ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಚುನಾವಣಾ ಪ್ರಣಾಳಿಕೆ ಮುಖ್ಯಾಂಶಗಳು

By Mahesh
|
Google Oneindia Kannada News

ನವದೆಹಲಿ, ಏ.7: ಭಾರತೀಯ ಜನತಾ ಪಕ್ಷ ಕೊನೆಗೂ ತನ್ನ ಚುನಾವಣಾ ಪ್ರಣಾಳಿಕೆಯನ್ನು ಸೋಮವಾರ ಪ್ರಕಟ ಮಾಡಿದೆ. 'ಏಕ್ ಭಾರತ್, ಶ್ರೇಷ್ಠ ಭಾರತ್'' ಎಂಬ ಘೋಷವಾಕ್ಯದೊಂದಿಗೆ ಬಿಜೆಪಿ ಹತ್ತು ಹಲವು ಭರವಸೆಗಳನ್ನು ಮತದಾರರ ಮುಂದಿಟ್ಟಿದೆ.

ಲೋಕಸಭೆ ಚುನಾವಣೆಗೆ ಸೋಮವಾರದಿಂದ ಮತದಾನ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಸದ್ಯಕ್ಕೆ ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ, ಮೊದಲ ಹಂತದ ಮತದಾನ ನಡೆಯುತ್ತಿರುವ ಅಸ್ಸಾಂ ಹಾಗೂ ತ್ರಿಪುರಾ ರಾಜ್ಯಗಳಲ್ಲಿ ಪ್ರಣಾಳಿಕೆಯ ಅಂಶಗಳನ್ನು ಪ್ರಸಾರ ಮಾಡಬಾರದು ಎಂಬ ಚುನಾವಣಾ ಆಯೋಗ ಷರತ್ತಿನೊಂದಿಗೆ ಬಿಜೆಪಿ ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. [ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ]

BJP releases manifesto, To tackle policy paralysis, corruption

ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು, ಉತ್ತಮ ಆಡಳಿತ, ದೇಶದ ಅಭಿವೃದ್ಧಿ ನಮ್ಮ ಗುರಿ.ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಸಿದ್ಧಪಡಿಸಲಾಗಿದ್ದು, ದೇಶದ ಭವಿಷ್ಯ ಪ್ರಣಾಳಿಕೆಯಲ್ಲಿ ಬಿಂಬಿತವಾಗಿದೆ ಎಂದು ಹೇಳಿದ್ದಾರೆ
ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಶಿ, ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ರಾಜ್ಯಸಭೆ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಸೇರಿದಂತೆ ಹಲವು ನಾಯಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. [ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಮುಖ್ಯಾಂಶ]

ಬಿಜೆಪಿ ಪ್ರಣಾಳಿಕೆಯ ಮುಖ್ಯಾಂಶಗಳು:
* ಕಾಶ್ಮೀರದಲ್ಲಿರುವ ಪಂಡಿತರಿಗೆ ಸೂಕ್ತವಾದ ಭದ್ರತೆ, ನೆಲೆ ಒದಗಿಸುವುದು
* ಕಪ್ಪು ಹಣ ವಾಪಸ್ ತರಲು ಟಾಸ್ಕ್ ಪೋರ್ಸ್ ರಚನೆ
* ಸಂವಿಧಾನದ ಅಡಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ
* ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು, ಪ್ರತಿ ರಾಜ್ಯದಲ್ಲಿ ಮಹಿಳೆಯರಿಗಾಗಿ ವಿಶೇಷ ಪೊಲೀಸ್ ಪಡೆ ರಚನೆ
* ಪ್ರತಿ ಗ್ರಾಮದಲ್ಲೂ ಕುಡಿಯುವ ನೀರು ಒದಗಿಸಲಾಗುವುದು.
* ಮಲ ಹೊರುವ ಪದ್ಧತಿ ಸಂಪೂರ್ಣ ನಿರ್ಮೂಲನೆ.
* ದೇಶದಲ್ಲಿ ಹೊಸದಾಗಿ ನೂರು ನಗರಗಳ ನಿರ್ಮಾಣ.
* ಮದರಾಸಗಳ ಆಧುನೀಕರಣ, ಗಳಲ್ಲಿ ಗಣಿತ ಹಾಗೂ ವಿಜ್ಞಾನ ಪಾಠಕ್ಕೆ ಒತ್ತು,
* ಪ್ರತಿ ರಾಜ್ಯದಲ್ಲೂ AIIMS ಸ್ಥಾಪನೆ, ಹೊಸ ಆರೋಗ್ಯ ನೀತಿ
* ಸಾಗರ ಮಾಲ ಯೋಜನೆ ಅಡಿಯಲ್ಲಿ ಕರಾವಳಿ ಬಂದರುಗಳ ಜಾಲ ಸ್ಥಾಪನೆ.
* ತೆರಿಗೆ ಪದ್ಧತಿ ಸುಧಾರಣೆ, ತೆರಿಗೆ ಭಯೋತ್ಪಾದನೆ ನಿರ್ಮೂಲನೆ
* ಅಲ್ಪಸಂಖ್ಯಾತರಿಗೆ ಶಿಕ್ಷಣ ಹಾಗೂ ಕೈಗಾರಿಕೆಗಳಲ್ಲಿ ವಿಶೇಷ ಅವಕಾಶ.
* ಮಲ್ಟಿ ಬ್ರ್ಯಾಂಡ್ ರೀಟೈಲ್ ನಲ್ಲಿ ವಿದೇಶಿ ನೇರ ಬಂಡವಾಳ(ಎಫ್ ಡಿಐ) ಹೂಡಿಕೆಗೆ ಅವಕಾಶ ನೀಡುವುದಿಲ್ಲ.
* ಕೈಗಾರಿಕೆ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು

ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆ ಸಂಪೂರ್ಣ ವಿವರ ಕೆಳಗಿದೆ :


English summary
The Bharatiya Janata Party released its manifesto for the Lok Sabha elections in an event in New Delhi which was attended by top leaders like Rajnath Singh, Narendra Modi, LK Advani, Murli Manohar Joshi and Sushma Swaraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X