ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿವಾಲ್ ಬಿಟ್ಟು ಮೋದಿಗೆ ಜೈ ಎಂದ ಗುರೂಜಿ

By Mahesh
|
Google Oneindia Kannada News

ಬೆಂಗಳೂರು, ಏ.4: ಆಧಾತ್ಮ ಗುರು ಶ್ರೀಶ್ರೀ ರವಿಶಂಕರ್ ಅವರು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಹರಿಹಾಯ್ದಿದ್ದಾರೆ. ಕೇಜ್ರಿವಾಲ್ ಏನಾದರೂ ಕೇಂದ್ರದಲ್ಲಿ ಅಧಿಕಾರಿಕ್ಕೆ ಬಂದರೆ ಅದು ದೊಡ್ಡ ದುರಂತವಾಗಲಿದೆ ಎಂದಿದ್ದಾರೆ. ಇದಕ್ಕೆ ಅರವಿಂದ್ ಸರಣಿ ಟ್ವೀಟ್ ಗಳ ಮೂಲಕ ಪ್ರತಿಕ್ರಿಯೆ ನೀಡಿದ್ದು, 'ಗುರೂಜಿ, ಸ್ವಲ್ಪ ತಾಳಿ ನಮ್ಮ ಚಳವಳಿ ದೇಶದ ಪ್ರಗತಿಗೆ ಪೂರಕ' ಎಂದಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡಿದ್ದ ಅರವಿಂದ್ ಕೇಜ್ರಿವಾಲ್ ಗೂ ದೆಹಲಿ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಗೂ ಭಾರಿ ವ್ಯತ್ಯಾಸ ಕಂಡು ಬರುತ್ತಿದೆ. ದೆಹಲಿಯಲ್ಲಿ ಅಧಿಕಾರ ಪಡೆದ ಕೆಲವೇ ದಿನಗಳಲ್ಲಿ ಹೊರ ನಡೆದು ಬಂದು ಜನರ ಆಶೋತ್ತರಗಳನ್ನು ಭಂಗಗೊಳಿಸಿದ್ದನ್ನು ಕಂಡರೆ ಕೇಜ್ರಿವಾಲ್ ಕೂಡಾ ಎಲ್ಲಾ ರಾಜಕೀಯ ಮುಖಂಡರಿಗಿಂತ ಬೇರೆಯಲ್ಲ, ಅವರ ಮನದಾಳದಲ್ಲಿ ಇರುವ ನಿಜವಾದ ಅಧಿಕಾರ ದಾಹ ಹೊರ ಕಾಣಿಸಿಕೊಂಡಿದೆ ಎಂದು ರವಿಶಂಕರ್ ಗುರೂಜಿ ಹೇಳಿದ್ದಾರೆ.

ಕಳಪೆ ಪ್ರಚಾರ ತಂತ್ರ, ಅತಿಯಾದ ಆತ್ಮವಿಶ್ವಾಸ, ಹುಂಬತನ, ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುವ ಮೂಲಕ ಎಎಪಿ ಪಡೆದಿದ್ದ ಇಮೇಜ್ ಹಾಳುಗೆಡಿವಿಕೊಂಡಿದೆ. ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಕೇಜ್ರಿವಾಲ್ ದೆಹಲಿಯಲ್ಲಿ ನಡೆದುಕೊಂಡ ರೀತಿ ನಡೆದುಕೊಂಡು ದೊಡ್ಡ ದುರಂತ ಎಂದಿದ್ದಾರೆ.

ಈ ನಡುವೆ ರವಿಶಂಕರ್ ಗುರೂಜಿ ಅವರು ಗುಜರಾತ್ ರಾಜ್ಯದ ಅಭಿವೃದ್ಧಿ ಎಲ್ಲರಿಗೂ ಮಾದರಿ ಎನ್ನುವ ಮೂಲಕ ನರೇಂದ್ರ ಮೋದಿ ಪರ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೂ, ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿ ಗುರೂಜಿ ನಿಧಾನಿಸಿ ಯೋಚಿಸಿ ನೋಡಿ ಎಂದಿದ್ದಾರೆ.. ಇನ್ನಷ್ಟು ವಿವರ ಮುಂದೆ ಓದಿ...

ಗುಜರಾತಿನ ಪ್ರಗತಿ ಕಂಡು ಹೊಗಳಿದ ಗುರೂಜಿ

ಗುಜರಾತಿನ ಪ್ರಗತಿ ಕಂಡು ಹೊಗಳಿದ ಗುರೂಜಿ

ಗುಜರಾತ್ ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ಪ್ರವಾಸ ಮಾಡಿ ಅಲ್ಲಿನ ಅಭಿವೃದ್ಧಿಯನ್ನು ಕಣ್ಣಾರೆ ಕಂಡಿದ್ದೇನೆ. ಆಧಾರ ರಹಿತವಾಗಿ ಮೋದಿ ಅವರನ್ನು ಟೀಕಿಸುವುದು ಸರಿಯಲ್ಲ. ಮೋದಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿದ್ದೇನೆ 1990, 2000ರ ತನಕ ಸೌರಾಷ್ಟ್ರದಲ್ಲಿ ನೆರಳು ನೀಡಲು ಒಂದು ಮರವೂ ಕಾಣುತ್ತಿರಲಿಲ್ಲ. ಈಗ ಅಲ್ಲಿ ಹಸಿರು ಕ್ರಾಂತಿ, ಕೃಷಿ ಕ್ರಾಂತಿ ಮೂಲಕ ಅಭಿವೃದ್ಧಿ ಸಾಧಿಸಲಾಗಿದೆ.

ಗುಜರಾತ್ ಭ್ರಷ್ಟಾಚಾರ ರಹಿತ ರಾಜ್ಯವಾಗಿದೆ

ಗುಜರಾತ್ ಭ್ರಷ್ಟಾಚಾರ ರಹಿತ ರಾಜ್ಯವಾಗಿದೆ

ಗುಜರಾತ್ ರಾಜ್ಯ ಶೇ 100ರಷ್ಟು ಭ್ರಷ್ಟಾಚಾರ ರಹಿತ ರಾಜ್ಯವಾಗಿದೆ ಎಂದು ಹೇಳಲು ನಾನು ಹಿಂಜರಿಯುವುದಿಲ್ಲ. ಈ ಬಗ್ಗೆ ಕೇಜ್ರಿವಾಲ್ ಮಾಹಿತಿ ಪಡೆಯದೆ ಮೋದಿ ಅವರ ರಾಜ್ಯದ ಅಭಿವೃದ್ಧಿ ಬಗ್ಗೆ ಅನುಮಾನಿಸಿದ್ದು ಸರಿಯಲ್ಲ. ಫಿಲ್ಮಿ ಶೈಲಿಯಲ್ಲಿ ಮೋದಿ ಅವರ ವಿರುದ್ಧ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದು ಕೇಜ್ರಿವಾಲ್ ಹೇಳಿರುವುದು ಸರಿ ಕಾಣುತ್ತಿಲ್ಲ ಎಂದು ರವಿಶಂಕರ್ ಗುರೂಜಿ ಹೇಳಿದ್ದಾರೆ.

ಗುರೂಜಿ ಹೇಳಿಕೆಗೆ ಅರವಿಂದ್ ಟ್ವೀಟ್ ಉತ್ತರ

ಗುರೂಜಿ ಹೇಳಿಕೆಗೆ ಅರವಿಂದ್ ಕೇಜ್ರಿವಾಲ್ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಉತ್ತರಿಸಿದ್ದು ಹೀಗೆ

ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

ನನಗೆ ಯಾವುದೇ ಸ್ವಹಿತಾಸಕ್ತಿ ಇಲ್ಲ ನಾನು ಮಾಡುತ್ತಿರುವುದೆಲ್ಲ ದೇಶದ ಒಳಿತಿಗಾಗಿ.. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ..

ನನ್ನ ಬಗ್ಗೆ ಕೆಟ್ಟ ಭಾವನೆ ಬದಲಾಗಲಿ

ನನ್ನ ಚಳವಳಿ ಬಗ್ಗೆ ಸರಿಯಾದ ಮನವರಿಕೆ ಆಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅರವಿಂದ್ ಟ್ವೀಟ್

English summary
Spiritual Guru Sri Sri Ravi Shankar has blasted Aam Aadmi Party chief Arvind Kejriwal, saying it would be a disaster for the country if he is voted power in the Lok Sabha election. Kejriwal also tweeted his anguish
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X