ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜಾಪ್ರಭುತ್ವದ ದೇಗುಲಕ್ಕೆ ತಲೆ ಬಾಗಿದ ಮೋದಿ

By Mahesh
|
Google Oneindia Kannada News

ನವದೆಹಲಿ, ಮೇ.20: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಮುಂದಿನ ಸರ್ಕಾರ ರಚಿಸುವ ನಿಟ್ಟಿನಲ್ಲಿ ಬಿಜೆಪಿ ಸಂಸದೀಯ ಸಮಿತಿ ಸಭೆ ಮಂಗಳವಾರ ನಡೆಸಿತು. ಗುಜರಾತ್ ಸಿಎಂ ನರೇಂದ್ರ ಮೋದಿ ಅವರನ್ನು ಎನ್ ಡಿಎ ಮುಖ್ಯಸ್ಥರಾಗಿ ಎಲ್ ಕೆ ಅಡ್ವಾಣಿ ಸೂಚಿಸಿದ್ದು, ಮೋದಿ ನಾಯಕತ್ವಕ್ಕೆ ಒಕ್ಕೊರಲ ಅನುಮೋದನೆ ಸಿಕ್ಕಿದೆ.

ಭಾರತೀಯ ಪ್ರಜಾತಾಂತ್ರಿಕ ಒಕ್ಕೂಟ(ಎನ್ ಡಿಎ) ಮುಖ್ಯಸ್ಥರಾಗಿ ನರೇಂದ್ರ ಮೋದಿಯನ್ನು ಔಪಚಾರಿಕವಾಗಿ ಆಯ್ಕೆ ಮಾಡಲಾಗಿದೆ. ಇದರ ಜತೆಗೆ ಅಡ್ವಾಣಿ ಅವರು ಮೋದಿ ಅವರ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸಿದ್ದು, ಇದಕ್ಕೆ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಅವರು ಅನುಮೋದಿಸಿದ್ದಾರೆ. ಬಿಜೆಪಿ ಸಂಸದೀಯ ಸಭೆಯ ವಿವರಗಳು, ಮೊಟ್ಟ ಮೊದಲ ಬಾರಿಗೆ ಸಂಸತ್ತಿನ ಸೆಂಟ್ರಲ್ ಹಾಲ್ ಪ್ರವೇಶಿಸಿದ ಮೋದಿ ಅವರ ಸಂತಸದ ಕ್ಷಣದ ವಿವರಗಳು ಇಲ್ಲಿದೆ:

Updates: BJP elects Modi as leader

1.15: ಎನ್ಡಿಎ ಅಧ್ಯಕ್ಷರಾದ ಮೇಲೆ ಮೋದಿ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಮಂಗಳವಾರ 3.15ರ ನಂತರ ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ಕೋರುವ ಸಾಧ್ಯತೆಯಿದೆ.
1.05:
ಈ ಬಾರಿಯ ಚುನಾವಣೆಯಿಂದ ಜನರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೆಚ್ಚಾಗಿದೆ. ವಿಶೇಷವಾಗಿ ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿದೆ.
12.58: ಹೊಸ ಸರ್ಕಾರ ದೇಶದ ಬಡವರಿಗೆ ಅರ್ಪಿತ, 2019ರಲ್ಲಿ ಮತ್ತೊಮ್ಮೆ ಜನರನ್ನು ಭೇಟಿಯಾದಾಗ ನನ್ನ ರಿಪೋರ್ಟ್ ಕಾರ್ಡ್ ಅವರ ಮುಂದಿಡುತ್ತೇನೆ.
12.55: ಭಾರತ ನನ್ನ ತಾಯಿ ಇದ್ದಂತೆ, ಭಾಜಪ ಕೂಡಾ ನನ್ನ ತಾಯಿ ಎನ್ನುತ್ತ ಭಾವುಕರಾದ ಎನ್ಡಿಎ ಅಧ್ಯಕ್ಷ ನರೇಂದ್ರ ಮೋದಿ
12.52: ನಾನು ಆಶಾವಾದಿ, ಆಶಾವಾದಿ ವ್ಯಕ್ತಿ ಮಾತ್ರ ದೇಶದಲ್ಲಿ ಆಶಾವಾದವನ್ನು ತರಲು ಸಾಧ್ಯ ಎಂದ ಮೋದಿ ಅವರು ಅರ್ಧ ನೀರು ತುಂಬಿದ ಲೋಟ ಬಗ್ಗೆ ಆಶಾವಾದಿ, ನಿರಾಶಾವಾದಿ ಏನು ಹೇಳುತ್ತಾರೆ ಎಂಬುದನ್ನು ನಿರೂಪಿಸಿದರು.

Modi gets emotional in BJP meet

12.50: ಯುಪಿಎ ಕೈಗೊಂಡಿರುವ ಒಳ್ಳೆ ಕಾರ್ಯಕ್ಕೆ ಅಭಿನಂದಿಸುತ್ತೇನೆ. ಯುಪಿಎ ಸರ್ಕಾರ ಏನೂ ಮಾಡಿಲ್ಲ ಎಂಬುದನ್ನು ನಾನು ನಂಬುವುದಿಲ್ಲ, ಅವರ ಕೈಲಾದ ಕೆಲಸ ಮಾಡಿದ್ದಾರೆ.
12.45: ನನ್ನ ಮೇಲೆ ನಂಬಿಕೆ ಇಟ್ಟುಕೊಂಡು ಜವಾಬ್ದಾರಿಯನ್ನು ನೀಡಲಾಗಿದೆ. ನಾನು ಹುದ್ದೆಗಾಗಿ ಕಾರ್ಯ ನಿರ್ವಹಿಸುವುದಿಲ್ಲ. ದೇಶಕ್ಕಾಗಿ ದುಡಿಯುತ್ತೇನೆ, ದೇಶಕ್ಕಾಗಿ ಜೀವಿಸುತ್ತೇನೆ ಎಂದ ಮೋದಿ.
12.40: ಸೆಪ್ಟೆಂಬರ್ 13 ರಂದು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಮೇಲೆ ಸೆ.15ರಿಂದ ನನ್ನ ಅಭಿಮಾನವನ್ನು 'ಕಾರ್ಯಕರ್ತ' ನಾಗಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇನೆ.
12.35: ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಸಿಕೊಂಡ ಮೋದಿ, ಅವರ ದೇಹಾರೋಗ್ಯ ಸರಿಯಾಗಿದ್ದು, ಇಂದು ಇಲ್ಲಿ ಉಪಸ್ಥಿತರಿದ್ದರೆ ನನ್ನ ಆನಂದ ಮುಗಿಲು ಮುಟ್ಟುತ್ತಿತ್ತು ಎಂದ ಮೋದಿ.
12.33: ಅಡ್ವಾಣಿ ಹಾಗೂ ರಾಜನಾಥ್ ಅವರಿಗೆ ಧನ್ಯವಾದ ಅರ್ಪಿಸಿದ ಎನ್ಡಿಎ ಅಧ್ಯಕ್ಷ ಮೋದಿ, ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿ ಸಂಸದರಿಗೆ ಅಭಿನಂದನೆ ಸಲ್ಲಿಸಿದರು.
12.30: ನರೇಂದ್ರ ಮೋದಿ ಅವರ ಹೆಸರನ್ನು ಪ್ರಧಾನಿ ಹುದ್ದೆಗೆ ಹಾಗೂ ಎನ್ಡಿಎ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ ನಂತರ ಭಾವುಕರಾದ ಅಡ್ವಾಣಿ ಅವರು ಮಾತನಾಡಿ, 'ನಾನು ತುಂಬಾ ಭಾವುಕ ಮನುಷ್ಯ, ಮೋದಿಯನ್ನು ಅಭಿನಂದಿಸುವಾಗ ನನ್ನ ಆನಂದ ಭಾಷ್ಪ ತಡೆಯಲು ಆಗಲಿಲ್ಲ, ಇದು ಅತ್ಯಂತ ಸಂತಸದ ಕ್ಷಣ' ಎಂದರು.

12.15: ಅಡ್ವಾಣಿ ಅವರ ಸೂಚನೆಗೆ ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಮುರಳಿ ಮನೋಹರ್ ಜೋಶಿ, ವೆಂಕಯ್ಯ ನಾಯ್ಡು ಸೇರಿದಂತೆ ಹಿರಿಯ ನಾಯಕರು ಅನುಮೋದನೆ ನೀಡಿದರು.
12.10: ಭಾರತದ ಅತ್ಯಂತ ಜನಪ್ರಿಯ ನಾಯಕ ಮೋದಿ ಹೆಸರನ್ನು ನಾನು ಬಿಜೆಪಿ ಸಂಸದೀಯ ನಾಯಕನಾಗಿ ಸೂಚಿಸುತ್ತೇನೆ ಎಂದು ಹಿರಿಯ ನಾಯಕ ಅಡ್ವಾಣಿ ಹೇಳಿದರು.

ಮೋದಿ ಅವರ ಭಾಷಣದ ನೇರ ಪ್ರಸಾರ ವಿಡಿಯೋ ರಾಜ್ಯಸಭಾ ಟಿವಿ ಮೂಲಕ ವೀಕ್ಷಿಸಿ...

English summary
The BJP parliamentary committee held in Delhi today, where senior party leader LK Advani proposed Narendra Modi's name as Prime minister and Rajnath Singh, Sushma Swaraj and other leaders backed the proposal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X