ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.1: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಅ.1: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

11.45: ಏಷ್ಯನ್ ಗೇಮ್ಸ್ : ಬಾಕ್ಸರ್ ಮೇರಿ ಕೋಮ್ ಗೆ ಬುಧವಾರ ಚಿನ್ನದ ಪದಕ ಗಳಿಸಿದ್ದಾರೆ. ಕಜಕಿಸ್ತಾನದ ಸ್ಪರ್ಧಿ ವಿರುದ್ಧ ಜಯ ದಾಖಲಿಸಿದ್ದಾರೆ.

11.25: ಐದು ದಿನಗಳ ಐತಿಹಾಸಿಕ ಅಮೆರಿಕ ಪ್ರವಾಸದಿಂದ ಭಾರತಕ್ಕೆ ಬುಧವಾರ ಹಿಂತಿರುಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯವಾದ ಸ್ವಾಗತ ಕೋರಲು ಬಿಜೆಪಿ ನಿರ್ಧರಿಸಿದೆ, ನವದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಸುಮಾರು 5 ಸಾವಿರ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದಾರೆ.

Updates India, International News in Brief Oct 1

11.10: ಉತ್ತರಪ್ರದೇಶದ ಬರೇಲಿಯ ನಕಾತಿಯಾ ನದಿ ತೀರದಲ್ಲಿ ಭೂಸೇನೆಗೆ ಸೇರಿರುವ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು ಮೂವರು ಯೋಧರು ದುರಂತ ಸಾವಿಗೀಡಾಗಿದ್ದಾರೆ.

11.00: ಜಯಾ ವಿರುದ್ಧ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಚೆನ್ನೈನ ಎಡಿಎಂಕೆ ಕಚೇರಿಯ ಎದುರು ಮಂಗಳಮುಖಿಯೌರ್ ಪ್ರತಿಭಟನೆ ನಡೆಸಿದ್ದಾರೆ. ಮಾನವ ಸರಪಳಿ ಮಾಡಲಾಗಿದೆ.

Mary Kom

10.45: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಜಯಲಲಿತಾ ಅವರಿಗೆ ಬುಧವಾರ ಕೂಡಾ ರಿಲೀಫ್ ಸಿಕ್ಕಿಲ್ಲ. ಹೈಕೋರ್ಟ್ ನ ವಿಶೇಷ ನ್ಯಾಯಪೀಠ ಜಯಾ ಅವರ ಜಾಮೀನು ಅರ್ಜಿಯನ್ನು ಅ.6ಕ್ಕೆ ಮುಂದೂಡಿದೆ.[ವಿವರ ಇಲ್ಲಿ ಓದಿ]

10.30: ಮೈಕ್ರೋಸಾಫ್ಟ್ ಸಿಇಒ ಸತುಅ ನೆಡೆಲ್ಲಾ ಅವರು ಭಾರತದ ತಮ್ಮ ಪ್ರವಾಸ ಫಲದಾಯಕ ಎಂದಿದ್ದಾರೆ. ಭಾರತದಲ್ಲಿ 2015ರಲ್ಲಿ ಕ್ಲೌಡ್ ಡೇಟಾ ಸೆಂಟರ್ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ.

English summary
Top news in brief for the day: Women's Fly (48-51kg) Final : India's ace boxer Mary Kom beat Kazakh's Zhaina in final to clinch Gold and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X