ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸಿಲ್ಲ: ಗಡ್ಕರಿ

By Mahesh
|
Google Oneindia Kannada News

ನವದೆಹಲಿ, ಮೇ.14: 'ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕಾಗಿ ನಿತಿನ್ ಗಡ್ಕರಿ ಲಾಬಿ ನಡೆಸುತ್ತಿದ್ದಾರೆ' ಎಂಬ ಮಾಧ್ಯಮಗಳ ವರದಿಯನ್ನು ಬಿಜೆಪಿ ಮುಖಂಡ ಗಡ್ಕರಿ ತಳ್ಳಿ ಹಾಕಿದ್ದಾರೆ. ಹಾಲಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಘೋಷಿಸಿದ್ದಾರೆ.

ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿದ್ದ ನಿತಿನ್ ಗಡ್ಕರಿ ಅವರು ಬಿಜೆಪಿ ಅಧ್ಯಕ್ಷ ಸ್ಥಾನವನ್ನು ತೊರೆದಿದ್ದರು. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಡ್ಕರಿ ವಿರುದ್ಧ ಯಾವುದೇ ತನಿಖೆ ಬಾಕಿ ಉಳಿದಿಲ್ಲವೆಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ಹೀಗಾಗಿ ಕ್ಲೀನ್ ಚಿಟ್ ಪಡೆದ ಗಡ್ಕರಿ ಮತ್ತೊಮ್ಮೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ ಎಂದು ವರದಿಯಾಗಿತ್ತು.ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿತಿನ್ ಗಡ್ಕರಿ, ಹೊಸ ಸರ್ಕಾರ ರಚನೆ ನಂತರವೂ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದಿದ್ದಾರೆ.

Rajnath will continue to steer the party: Gadkari

'ಆದಾಯ ತೆರಿಗೆ ಇಲಾಖೆಯಿಂದ ಕ್ಲೀನ್ ಚಿಟ್ ಸಿಕ್ಕ ನಂತರ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂದು ಯಾರೂ ನನಗೆ ಭರವಸೆ ನೀಡಿಲ್ಲ. ನಾನು ಅದನ್ನು ಬಯಸುವುದೂ ಇಲ್ಲ, ಪಕ್ಷ ನೀಡುವ ಯಾವುದೇ ಹುದ್ದೆಯನ್ನು ನಿಭಾಯಿಸಲು ನಾನು ಸಿದ್ಧ' ಎಂದಿದ್ದಾರೆ.

ಎಲ್ ಕೆ ಅಡ್ವಾಣಿಗೆ ಬಗ್ಗೆ: ಎಲ್ ಕೆ ಅಡ್ವಾಣಿ ಅವರಿಗೆ ಮೂರು ಹುದ್ದೆಗಳ ಆಫರ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಗಡ್ಕರಿ, ವಾಜಪೇಯಿ ಹಾಗೂ ಅಡ್ವಾಣಿ ಅವರು ಉತ್ತಮ ವಾಗ್ಮಿಗಳು ಹಾಗೂ ಪಕ್ಷದ ಸ್ಪೂರ್ತಿ. ಅವರ ಮಾರ್ಗದರ್ಶನ ನಮಗೆ ಅತ್ಯಗತ್ಯ. ಸ್ಪೀಕರ್ ಸ್ಥಾನ ಅವರಿಗೆ ಸಿಗಲಿ ಎಂದು ಯಾರೂ ಒತ್ತಡ ಹೇರಿಲ್ಲ, ಸರಿಯಾದ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಪಕ್ಷಗಳ ಮೈತ್ರಿ ಬಗ್ಗೆ: ಎನ್ಡಿಎ ಬಹುಮತ ಗಳಿಸುವ ನಿರೀಕ್ಷೆಯಿದೆ. ಆದರೆ, ಬಹುಮತ ಸಿಗದಿದ್ದ ಪಕ್ಷದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮುಕ್ತ ಅವಕಾಶ ಸಿಗಲಿದೆ. ಮೈನಾರಿಟಿ, ಮೇಜರಿಟಿ ಸರ್ಕಾರ ಎಂಬುದರಲ್ಲಿ ಅರ್ಥವಿಲ್ಲ. ಸಮರ್ಥವಾದ ಸರ್ಕಾರ, ದೇಶದ ಏಳಿಗೆಗೆ ಪೂರಕವಾದ ಪಕ್ಷಗಳ ಜತೆ ಮಾತ್ರ ಕೈಜೋಡಿಸಲಾಗುವುದು ಎಂದರು.

ನಮ್ಮದು ಅಪ್ಪ-ಮಕ್ಕಳ, ತಾಯಿ-ಮಗನ ಪಕ್ಷವಂತೂ ಅಲ್ಲ. ಪ್ರಜಾಪ್ರಭುತ್ವದ ಅಡಿಯಲ್ಲಿ ಎಲ್ಲರಿಗೂ ಸೂಕ್ತ ಪ್ರಾತಿನಿಧ್ಯ ಸಿಗಲಿದೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದರು. (ಪಿಟಿಐ)

English summary
Amid reports that he is lobbying for a comeback as BJP chief, Nitin Gadkari today(May.14) said there would be no change in the party's leadership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X