಚು ಭಾರತ ಸರ್ಕಾರಕ್ಕೆ ಏಕಿಲ್ಲ]

Slain ATS chief Hemant Karkare’s wife passes away

26/11 ಉಗ್ರರ ದಾಳಿ: 2008ರಲ್ಲಿ ನವೆಂಬರ್ 26ರಂದು ಉಗ್ರರು ಮುಂಬೈನ ವಿವಿಧೆಡೆ ಉಗ್ರರು ದಾಳಿ ಮಾಡಿದ್ದರು, ಸಿಎಸ್ಟಿ ರೈಲ್ವೇ ನಿಲ್ದಾಣ, ಕಾಮಾ ಆಸ್ಪತ್ರೆ ಮತ್ತು ತಾಜ್ ಹೊಟೆಲ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮನಬಂದಂತೆ ಗುಂಡು ಹಾರಿಸಿ ಅಮಾಯಕರನ್ನು ಕೊಂದಿದ್ದರು.

ಈ ಸಂದರ್ಭದಲ್ಲಿ ಕಾಮಾ ಆಸ್ಪತ್ರೆಯ ಬಳಿ ಅಡಗಿದ್ದ ಇಬ್ಬರು ಉಗ್ರರನ್ನು ಹಿಡಿಯಲು ಮುಂಬೈ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಅವರು ನೇತೃತ್ವದ ತಂಡ ಹೊಂಚು ಹಾಕಿ ಹೊರಗಡೆ ಕಾದು ಕುಳಿತ್ತಿತ್ತು. ಅದರೆ, ಉಗ್ರರಿಗೆ ಈ ಬಗ್ಗೆ ಸುಳಿವು ಸಿಕ್ಕಿ ಹೇಮಂತ್ ಕರ್ಕರೆ ಸೇರಿದಂತೆ ದಕ್ಷ ಅಧಿಕಾರಿಗಳಾದ ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್ ಅವರನ್ನು ಕೊಂದು ಹಾಕಿದ್ದರು. [ಕರ್ಕರೆ ಕೊಂದದ್ದು ನಾನೇ : ಕಸಬ್ ತಪ್ಪೊಪ್ಪಿಗೆ]

ಮೂಂಬೈ ಪೊಲೀಸ್ ಅಧಿಕಾರಿಗಳಿಗೆ ವಿಶೇಷ ಭದ್ರತಾ ಕವಚದಿಂದ ರಕ್ಷಣೆ ಸಾಧ್ಯವಿಲ್ಲ, ಆಧುನಿಕ ಶಸ್ತ್ರಗಳು ನಮ್ಮವರ ಬಳಿಯಿಲ್ಲ, ನನ್ನ ಪತಿ ಸಾವು ಗೃಹ ಇಲಾಖೆ ಹೊಸ ಪಾಠವಾಗಲಿ ಅಧಿಕಾರಿಗಳ ಕಷ್ಟ ಸುಖದ ಬಗ್ಗೆ ವಿಚಾರಿಸಲಿ ಎಂದು ಕವಿತಾ ಕರ್ಕರೆ ಅವರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Widow of the slain 26/11 martyr and former Maharashtra ATS chief Hemant Karkare, Kavita Karkare passed away at Hinduja Hospital in Mahim on Monday, Sept 29, following a brain haemorrhage. Karkare family agrees to donate organs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X