ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗ ದತ್ತು ಸುಪ್ರೀಂಕೋರ್ಟ್ ನೂತನ ಸಿಜೆ

|
Google Oneindia Kannada News

ಬೆಂಗಳೂರು, ಸೆ.4 : ಕರ್ನಾಟಕದವರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶ ಸಿಕ್ಕಿದೆ. ಕನ್ನಡಿಗರಾದ ಎಚ್.ಎಲ್.ದತ್ತು ಅವರು ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಚಿಕ್ಕಮಗಳೂರು ಮೂಲದ ದತ್ತು ಅವರು 42ನೇ ಸಿಜೆಯಾಗಿ ಸೆ.28ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಸದ್ಯ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ಆರ್.ಎಂ.ಲೋಧಾ ಅವರು, ಸೆ.27ರಂದು ನಿವೃತ್ತಿ ಹೊಂದಲಿದ್ದು, ಅವರ ಸ್ಥಾನವನ್ನು ಕರ್ನಾಟಕದ ಹಂದ್ಯಾಲ ಲಕ್ಷ್ಮೀನಾರಾಯಣಸ್ವಾಮಿ ದತ್ತು (ಎಚ್‌.ಎಲ್‌. ದತ್ತು) ಅವರು ಅಲಂಕರಿಸಲಿದ್ದಾರೆ.

Justice H.L.Dattu

ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಬುಧವಾರ ಸಂಜೆ ನ್ಯಾ.ದತ್ತು ಅವರ ನೇಮಕಕ್ಕೆ ಅಂತಿಮ ಒಪ್ಪಿಗೆ ನೀಡಿದ್ದಾರೆ. ನ್ಯಾ.ಲೋಧಾ ಅವರ ನೇತೃತ್ವದ ನ್ಯಾಯಾಧೀಶರ ನೇಮಕಾತಿ ಸಮಿತಿ (ಕೊಲಿಜಿಯಂ), ದತ್ತು ಅವರ ಹೆಸರನ್ನು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಡತ ರವಾನಿಸಿತ್ತು. ಸರ್ಕಾರವೂ ಇದನ್ನು ಒಪ್ಪಿ ರಾಷ್ಟ್ರಪತಿಗಳಿಗೆ ರವಾನಿಸಿತ್ತು. [ದತ್ತು ಅವರ ಸಂಕ್ಷಿಪ್ತ ಪರಿಚಯ]

ಸೆ.28 ರಂದು 42ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ದತ್ತು ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಇವರ ಅವಧಿ 2015ರ ಡಿಸೆಂಬರ್‌ 3ರ ವರೆಗೆ ಇರಲಿದೆ. ಸದ್ಯ ನ್ಯಾ.ದತ್ತು ಅವರು 2ಜಿ ಸ್ಪೆಕ್ಟ್ರಂ ಹಗರಣದ ವಿಚಾರಣೆ ನಡೆಸುತ್ತಿರುವ ಪೀಠದ ನೇತೃತ್ವ ವಹಿಸಿದ್ದಾರೆ. ಈ ಹಿಂದೆ ಅವರನ್ನು ಲೋಕಪಾಲ ಆಯ್ಕೆ ಸಮಿತಿಗೂ ಶಿಫಾರಸು ಮಾಡಲಾಗಿತ್ತು. [ಅಮಿತ್ ಶಾ ಗೆ ಕ್ಲೀನ್ ಚಿಟ್ ನೀಡಿಲ್ಲ: ಸದಾಶಿವಂ]

ನಾಲ್ಕನೇ ಕನ್ನಡಿಗರು : ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಹುದ್ದೆ ಅಲಂಕರಿಸುತ್ತಿರುವ ನ್ಯಾ.ದತ್ತು ಅವರು ನಾಲ್ಕನೇ ಕನ್ನಡಿಗರಾಗಿದ್ದಾರೆ. ಇದುವರೆಗೂ ಇ.ಎಸ್‌. ವೆಂಕಟರಾಮಯ್ಯ, ಎಂ.ಎನ್‌. ವೆಂಕಟಾಚಲಯ್ಯ, ಎಸ್‌. ರಾಜೇಂದ್ರ ಬಾಬು ಅವರು ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದರು.

English summary
Karnataka based Justice H.L.Dattu is set to become the next Chief Justice of India, after the present incumbent R.M.Lodha retires on 27 September. President Pranab Mukherjeee approved for Justice Dattu's appointment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X