ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್: ಬ್ರೆಜಿಲ್ vs ಕ್ರೊವೇಷಿಯಾ ಮುನ್ನೋಟ

By Mahesh
|
Google Oneindia Kannada News

ಸಾವೊ ಪಾಲೋ, ಜೂ.12: ಫೀಫಾ ವಿಶ್ವಕಪ್ ಫುಟ್ಬಾಲ್‌ನ ಉದ್ಘಾಟನಾ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಅತಿಥೇಯ ಬ್ರೆಜಿಲ್ ತಂಡ ಗುರುವಾರ ಮಧ್ಯರಾತ್ರಿ ಕ್ರೊವೇಷಿಯಾ ತಂಡವನ್ನು ಎದುರಿಸಲಿದೆ. ಅರೆನಾ ಸಾವೊ ಪಾಲೋ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು (ಭಾರತೀಯ ಕಾಲಮಾನ ಪ್ರಕಾರ ಜೂ.13 ರ 1.30 ಗಂಟೆ ) ಭಾರತೀಯ ಕ್ರೀಡಾಭಿಮಾನಿಗಳು ಸೋನಿ ಸಿಕ್ಸ್ ವಾಹಿನಿಯಲ್ಲಿ ವೀಕ್ಷಿಸಬಹುದು.

ಬ್ರೆಜಿಲ್ ನ ಪ್ರತಿಭಾವಂತ ಯುವ ಆಟಗಾರರಾದ ನೇಮಾರ್, ಆಸ್ಕರ್ ಮತ್ತು ಡಾನಿ ಅಲ್ವೇಸ್ ಆಟದ ಜತೆಗೆ ಕ್ರೋಷಿಯಾ ತಂಡದ ಸ್ಟಾರ್ ಲೂಕ್ ಮೊಡ್ರಿಕ್ ಆಟ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಮೊದಲ ಪಂದ್ಯದಲ್ಲೆ ಬ್ರೆಜಿಲ್ ಗೆ ಆಘಾತ ನೀಡುವ ಉತ್ಸಾಹದಲ್ಲಿ ಕ್ರೊವೇಷಿಯಾ ತಂಡವಿದೆ. [ಎ ಗುಂಪಿನ ವೇಳಾಪಟ್ಟಿ]

ಬ್ರೆಜಿಲ್ ತಂಡ ತಾನಾಡಿದ್ದ 16 ಪಂದ್ಯಗಳಲ್ಲಿ 15ರಲ್ಲಿ ಗೆಲುವು ಸಾಧಿಸಿ ಉತ್ತಮ ಫಾರ್ಮ್ ನಲ್ಲಿದೆ. ಅರ್ಹತಾ ಸುತ್ತಿನ ಪ್ಲೇ- ಆಫ್‌ನಲ್ಲಿ ಐಸ್‌ಲ್ಯಾಂಡ್‌ನ್ನು ಮಣಿಸಿ ವಿಶ್ವಕಪ್‌ನ ಗ್ರೂಪ್ ಹಂತಕ್ಕೆ ಕ್ರೊವೇಷಿಯಾ ಪ್ರವೇಶಿಸಿದೆ. ಉಭಯ ತಂಡಗಳ ಬಲಾಬಲ, ಸಂಭಾವ್ಯ ರಕ್ಷಣಾ ತಂತ್ರ, ಅಂತಿಮ XI ಆಟಗಾರರ ಬಗ್ಗೆ ಇಲ್ಲಿದೆ ವಿವರ: ಚಿತ್ರಕೃಪೆ: ವಿಕಿಪೀಡಿಯ

ರಕ್ಷಣಾ ತಂತ್ರಗಾರಿಕೆ

ರಕ್ಷಣಾ ತಂತ್ರಗಾರಿಕೆ

ಬ್ರೆಜಿಲ್ (4-2-3-1)
ಡಿಫೆನ್ಸ್ : ಡ್ಯಾನಿ ಆಲ್ವೆಸ್, ಡೇವಿಡ್ ಲೂಯಿಜ್,ಥಿಯಾಗೋ ಸಿಲ್ವ, ಮಾರ್ಸೆಲೊ,
ಮಿಡ್ ಫೀಲ್ಡ್: ಗುಸ್ಟವೊ, ಪಾಲಿನ್ಹೊ,
ಸೆಂಟರ್ ಫಾರ್ವರ್ಡ್: ಆಸ್ಕರ್, ಹಲ್ಕ್, ನೇಮಾರ್
ಫಾರ್ವರ್ಡ್: ಫ್ರೆಡ್
ಗೋಲ್ ಕೀಪರ್: ಜೂಲಿಯೋ ಸೀಸರ್

ಕ್ರೊವೇಷಿಯಾ(4-2-3-1)
ಡಿಫೆನ್ಸ್ : ಸ್ರಿನಾ, ಲೊವ್ರೆನ್, ಕೊರ್ಲೂಕಾ, ಪ್ರಾನ್ಜಿಕ್
ಮಿಡ್ ಫೀಲ್ಡ್: ವುಕೊಜೆವಿಕ್, ಮೊಡ್ರಿಕ್
ಸೆಂಟರ್ ಫಾರ್ವರ್ಡ್: ಪೆರಿಸಿಕ್, ರಾಕಿಟಿಕ್, ಕೊವಸಿಕ್
ಫಾರ್ವರ್ಡ್: ಓಲಿಕ್
ಗೋಲ್ ಕೀಪರ್: ಪ್ಲೆಟಿಕೊಸಾ

ಮ್ಯಾಚ್ ರೆಫ್ರಿ: ಯೂಯಿಚಿ ನಿಶಿಮೂರಾ(ಜಪಾನ್)

ಬೆಟ್ಟಿಂಗ್: ಬ್ರೆಜಿಲ್ 1-3, ಕ್ರೊವೇಷಿಯಾ 10-1, ಡ್ರಾ 7-2
ನಮ್ಮ ಅಭಿಪ್ರಾಯ: ಬ್ರೆಜಿಲ್ 2, ಕ್ರೊವೇಷಿಯಾ 0.

ಮುಖಾಮುಖಿ-ಅಂಕಿ ಅಂಶ

ಮುಖಾಮುಖಿ-ಅಂಕಿ ಅಂಶ

2006ರ ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯದಲ್ಲಿ ಬ್ರೆಜಿಲ್ಲ್ ಮತ್ತು ಕ್ರೊವೇಷಿಯಾ ತಂಡ ಕೊನೆಯ ಬಾರಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಕಾಕಾ ಬಾರಿಸಿದ ಏಕೈಕ ಗೋಲು ನೆರವಿನಲ್ಲಿ ಬ್ರೆಜಿಲ್ ತಂಡ ಕ್ರೊವೇಷಿಯಾ ವಿರುದ್ಧ 1-0 ಅಂತರದ ಗೆಲುವು ದಾಖಲಿಸಿತ್ತು.

* ಕಳೆದ 20 ವಿಶ್ವಕಪ್ ನಲ್ಲಿ ಅತಿಥೇಯ ರಾಷ್ಟ್ರ ಇದುವರೆವಿಗೂ ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿಲ್ಲ. ಅತಿಥೇಯರು 14 ಬಾರಿ ಗೆಲುವು ಸಾಧಿಸಿದ್ದ್, 6 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದೆ.
* ಕಳೆದ 12 ಉದ್ಘಾಟನಾ ಪಂದ್ಯಗಳಲ್ಲಿ 1 ಅಥವಾ ಅದಕ್ಕಿಂತ ಕಡಿಮೆ ಗೋಲುಗಳು ಮಾತ್ರ ಬಂದಿವೆ.
* 1950ರಲ್ಲಿ ವಿಶ್ವಕಪ್ ಆತಿಥ್ಯವಹಿಸಿದ್ದ ಬ್ರೆಜಿಲ್ ಮೊದಲ ಪಂದ್ಯದಲ್ಲಿ ಮೆಕ್ಸಿಕೋ ತಂಡವನ್ನು 4-0 ಅಂತರದಲ್ಲಿ ಮಣಿಸಿತ್ತು. ಈ ಬಾರಿ ಕ್ರೊವೇಷಿಯಾ ಗೆದ್ದರೆ ಹೊಸ ಇತಿಹಾಸ ರಚನೆಯಾಗಲಿದೆ.
ತಂಡದಿಂದ ಬಂದ ಸುದ್ದಿ

ತಂಡದಿಂದ ಬಂದ ಸುದ್ದಿ

*ಗಾಯಗೊಂಡಿದ್ದ ಬ್ರೆಜಿಲ್ ತಂಡದ ಸ್ಟಾರ್ ಆಟಗಾರ ನೇಮಾರ್(ಚಿತ್ರದಲ್ಲಿರುವವರು)ಇದೀಗ ಚೇತರಿಸಿಕೊಂಡು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.

* ಕ್ರೊವೇಷಿಯಾ ತಂಡದ ಗಾಯಾಳುಗಳ ಸಮಸ್ಯೆ ಎದುರಿಸುತ್ತಿದೆ. ಡ್ಯಾನಿಜೆಲ್ ಪ್ರಾಂಜಿಂಕ್ ಮತ್ತು ಐವಾನ್ ಸ್ಟ್ರೀನಿಕ್ ಗಾಯದಿಂದಾಗಿ ಮೊದಲ ಪಂದ್ಯದಲ್ಲಿ ಆಡುವುದು ಸಂಶಯ. ಮಾರಿಯೊ ಮಾಂಡ್‌ಝುಕಿಕ್ ಒಂದು ಪಂದ್ಯಕ್ಕೆ ಅಮಾನತುಗೊಂಡಿದ್ದಾರೆ.

ನೇಮಾರ್ vs ಲುಕಾ ಮೊಡ್ರಿಕ್

ನೇಮಾರ್ vs ಲುಕಾ ಮೊಡ್ರಿಕ್

ಬಾರ್ಸಿಲೋನಾದ 22ರ ಹರೆಯದ ಸ್ಟ್ರೈಕರ್ ನೇಮಾರ್ ಬ್ರೆಜಿಲ್ ನ ಸ್ಟಾರ್ ಆಟಗಾರ. 2010ರಲ್ಲಿ ಬ್ರೆಜಿಲ್ ತಂಡ ಸೇರಿರುವ ನೇಮಾರ್ 48 ಪಂದ್ಯಗಳಲ್ಲಿ 31 ಗೋಲು ಗಳಿಸಿದ್ದು, ಕಾನ್ಫೆಡರೇಷನ್ ಕಪ್ ಯಶಸ್ಸಿಗೆ ಕಾರಣರಾಗಿದ್ದಾರೆ. ಬ್ರೆಜಿಲ್ ನಾಯಕ ಥಿಯಾಗೋ ಸಿಲ್ವ, ಬಾರ್ಸಿಲೋನದ ಸ್ಟಾರ್ ಅನುಭವಿ ಡ್ಯಾನಿ ಅಲ್ವೇಸ್ ಅವರು ಮೊದಲ ಪಂದ್ಯ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ.

ಕ್ರೊವೇಷಿಯಾ ತಂಡದ .28ರ ಹರೆಯದ ಮಿಡ್ ಫೀಲ್ಡರ್ ಲುಕಾ ಮೊಡ್ರಿಕ್ 2006ರಿಂದ ಕ್ರೋಷಿಯಾ ತಂಡದಲ್ಲಿದ್ದಾರೆ. ಅವರು 75 ಪಂದ್ಯಗಳಲ್ಲಿ 8 ಗೋಲು ದಾಖಲಿಸಿದ್ದಾರೆ. ಮೊಡ್ರಿಕ್ ಕ್ಲಿಕ್ ಆದರೆ, ಬ್ರೆಜಿಲ್ ಗೆ ತೊಂದರೆ ಕೊಡಬಹುದು. 1998ರಲ್ಲಿ ಸೆಮಿಫೈನಲ್ ತಲುಪಿದ್ದ ಕ್ರೊವೇಷಿಯಾ ಡವೊರ್ ಸುಕರ್, ರಾಬರ್ಟ್ ಪ್ರೊಸಿನೆಕಿರಂಥ ಉತ್ತಮ ಆಟಗಾರರನ್ನು ನೀಡಿದ್ದು ಈ ಬಾರಿ ಶುಭಾರಂಭ ಮಾಡುವುದೇ ಕಾದು ನೋಡೋಣ.

ಚಿತ್ರಕೃಪೆ: ವಿಕಿಪೀಡಿಯ

English summary
Brazil vs Croatia: Fifa World Cup 2014 match preview. Catch World Cup game between Brazil and Croatia at Arena Corinthians, Sao Paulo, on Thursday June 12, 2014, kick-off 21.00 (BST) 1.30 AM (IST). Here are the team news, Possible formation and Probables to make final XI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X