ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಭೀತಿ ನಡುವೆ ಕಣಿವೆ ರಾಜ್ಯಕ್ಕೆ ಮೋದಿ ಎಂಟ್ರಿ

By Mahesh
|
Google Oneindia Kannada News

ಶ್ರೀನಗರ, ಜು.4 : ಉಗ್ರರ ಭೀತಿ ನಡುವೆಯೂ ಪ್ರಧಾನಿಯಾದ ಮೇಲೆ ಪ್ರಥಮ ಬಾರಿಗೆ ನರೇಂದ್ರ ಮೋದಿ ಅವರು ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಪ್ರತ್ಯೇಕತವಾದಿಗಳು ಕರೆ ನೀಡಿರುವ ಬಂದ್, ಗಡಿ ಭಾಗದಲ್ಲಿ ಕಾಣಿಸಿಕೊಂಡ ಉಗ್ರ ಹಫೀಜ್ ಮುಂತಾದ ಆತಂಕದ ನಡುವೆಯೂ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಚರಿಸಿದ್ದಾರೆ.

ಪ್ರತ್ಯೇಕತಾವಾದಿ ನಾಯಕರಾದ ಸೈಯದ್ ಆಲಿ ಗಿಲಾನಿ, ಮಿರ್ ವಾಯೈಜ್ ಉಮರ್ ಫರೂಕ್, ಮಹಮ್ಮದ್ ಯಾಸಿನ್ ಮಲೀಕ್ ಹಾಗೂ ಶಬೀರ್ ಅಹ್ಮದ್ ಶಾ ಅವರಿಗೆ ಗೃಹ ಬಂಧನ ವಿಧಿಸಲಾಗಿದೆ. ಶಾಲೆ, ಕಚೇರಿ, ಸಾರಿಗೆ ಬಂದ್ ಮಾಡಲಾಗಿದೆ. ಬ್ಯಾಂಕ್ ಹಾಗೂ ಅಂಚೆ ಕಚೇರಿ ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.

PM Narendra Modi's visit to Jammu and Kashmir

ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಥಮ ಬಾರಿಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ಡೊವಾಲ್ ಸಾಥ್ ನೀಡಿದ್ದಾರೆ. ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ನೆಲೆ ವಿರೋಧಿಸಿ ಮುಸ್ಲಿಂ ಸಂಘಟನೆಗಳು ಕಾಶ್ಮೀರ ಬಂದ್ ಗೆ ಕರೆ ನೀಡಿವೆ. ಕಾಶ್ಮೀರದ ಭದ್ರತೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಮೋದಿ ಅವರ ಭೇಟಿ ಕಾರ್ಯಕ್ರಮದ ಪಟ್ಟಿ ಕೆಳಗಿನಂತಿದೆ:

9.45 : ಜಮ್ಮು ಮತ್ತು ಕಾಶ್ಮೀರದ ವಿಮಾನ ನಿಲ್ದಾಣಕ್ಕೆ ಮೋದಿ ಪ್ರಥಮ ಬಾರಿಗೆ ಪ್ರವೇಶ
10.00 : ಕಟ್ರಾ ಹೆಲಿಪ್ಯಾಡ್ ನಿಂದ ನಿರ್ಗಮನ
10.15 -10.45: ಕಟ್ರಾ-ಉಧಮ್ ಪುರ್- ನವದೆಹಲಿ ಮಾರ್ಗಕ್ಕೆ ಹೊಸ ರೈಲಿಗೆ ಚಾಲನೆ. [ವಿವರ ಇಲ್ಲಿ ಓದಿ]
11.00: ಶ್ರೀನಗರಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ.
12.10: ಶ್ರೀನಗರಕ್ಕೆ ತಲುಪಿದ ಮೇಲೆ ಆರ್ಮಿ ಬೇಸ್ ಬಾದಮಿ ಬಾಗ್ ಕಂಟೋನ್ಮೆಂಟ್ ಗೆ ಭೇಟಿ
1.05 : ರಾಜಭವನಕ್ಕೆ ಭೇಟಿ ನಂತರ ಆರ್ಮಿ ಬೇಸ್ ಗೆ ಮತ್ತೆ ವಾಪಸ್.
3.15 ರಿಂದ 3.20 : ಪ್ರಧಾನಿ ಮೋದಿ ಅವರು ಆರ್ಮಿ ಬೇಸ್ ನಲ್ಲಿ ಕೆಲ ಕಾಲ ತಂಗಲಿದ್ದಾರೆ.
3.55 : ಉರಿಗೆ ಪ್ರಧಾನಿ ಹಾಗೂ ಅವರ ಪರಿವಾರ ಹಾರಲಿದೆ.
4.00 : 240 ಮೆಗಾವ್ಯಾಟ್​ ಸಾಮರ್ಥ್ಯದ ಹೈಡ್ರೋ ಪವರ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
6.10 : ಶ್ರೀನಗರದ ವಿಮಾನ ನಿಲ್ದಾಣಕ್ಕೆ ಮೋದಿ ಅವರು ವಾಪಸ್ ಬರಲಿದ್ದಾರೆ.
6.15 : ನವದೆಹಲಿಗೆ ಪ್ರಧಾನಿ ಅವರು ಹಿಂತಿರುಗಲಿದ್ದಾರೆ.

English summary
Restrictions were imposed in some areas of summer capital Srinagar and senior separatist leaders were placed under house arrest on Friday, a day when Prime Minister Narendra Modi arrives here on his maiden visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X