ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ ಪ್ರವಾಹದ ನಡುವೆ ಮೋದಿ ನಾಮಪತ್ರ ಸಲ್ಲಿಕೆ

By Mahesh
|
Google Oneindia Kannada News

ವಾರಣಾಸಿ, ಏ.24: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ದಾಮೋದರ್ ಮೋದಿ ಅವರು ವಾರಣಾಸಿ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಗುರುವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನಕ್ಕೂ ಬೃಹತ್ ಜನಸಾಗರದ ನಡುವೆ ಎರಡು ಕಿಮೀ ರೋಡ್ ಶೋ ನಡೆಸಿದರು. ಇದು ಮಾನವ ಸುನಾಮಿ ಮೋದಿ ಅಲೆ ಏನೆಂಬುದು ವಾರಣಾಸಿಯಲ್ಲಿ ಅನಾವರಣಗೊಂಡಿದೆ ಎಂದು ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.

ಹಿಂದೂಗಳ ಪವಿತ್ರ ನಗರಿ ವಾರಣಾಸಿಯಲ್ಲಿ ಗುರುವಾರದಂದು ಎಲ್ಲೆಲ್ಲೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದವು. ಇಡೀ ನಗರ ಒಂದು ರೀತಿ ಕೇಸರಿಮಯವಾಗಿತ್ತು. ನಾಮಪತ್ರ ಸಲ್ಲಿಕೆಗೆ ಮುನ್ನ ಬನಾರಸ್ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಡಾ.ಅಂಬೇಡ್ಕರ್, ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ಮದನ್ ಮೋಹನ್ ಮಾಳವೀಯ ಅವರ ಪುತ್ಥಳಿಗೆ ಮೋದಿಯವರು ಪುಷ್ಪಗುಚ್ಛ ಸಮರ್ಪಿಸಿದರು.

ಬಳಿಕ 2 ಕಿಮೀ ರೋಡ್ ಶೋ ನಡೆಸಿಕೊಂಡು ಬಂದು ಆನಂತರ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈಗಾಗಲೇ ಮೋದಿಯವರು ಗುಜರಾತಿನ ವಡೋದರಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿ ಅವರು ಆಮ್ ಆದ್ಮಿ, ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಎದುರಿಸಬೇಕಾಗಿದೆ. ಅರವಿಂದ್ ಕೇಜ್ರಿವಾಲ್, ಅಜಯ್ ರಾಯ್ ಅವರಿಗೆ ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದಾರೆ. ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೇ 12ರಂದು ಕೊನೆಯ ಹಂತದಲ್ಲಿ ಮತದಾನ ನಡೆಯಲಿದೆ.

ನರೇಂದ್ರ ಮೋದಿಗೆ ಯಾರು ಅನುಮೋದಕರು

ನರೇಂದ್ರ ಮೋದಿಗೆ ಯಾರು ಅನುಮೋದಕರು

ನರೇಂದ್ರ ಮೋದಿ ಅವರಿಗೆ ಬನಾರಾಸ್ ನಲ್ಲಿ ನಿವೃತ್ತ ಹೈಕೋರ್ಟ್ ನ ಜಡ್ಜ್ ಹಾಗೂ ಶಿಕ್ಷಣ ತಜ್ಜ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಮೊಮ್ಮಗ ಗಿರಿಧರ್, ಖ್ಯಾತ ಗಾಯಕ ಚಂದು ಲಾಲ್ ಮಿಶ್ರಾ, ದರ್ಜಿ ಅಶೋಕ್, ಬೋಟ್ ಚಾಲಕ ವೀರಭದ್ರ ನಿಶಾಧ್ ರೊಬ್ಬರು ಅನುಮೋದಕರಾಗಿದ್ದಾರೆ.

ಇದು ಮಾನವ ಸುನಾಮಿ ಮೋದಿ ಅಲೆ : ಬಿಎಸ್ವೈ

ಇದು ಮಾನವ ಸುನಾಮಿ ಮೋದಿ ಅಲೆ ಏನೆಂಬುದು ವಾರಣಾಸಿಯಲ್ಲಿ ಅನಾವರಣಗೊಂಡಿದೆ ಎಂದು ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.

ಮೋದಿ ನಾಮಪತ್ರ ಸಲ್ಲಿಕೆ ವಿಡಿಯೋ

ಮೋದಿ ನಾಮಪತ್ರ ಸಲ್ಲಿಕೆ, ರೋಡ್ ಶೋ ವಿಡಿಯೋ ನೋಡಿ

ಜನ ಪ್ರವಾಹದ ನಡುವೆ ಮೋದಿ ಮೆರವಣಿಗೆ

ಜನ ಪ್ರವಾಹದ ನಡುವೆ ಮೋದಿ ಮೆರವಣಿಗೆ ಹೊರಟ ಚಿತ್ರಗಳು ಟ್ವೀಟ್ ಆಗುತ್ತಲೇ ಇವೆ

ಹಿಂದೂಗಳ ಪವಿತ್ರ ನಗರಿ ವಾರಣಾಸಿಯಲ್ಲಿ

ಹಿಂದೂಗಳ ಪವಿತ್ರ ನಗರಿ ವಾರಣಾಸಿಯಲ್ಲಿ

ಹಿಂದೂಗಳ ಪವಿತ್ರ ನಗರಿ ವಾರಣಾಸಿ ಜನತೆಗೆ ನರೇಂದ್ರ ಮೋದಿ ನಮನ

ಮೋದಿ ಜತೆಯಲ್ಲೇ ಸಾಗಿದ ಅಮಿತ್ ಶಾ

ಮೋದಿ ಜತೆಯಲ್ಲೇ ಸಾಗಿದ ಅಮಿತ್ ಶಾ

ಇತ್ತೀಚೆಗೆ ದ್ವೇಷ ಭಾಷಣ ಮಾಡಿ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದ ಮೋದಿ ಆಪ್ತ ಅಮಿತ್ ಶಾ ಅವರು ದಿನಪೂರ್ತಿ ಮೋದಿ ಜತೆಯಲ್ಲೇ ಸಾಗಿದರು. ವಾರಣಾಸಿಯಲ್ಲಿ ಮೋದಿ ಅಲೆ ಏಳುವಂತೆ ಮಾಡುವಲ್ಲಿ ಅಮಿತ್ ಪಾತ್ರ ಹಿರಿದಾಗಿದೆ.

ಮದನ್ ಮೋಹನ್ ಮಾಳವೀಯ ಪುತ್ಥಳಿ

ಮದನ್ ಮೋಹನ್ ಮಾಳವೀಯ ಪುತ್ಥಳಿ

ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಪುತ್ಥಳಿಗೆ ಮೋದಿಯವರು ಪುಷ್ಪಗುಚ್ಛ ಸಮರ್ಪಿಸಿದರು.

ಕಾಶಿ ಹಿಂದೂ ವಿಶ್ವವಿದ್ಯಾಲಯದ ಬಳಿ

ಕಾಶಿ ಹಿಂದೂ ವಿಶ್ವವಿದ್ಯಾಲಯದ ಬಳಿ

ಕಾಶಿ ಹಿಂದೂ ವಿಶ್ವವಿದ್ಯಾಲಯದ ಬಳಿ ನಿಂತ ಮೋದಿಯವರ ರೋಡ್ ಶೋ

English summary
Taking oath of god, Narendra Modi filed his nomination from the holy city Varanasi today(Apr.24). He is contesting against Congress candidate Ajay Rai and AAP leader Arvind Kejriwal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X