ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಟಾಪ್ 10 ಇಂಜಿನಿಯರಿಂಗ್ ಕಾಲೇಜ್

By Mahesh
|
Google Oneindia Kannada News

ಬೆಂಗಳೂರು, ಜೂ. 20: ಎಲೆಕ್ಟ್ರಾನಿಕ್ಸ್, ಮೆಡಿಕಲ್, ಡೆಂಟಲ್ ಆಕ್ಟಿಟೆಕ್ಚರ್ ಕೋರ್ಸ್ ಗಳಿಗಾಗಿ ಪ್ರತಿ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪರೀಕ್ಷೆ ನಡೆಸುತ್ತದೆ. ಇದಕ್ಕೆ ಸಮಾನಾಂತರವಾಗಿ ಕಾಮೆಡ್ ಕೆ ಕೂಡಾ ಪರೀಕ್ಷೆ ನಡೆಸುತ್ತದೆ. ಆದರೆ, ಫಲಿತಾಂಶದ ನಂತರ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಕಾಲೇಜು ಆಯ್ಕೆ ಗೊಂದಲ ಇದ್ದೇ ಇರುತ್ತದೆ.

ಎಲೆಕ್ಟಾನಿಕ್ಸ್ ಹಾಗೂ ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರವಲ್ಲದೆ, ಬಯೋ ಟೆಕ್ನಾಲಜಿ, ಸೆರಾಮಿಕ್, ರೇಷ್ಮೆ ತಂತ್ರಜ್ಞಾನ, ಪರಿಸರ ಇಂಜಿನಿಯರಿಂಗ್, ಸಿವಿಎಲ್, ಮೆಕಾಟ್ರಾನಿಕ್ಸ್, ರೋಬೊಟಿಕ್ಸ್ ವಿಷಯಗಳತ್ತ ವಿದ್ಯಾರ್ಥಿಗಳು ಈಗೀಗ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎನ್ನಬಹುದು

ಕಾಲೇಜು ಆಯ್ಕೆ ಮಾಡುವಾಗ ಉತ್ತಮ ಬೋಧಕ ವರ್ಗ, ಉತ್ತಮ ಮೂಲ ಸೌಕರ್ಯ ಹಾಗೂ ಕ್ಯಾಂಪಸ್ ಸಂದರ್ಶನ ಅವಕಾಶ ಮುಂತಾದ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ. ಹೀಗೆ ಹತ್ತು ಹಲವು ವಿಷಯಗಳ ಮೇಲೆ ಗಮನ ಹರಿಸಿದ ನಂತರ ಒಂದು ಹಂತದ ನಿರ್ಧಾರ ಕೈಗೊಳ್ಳಲು ಸಾಧ್ಯ.[ಭಾರತದ ಟಾಪ್ 10 ವಿಶ್ವವಿದ್ಯಾಲಯಗಳು]

ಇದರ ಜೊತೆಗೆ ಪ್ರತಿವರ್ಷ ಕಾಲೇಜಿನ ಏಳಿಗೆ, ನೇಮಕಾತಿ ಹಾಗೂ ಇತರೆ ಗುಣಮಟ್ಟದ ಆಧಾರದ ಮೇಲೆ ವಿಶ್ವವಿದ್ಯಾಲಯದ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಹಲವು ಮ್ಯಾಗಜೀನ್ ಗಳು, ವಿಶ್ವವಿದ್ಯಾಲಯಗಳು ಕೂಡಾ ಸಂಶೋಧನೆ ನಡೆಸಿ ಕರ್ನಾಟಕ ಟಾಪ್ ಕಾಲೇಜುಗಳ ಪಟ್ಟಿ ತಯಾರಿಸಿ ಬಿಡುಗಡೆಗೊಳಿಸಲಾಗುತ್ತದೆ.

ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ #1

ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ #1

* ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸುರತ್ಕಲ್ 2013ರಲ್ಲಿ ಗ್ರೇಡ್ : ರಾಜ್ಯ ಮಟ್ಟದಲ್ಲಿ AAA+ ಹಾಗೂ ರಾಷ್ಟ್ರಮಟ್ಟದಲ್ಲಿ AA+
* 1960 ರಲ್ಲಿ ಸ್ಥಾಪನೆ, ಪದವಿ ಪೂರ್ವ ಹಾಗೂ ಪದವಿ ಕೋರ್ಸ್ ಅಧ್ಯಯನ ಮಾಡಬಹುದು.
* 11 ಪೂರಕ ಕೇಂದ್ರ 200ಕ್ಕೂ ಅಧಿಕ ಬೋಧಕ ಸಿಬ್ಬಂದಿ, 300ಕ್ಕೂ ಅಧಿಕ ಬೋಧಕೇತರ ಸಿಬ್ಬಂದಿ ಹೊಂದಿದೆ.
* ಹೆಚ್ಚಿನ ಮಾಹಿತಿಗೆ : ಎನ್ಐಟಿಕೆ ವೆಬ್ ತಾಣ ನೋಡಿ

ಐಐಐಟಿ-ಬಿ #2

ಐಐಐಟಿ-ಬಿ #2

* ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ, ಬೆಂಗಳೂರು ಡೀಮ್ಡ್ ವಿಶ್ವವಿದ್ಯಾಲಯವಾಗಿದೆ.
* 1999ರಲ್ಲಿ ಸ್ಥಾಪನೆಯಾಗಿರುವ ಐಐಐಟಿ-ಬಿಗೆ ಸರ್ಕಾರ ಹಾಗೂ ಐಟಿ ಕ್ಷೇತ್ರದಿಂದ ನಿಧಿ ಹರಿದು ಬರುತ್ತಿದೆ.
* ಹೆಚ್ಚಿನ ಮಾಹಿತಿಗೆ http://www.iiitb.ac.in/

ಎಂಎಸ್ ಆರ್ ಐಟಿ, #3

ಎಂಎಸ್ ಆರ್ ಐಟಿ, #3

ಎಂಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು 2013ರಲ್ಲಿ ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AAA
* 1962 ರಲ್ಲಿ ಸ್ಥಾಪಿತವಾಗಿರುವ ಎಂಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಯಾಗಿದೆ.
ಹೆಚ್ಚಿನ ಮಾಹಿತಿಗೆ : ಎಂಎಸ್ ಆರ್ ಐಟಿ ವೆಬ್ ತಾಣ

ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು #4

ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು #4

* ಬಿಎಂಎಸ್ ಕಾಲೇಜು ಆಫ್ ಇಂಜಿನಿಯರಿಂಗ್, ಬೆಂಗಳೂರು 2013ರಲ್ಲಿ ಪಡೆದಿದ್ದ ಗ್ರೇಡ್: ರಾಜ್ಯಮಟ್ಟದಲ್ಲಿ AAA+
* 1946ರಲ್ಲಿ ಸ್ಥಾಪಿತವಾದ ಖಾಸಗಿ ಇಂಜಿನಿಯರಿಂಗ್ ಕಾಲೇಜು ಇದಾಗಿದ್ದು, ದೇಶದ ವಿವಿಧೆಡೆ ಹಾಗೂ ವಿದೇಶಗಳಿಂದಲೂ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಹೆಚ್ಚೆಚ್ಚು ಕೋರ್ಸ್ ಗಳನ್ನು ನೀಡುವ ಮೂಲಕ ಹೆಚ್ಚು ವಿದ್ಯಾರ್ಥಿ ವೃಂದ ಹೊಂದಿರುವ ಕರ್ನಾಟಕದ ಕಾಲೇಜ್ ಎನಿಸಿದೆ
ಹೆಚ್ಚಿನ ಮಾಹಿತಿಗೆ ಬಿಎಂಎಸ್ ಕಾಲೇಜಿನ ವೆಬ್ ತಾಣ ನೋಡಿ http://www.bmsce.in/

ಆರ್ ವಿಸಿಇ, ಬೆಂಗಳೂರು #5

ಆರ್ ವಿಸಿಇ, ಬೆಂಗಳೂರು #5

* ಆರ್ ವಿ ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು ಕಾಲೇಜಿಗೆ ಸಿಕ್ಕಿರುವ ರಾಜ್ಯಮಟ್ಟದಲ್ಲಿ AAA+
* 1963ರಲ್ಲಿ ಸ್ಥಾಪಿತವಾಪಿರುವಾಗಿರುವ ಈ ಕಾಲೇಜು ಹೆಚ್ಚೆಚ್ಚು ಕೌಶಲ್ಯ ಅಭಿವೃದ್ಧಿಗೆ ಮಹತ್ವ ನೀಡುತ್ತಾ ಬಂದಿದೆ.
ಹೆಚ್ಚಿನ ಮಾಹಿತಿಗೆ ಓದಿ : http://www.rvce.edu.in/

 ಪಿಇಎಸ್ ಐಟಿ #6

ಪಿಇಎಸ್ ಐಟಿ #6

* ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AAA+
* ಪಿಇಎಸ್ ಶಿಕ್ಷಣ ಸಂಸ್ಥೆಯಿಂದ 1988ರಲ್ಲಿ ಸ್ಥಾಪನೆಯಾದ ಇಂಜಿನಿಯರಿಂಗ್ ಕಾಲೇಜ್ ಇದಾಗಿದೆ.
ಕಾಲೇಜಿನ ವೆಬ್ ತಾಣ: http://www.pes.edu/

ಎಸ್ ಜೆಸಿಇ, ಮೈಸೂರು #7

ಎಸ್ ಜೆಸಿಇ, ಮೈಸೂರು #7

ಶ್ರೀಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್(ಎಸ್ ಜೆಸಿಇ) 1963ರಲ್ಲಿ ಮೈಸೂರಿನಲ್ಲಿ ಸ್ಥಾಪನೆಗೊಂಡಿತು.
* ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್, ಮೈಸೂರು ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AAA

*ಕಾಲೇಜಿನ ವೆಬ್ ತಾಣ: http://www.sjcemysore.org/

ಬಿಐಟಿ, ಬೆಂಗಳೂರು #8

ಬಿಐಟಿ, ಬೆಂಗಳೂರು #8

ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ) 1979ರಲ್ಲಿ ಸ್ಥಾಪನೆಯಾಗಿದ್ದು ವಿಶ್ವೇಶ್ವರಯ್ಯ ಟೆಕ್ನಾಲಜಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿದ್ದು ಎಐಸಿಟಿಇ ಮಾನ್ಯತೆ ಪಡೆದುಕೊಂಡಿದೆ.

ಕಾಲೇಜಿನ ವೆಬ್ ತಾಣ :http://bit-bangalore.edu.in/

ಯುವಿಸಿಇ, ಬೆಂಗಳೂರು #9

ಯುವಿಸಿಇ, ಬೆಂಗಳೂರು #9

* ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AAA
* 1917ರಲ್ಲಿ ಸ್ಥಾಪನೆಗೊಂಡ ಕರ್ನಾಟಕದ ಪುರಾತನ ಇಂಜಿನಿಯರಿಂಗ್ ಕಾಲೇಜು ಇದಾಗಿದ್ದು, ಮೈಸೂರು ವಿವಿ ಅಧೀನದಲ್ಲಿದೆ.

ಎನ್ ಐಇ, ಮೈಸೂರು #10

ಎನ್ ಐಇ, ಮೈಸೂರು #10

ದಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್, ಮೈಸೂರು ಪಡೆದಿರುವ ಗ್ರೇಡ್: ರಾಜ್ಯಮಟ್ಟದಲ್ಲಿ AAA
ಔಟ್ ಲುಕ್ ಮ್ಯಾಗಜೀನ್ ನ ಟಾಪ್ 100 ಕಾಲೇಜು ಪಟ್ಟಿಯಲ್ಲಿ 32ನೇ ಶ್ರೇಯಾಂಕ ಪಡೆದುಕೊಂಡಿದ್ದ್ದು ವಿಟಿಯು ಅಧೀನಕ್ಕೆ ಒಳಪಟ್ಟಿದೆ.
ಕಾಲೇಜಿನ ವೆಬ್ ತಾಣ ನೋಡಿ http://www.nie.ac.in/

English summary
The rankings for the engineering colleges are selected on the basis of academic reputation, students facility ration, placement record, students reviews, quality of teaching, infrastructure and other minor factors. Here is the list of Top 10 engineering colleges in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X