ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಕಡಿದು ಹಾಕುತ್ತೇನೆ: ಮಸೂದ್ ವಿಡಿಯೋ

By Mahesh
|
Google Oneindia Kannada News

ಲಕ್ನೋ, ಮಾ.28: ಇಲ್ಲಿನ ಸಹಾರಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ತನ್ನ ಪಕ್ಷಕ್ಕೆ ಭಾರಿ ಮುಜುಗರ ತಂದೊಡ್ಡಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಅವಾಚ್ಯ ಶಬ್ದ ಬಳಕೆ ಹಾಗೂ ಕೊಲೆ ಬೆದರಿಕೆ ಹಾಕಿದ ವಿಡಿಯೋ ತುಣುಕು ಹೊರಬಿದ್ದಿದೆ.

ಉತ್ತರಪ್ರದೇಶದ ಸಹಾರಪುರ ಲೋಕಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಇಮ್ರಾನ್ ‌ ಮಸೂದ್ ಎನ್ನುವವರು ನಾವು ಮೋದಿಯನ್ನು ಕತ್ತರಿಸಿ ಹಾಕುತ್ತೇವೆ(ಹಮ್ ಮೋದಿ ಕಿ ಕುಟ್ಟಿ ಕಾಟ್ ದೇಂಗೆ ) ಎಂದು ತಮ್ಮ ಸಮುದಾಯದವರೊಡನೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

ಮಸೂದ್ ಅವರ ಈ ಹೇಳಿಕೆಗೆ ದೇಶದೆಲ್ಲೆಡೆ ಭಾರಿ ವಿರೋಧ ವ್ಯಕ್ತವಾಗಿದೆ. ಪ್ರಚೋದನಕಾರಿ ಭಾಷಣದ ವಿಡಿಯೋ ತುಣುಕು ಬಗ್ಗೆ ಸೂಕ್ತ ಪರಿಶೀಲನೆ ಆಗಬೇಕು. ಮಸೂದ್ ಅವರು ಕ್ಷಮೆಯಾಚಿಸಬೇಕು ಎಂದು ಮೌಲಾನಾ ಖಾಲೀದ್ ಮಸೂದ್ ಆಗ್ರಹಿಸಿದ್ದಾರೆ.

Video: Cong leader threatens to kill Narendra Modi ahead of election

ವಿಡಿಯೋ ಬಗ್ಗೆ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಮಸೂದ್ ಇದು ಹಳೆ ವಿಡಿಯೋ, ನಾನು ಪ್ರಜಾಪ್ರಭುತ್ವದ ಅಂಶಗಳಿಗನುಗುಣವಾಗಿ ಮೋದಿ ಅವರಿಗೆ ಉತ್ತರ ನೀಡುತ್ತೇನೆ. ನಾನೇನು ಹೇಳಬಾರದ್ದು ಹೇಳಿಲ್ಲ ಎಂದಿದ್ದಾರೆ.

ಉತ್ತರ ಪ್ರದೇಶ ಗುಜರಾತ್ ಅಲ್ಲ, ಗುಜರಾತಿನಲ್ಲಿ ಕೇವಲ 4% ಮುಸ್ಲಿಮರಿದ್ದಾರೆ. ಆದರೆ ಉತ್ತರಪ್ರದೇಶದಲ್ಲಿ 22% ಮುಸ್ಲಿಮರಿದ್ದಾರೆ. ನಾನು ನರೇಂದ್ರ ಮೋದಿ ಅವರ ವಿರುದ್ಧ ಹೋರಾಡುತ್ತೇನೆ, ನನಗೆ ಮೋದಿಗೆ ಹೇಗೆ ಉತ್ತರ ನೀಡಬೇಕೆಂದು ತಿಳಿದಿದೆ. ನಾವು ಮೋದಿಯನ್ನು ಕತ್ತರಿಸಿ ಹಾಕುತ್ತೇವೆ. ಮೋದಿಯವರು ಗುಜರಾತ್ ‌ ದಂಗೆಯ ವಿಚಾರದಲ್ಲಿ ತಪ್ಪೊಪ್ಪಿ ಕೊಂಡರೆ ಮಾತ್ರ ಕ್ಷಮೆ ಕೋರುವುದಾಗಿ ಮಸೂದ್ ‌ಹೇಳಿದ್ದಾರೆ. ಮಸೂದ್ ಹೇಳಿಕೆಯ Un-cut ವಿಡಿಯೋ ಇಲ್ಲಿದೆ:


ವಿಡಿಯೋ ಬಗ್ಗೆ ಕ್ರಮ ಜರುಗಿಸಿರುವ ಚುನಾವಣಾ ಆಯೋಗ, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕಾಂಗ್ರೆಸ್ ಪಕ್ಷಕ್ಕೆ ಸೂಚಿಸಿದೆ. ಉತ್ತರಪ್ರದೇಶದ ವಾರಣಾಸಿಯಲ್ಲಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿದ್ದು, ಎಎಪಿಯಿಂದ ಅರವಿಂದ್ ಕೇಜ್ರಿವಾಲ್ ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿ ಹುಡುಕಾಟದಲ್ಲಿದೆ.

English summary
Creating trouble for Sonia Gandhi and her party members, one Congress candidate from Saharanpur, Uttar Pradesh -- Imran Masood was caught in using abusive language against Narendra Modi. Masood was also seen threatening to kill BJP's prime ministerial candidate ahead of election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X