ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಬಾಬು ನಾಯ್ಡು ಮತ ಕೌಂಟ್ ಆಗಿಲ್ಲ

By Mahesh
|
Google Oneindia Kannada News

ಬೆಂಗಳೂರು, ಏ.30: ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನ ಬುಧವಾರ ಜಾರಿಯಲ್ಲಿದೆ. ಒಟ್ಟು 89 ಲೋಕಸಭಾ ಕ್ಷೇತ್ರಗಳಲ್ಲಿ ಹೊಸ ರಾಜ್ಯ ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯುತ್ತಿದೆ. ಗುಜರಾತ್, ಪಂಜಾಬ್, ತೆಲಂಗಾಣ ರಾಜ್ಯಗಳ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಹಾಗೂ ಉತ್ತರಪ್ರದೇಶ, ಬಿಹಾರಗಳ ಕೆಲವು ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ.

ಏಳು ರಾಜ್ಯಗಳ 89 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಗುಜರಾತ್ (26), ತೆಲಂಗಾಣ (17), ಪಂಜಾಬ್ (13), ಉತ್ತರಪ್ರದೇಶ (11), ಪಶ್ಚಿಮಬಂಗಾಳ (9), ಬಿಹಾರ (7), ಕಾಶ್ಮೀರ (1) ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ 2 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಸುಮಾರು 13.83 ಕೋಟಿ ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಈಗಾಗಲೇ ಮುಕ್ತಾಯಗೊಂಡಿರುವ ಆರು ಹಂತಗಳ ಮತದಾನದಲ್ಲಿ 349 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಗಿದಿದೆ.

J and K voters

6.15: ನರೇಂದ್ರ ಮೋದಿ ವಿರುದ್ಧ ಎಫ್ ಐಆರ್ ದಾಖಲಿಸಿದ ಗುಜರಾತ್ ಪೊಲೀಸರು.
5.45: ಮೋದಿ ವಿರುದ್ಧ ಕ್ರಮ ಜರುಗಿಸುತ್ತಿರುವುದಕ್ಕೆ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ತೀವ್ರ ಆಕ್ಷೇಪ.
5.30: 5 ಗಂಟೆ ವೇಳೆಗೆ ತೆಲಂಗಾಣ 65%, ಪಶ್ಚಿಮ ಬಂಗಾಳ 79.6%, ಗುಜರಾತ್ 55%, ಪಂಜಾಬ್ 58%.
5.15: ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ ಕೌಂಟ್ ಆಗಿಲ್ಲ. ಅವರು ಮತ ಹಾಕಿದ ಮೇಲೆ ಯಾರಿಗೆ ಮತ ಹಾಕಿದೆ ಎಂದು ಪ್ರಕಟಿಸಿ, ಗೌಪ್ಯತಾ ನಿಯಮ ಉಲ್ಲಂಘಿಸಿದ್ದಾರೆ ಎಂದು ಚುನಾವಣಾಧಿಕಾರಿಯಿಂದ ಘೋಷಣೆ.
4.45: ಮೋದಿ ಅವರ ಚುನಾವಣಾ ಪ್ರಚಾರ ಸಮಾವೇಶಗಳನ್ನು ಆಯೋಗ ನಿಷೇಧಿಸಬೇಕು: ಎಎಪಿ ಮುಖಂಡ ಪ್ರಶಾಂತ್ ಭೂಷಣ್.
4.30: ದಮನ್ ಮತ್ತು ಡಿಯು 3 ಗಂಟೆಗೆ ಶೇ 64.04 ರಷ್ಟು ಮತದಾನ, 4 ಗಂಟೆಗೆ ಬಿಹಾರ 50.36%.
3.45: 2009ರ ದಾಖಲೆ ಮುರಿದ ಶ್ರೀನಗರ 3 ಗಂಟೆಗೆ ಶೇ 26ರಷ್ಟು ಮತದಾನ.
3.15:
ತೆಲಂಗಾಣದಲ್ಲಿ 3 ಗಂಟೆ ವೇಳೆಗೆ 59 % ಮತದಾನ
3.10: ಆರ್ಥಿಕ ತಜ್ಞ ಅಮಾರ್ತ್ಯ ಸೇನ್ ಬೋಲ್ ಪುರದಲ್ಲಿ ಮತದಾನ ಮಾಡಿ, ಮೋದಿ ಪ್ರಧಾನಿಯಾಗಲು ಅನರ್ಹ ಎಂದಿದ್ದಾರೆ.
3.05: 3 ಗಂಟೆ ವೇಳೆಗೆ ಶೇ 43 ರಷ್ಟು ಮತದಾನವಾಗಿದೆ.
2.55: ದಮನ್ ಮತ್ತು ಡಿಯುನಲ್ಲಿ 1 ಗಂಟೆಗೆ ಶೇ 52.65 ರಷ್ಟು ಮತದಾನ.
2.35: ಮೋದಿ ಅವರ ವಿವಾದಿತ ಸುದ್ದ್ಗಿಗೋಷ್ಠಿ ಚಿತ್ರಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಚುನಾವಣಾ ಆಯೋಗ ಪೊಲೀಸರಿಗೆ ಸೂಚಿಸಿದೆ. [ಮೋದಿ ಸುದ್ದಿಗೋಷ್ಠಿ ವಿವಾದ ಇಲ್ಲಿ ಓದಿ]
2.20 : ಕ್ರಿಕೆಟರ್ ಪಾರ್ಥೀವ್ ಪಟೇಲ್ ದುಬೈನಿಂದ ಅಹಮದಾಬಾದಿಗೆ ಬಂದು ಮತದಾನ.
2.15:
ಪಶ್ಚಿಮ ಬಂಗಾಳದ ಬಿರ್ ಬಮ್ ನ ಮತಗಟ್ಟೆವೊಂದರಲ್ಲಿ ಗಲಭೆ ನಾಲ್ವರು ಮತದಾರರಿಗೆ ತೀವ್ರ ಗಾಯ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಕೃತ್ಯ.
2.10: 2 ಗಂಟೆಗೆ ಗುಜರಾತ್ ಶೇ 37, ಪಟಿಯಾಲದಲ್ಲಿ ಶೇ 50.
2.00: ಮತದಾನದ ನಂತರ ಬಿಜೆಪಿ ಚಿನ್ಹೆ ತೋರಿಸಿದ ಮೋದಿ ವಿರುದ್ಧ ಆಯೋಗ ಕ್ರಮ.
1.40: 1 ಗಂಟೆಗೆ ಪಶ್ಚಿಮ ಬಂಗಾಳ 62.25%. ಹೈದರಾಬಾದ್ 31%, ಪಂಜಾಬ್ 40%, ತೆಲಂಗಾಣ 49.7%, ಗುಜರಾರ್ 31%.
1.15: ಮೋದಿ ಪತ್ನಿ ಜಸೋದಾಬೇನ್ ಮೆಹ್ಸಾನಾ ಕ್ಷೇತ್ರದಲ್ಲಿ ಮತದಾನ ಮಾಡಿದ್ದಾರೆ.
1.05: ದಾದರ್ ಹಾಗೂ ನಗರ್ ಹವೇಲಿ ಶೇ40, ಡಮನ್ ಮತ್ತು ಡಿಯು ಶೇ 15.

Voter

1.00: ಮಧ್ಯಾಹ್ನ 12 ರ ವೇಳೆಗೆ ಗುಜರಾತಿನಲ್ಲಿ ಶೇ 24 ರಷ್ಟು ಮತದಾನ
12.30: ಶ್ರೀನಗರದಲ್ಲಿ 11 ಗಂಟೆಗೆ ಶೇ 13.53 ರಷ್ಟು ಮಾತ್ರ ಮತದಾನ.

11.55: 11 ಗಂಟೆಗೆ ಲಕ್ನೋದಲ್ಲಿ ಶೇ 22.5, ಪಶ್ಚಿಮ ಬಂಗಾಳದಲ್ಲಿ 40.8%, ಬಿಹಾರ 26%.
11.35: ಪಶ್ಚಿಮ ಬಂಗಾಳ ಬೋಲ್ ಪುರ್ 49.68%, ಬರ್ಧಮಾನ್ ಪೂರ್ವ 49.51%, ದುರ್ಗಾಪುರ್ 47.07%
11.30: ಗಾಂಧಿನಗರದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಂದ ಮತದಾಅನ.
11.25: ಬೆಂಗಾಳದ ಸೆರಮ್ ಪೋರ್ ಕ್ಷೇತ್ರದಲ್ಲಿ ಸಿಪಿಎಂ ಏಜೆಂಟ್ ಕಿವಿಯನ್ನು ಟಿಎಂಸಿ ಕಾರ್ಯಕರ್ತರು ಕತ್ತರಿಸಿದ ವರದಿ ಬಂದಿದೆ.
11.15: ಲಕ್ನೋದಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮತದಾನ ಮಾಡಿದ್ದಾರೆ.
10.58: ಅಮೃತಸರ್ ದ ಟಿಕೆಟ್ ತಪ್ಪಿಸಿಕೊಂಡ ಮಾಜಿ ಕ್ರಿಕೆಟರ್ ಬಿಜೆಪಿ ನಾಯಕ ನವಜ್ಯೋತ್ ಸಿಂಗ್ ಸಿಧು ಮತದಾನ ಮಾಡಿಲ್ಲ. ಅವರ ಪತ್ನಿ ಸಂಸದೆ ಮತದಾನ ಮಾಡಿದ್ದಾರೆ.

Live LS Polls: 14% voting in Punjab, 15% in Gujarat till 10 am

10.45: 10 ಗಂಟೆ ವೇಳೆಗೆ ಗುಜರಾತ್ 15%. ಪಂಜಾಬ್ 14%.
10.35: ದುಬೈನಿಂದ ರಾಜ್ ಕೋಟ್ ಗೆ ಹಾರಿ ಬಂದಿರುವ ಕ್ರಿಕೆಟರ್ ಚೇತೇಶ್ವರ್ ಪೂಜಾರ ಅವರು ಮತದಾನ ಮಾಡಿದ್ದಾರೆ.
10.20: ಮತದಾನ ಮಾಡಿದ ನಂತರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಪಕ್ಷದ ಚಿನ್ಹೆ ತೋರಿಸಿದ ಆರೋಪ ಹೊರೆಸಲಾಗಿದೆ. ಈ ಬಗ್ಗೆ ಪರಿಶೀಲಿಸುವುದಾಗಿ ಆಯೋಗ ಹೇಳಿದೆ.
10.15: ಶ್ರೀನಗರದಲ್ಲಿ 9 ಗಂಟೆಗೆ ಶೇ 4.99 ರಷ್ಟು ಮತದಾನವಾಗಿದೆ. ಫಾರೂಖ್ ಅಬ್ದುಲ್ಲಾ ಅವರು ಮತದಾನ ಮಾಡಿದ್ದಾರೆ.

9.45: ಅಮೃತಸರ್ ನಲ್ಲಿ ಬಿರುಸಿನ ಮತದಾನ 9 ಗಂಟೆಗೆ ಶೇ12, ಪಶ್ಚಿಮ ಬಂಗಾಳದಲ್ಲಿ ಶೇ 24.39, ಬಿಹಾರ ಶೇ 12.33, ರಾಯ್ ಬರೇಲಿಯಲ್ಲಿ ಶೇ 10 ಮತದಾನ.

English summary
The seventh phase of the 2014 Lok Sabha election was held on Wednesday. Eighty-nine constituencies in seven states and two Union Territories went to the polls in this phase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X