ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UPA ಸರಕಾರದ ವಿರುದ್ಧ BJP ಚಾರ್ಜ್ ಶೀಟ್ ಬಿಡುಗಡೆ

By Srinath
|
Google Oneindia Kannada News

ನವದೆಹಲಿ, ಏ.4: ಈ ಬಾರಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವ ಬಿಜೆಪಿ ಪಕ್ಷವು ಈಗಿನ ಯುಪಿಎ-2 ವಿರುದ್ಧ ಆರೋಪಪಟ್ಟಿಯನ್ನು ಬಿಡುಗಡೆ ಮಾಡಿದೆ. ಸರಕಾರದ ವೈಫಲ್ಯಗಳನ್ನು ಒಂದೊಂದಾಗಿ ಪಟ್ಟೀಕರಿಸಿರುವ ಬಿಜೆಪಿ, ಯುಪಿಎ ಆಡಳಿತವನ್ನು 'ಅತ್ಯಂತ ಭ್ರಷ್ಟ ಸರಕಾರ' ಎಂದು ಸ್ಮರಿಸುವುದಾಗಿ ಬಣ್ಣಿಸಿದೆ.

ಬಿಜೆಪಿ ವಕ್ತಾರ ರವಿಶಂಕರ ಪ್ರಸಾದ್ ಅವರು chargesheetನಲ್ಲಿರುವ ಒಂದೊಂದೇ chapter ಅನ್ನು ಮಾಧ್ಯಮಗಳ ಮುಂದೆ ಶುಕ್ರವಾರ ಬಿಡುಗಡೆ ಮಾಡಿದರು. ಪಕ್ಷದ ಇತರೆ ವಕ್ತಾರರಾದ ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ನಿರ್ಮಲಾ ಸೀತಾರಾಮನ್ ಅವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರುಗಳು ಯಾವುದೇ ಉತ್ತರದಾಯಿತ್ವವಿಲ್ಲದೆ ಅಧಿಕಾರ ಅನುಭವಿಸಿದರು, ಮನಮೋಹನ್ ಸಿಂಗ್ ಅವರು ಆ ಮಂಡಳಿಯ ಸಿಇಒ ಆಗಿ ಕಾರ್ಯನಿರ್ವಹಿಸಿದರು ಅಷ್ಟೇ ಎಂದು ರವಿಶಂಕರ ಪ್ರಸಾದ್ ಹೇಳಿದರು.

bjp-releases-chapter-wise-chargesheet-on-congress-led-upa-misrule
chargesheetನ ಮೊದಲ ಚಾಪ್ಟರಿನಲ್ಲಿ 'ಪ್ರಧಾನಿ ಕಚೇರಿಯ ಘನತೆ ಮತ್ತು ಐಕ್ಯತೆಯನ್ನು ಹರಾಜಿಗಿಡಲಾಗಿತ್ತು. ಒಳ ಒಪ್ಪಂದಗಳು ನಡೆದಿದ್ದವು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಉದ್ದೇಶಪೂರ್ವಕವಾಗಿ ಪ್ರಧಾನಿ ಕಚೇರಿಯ ಮೌಲ್ಯವನ್ನು ಮಣ್ಣುಪಾಲು ಮಾಡಿದರು ಎಂದು ಬಣ್ಣಿಸಲಾಗಿದೆ.

chargesheetನ ಎರಡನೆಯ ಚಾಪ್ಟರಿನಲ್ಲಿ ಭಾರತದ ಅರ್ಥವ್ಯವಸ್ಥೆಯನ್ನು ಹಾಳು ಮಾಡಿರುವ ಬಗ್ಗೆ ವಿವರವಾಗಿ ಹೇಳಲಾಗಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಸಮಾನವಾಗಿ ಇದಕ್ಕೆ ಕಾರಣಕರ್ತರು. ಪ್ರಧಾನಿ ಜತೆಗೂಡಿ ದೇಶದ ಆರ್ಥಿಕತೆಯನ್ನು ರೋಗಿಷ್ಟಗೊಳಿಸಿದರು. ನಿರುದ್ಯೋಗವನ್ನು ಹೆಚ್ಚಳ ಮಾಡಿದ ಶ್ರೇಯಸ್ಸು ಚಿದಂಬರಂ ಸಲ್ಲುತ್ತದೆ ಎಂದು ತಿಳಿಸಿದ್ದಾರೆ.

chargesheetನ ಮೂರನೆಯ ಚಾಪ್ಟರಿನಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ಹಗರಣ ಮತ್ತು ಭ್ರಷ್ಟಾಚಾರಗಳಿಗೆ ನಿಜಕ್ಕೂ ಕೊನೆ ಮೊದಲು ಇರಲಿಲ್ಲ. 10,000 ಕೋಟಿ ರೂ. ಗಿಂತ ಹೆಚ್ಚು ಮೌಲ್ಯದ ಮೇಜರ್ ಹಗರಣಗಳನ್ನು ಮಾತ್ರ ಪಟ್ಟೀಕರಿಸಬೇಕು ಎಂದು ಅಂದುಕೊಂಡೆವು. ಆದರೆ ಅವುಗಳ ಸಂಖ್ಯೆಯೂ ಅಪಾರವಾಗಿದೆ. ಕಾಂಗ್ರೆಸ್ ಪಕ್ಷವು ಗಂಭೀರವಾಗಿ ಅವುಗಳನ್ನು ತನಿಖೆಗೊಳಪಡಿಸುವ ಬಗ್ಗೆ ಆಲೋಚಿಸಲಿಲ್ಲ. ಪ್ರತಿಪಕ್ಷ, ಕೋರ್ಟ್, ಮಾಧ್ಯಮಗಳು ಇಲ್ಲದಿದ್ದರೆ ಅವುಗಳನ್ನು ತನಿಖೆಗೊಳಪಡಿಸುವ ಆಲೋಚನೆಯನ್ನೇ ಮಾಡುತ್ತಿರಲಿಲ್ಲ ಎಂದು ದಾಖಲಿಸಲಾಗಿದೆ.

chargesheetನ ನಾಲ್ಕನೆಯ ಚಾಪ್ಟರಿನಲ್ಲಿ ರಾಷ್ಟ್ರೀಯ ಭದ್ರತೆಗೆ ಗಂಭೀರವಾದ ಸವಾಲು/ ಅಪಾಯ ಎದುರಾಗಿದ್ದನ್ನು ಎತ್ತಿ ತೋರಿಸಲಾಗಿದೆ. ಕೇವಲ ಕಳೆದ 2 ವರ್ಷಗಳಲ್ಲಿ ಚೀನಾದಿಂದ 500 ಗಡಿ ಉಲ್ಲಂಘಟನೆ ಪ್ರಸಂಗಗಳು ನಡೆದವು. ವೋಟ್ ಬ್ಯಾಂಕ್ ರಾಜಕೀಯ ಹಿತಾಸಕ್ತಿ ಕಾಯ್ದುಕೊಳ್ಳಲು ಭಯೋತ್ಪಾದನೆ ಬಗ್ಗೆ ಕಠಿಣ ಕ್ರ ಕೈಗೊಳ್ಳಲಿಲ್ಲ. ಭಯೋತ್ಪಾದನೆ ಮಾತುಕತೆಯನ್ನು (ಪಾಕಿಸ್ತಾನದ ಜತೆ) ನಿಲ್ಲಿಸಿದ್ದು ಯುಪಿಎ ಆಡಳಿತದ ದೊಡ್ಡ ವೈಫಲ್ಯ ಎಂದು ವಿವರಿಸಲಾಗಿದೆ.

chargesheetನ ಐದನೆಯ ಚಾಪ್ಟರಿನಲ್ಲಿ ವಿದೇಶ ನೀತಿ ವೈಫಲ್ಯಗಳನ್ನು ಎತ್ತಿಹಿಡಿಯಲಾಗಿದೆ.

chargesheetನ ಆರನೆಯ ಚಾಪ್ಟರಿನಲ್ಲಿ ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿಯ ಮಾತೇ ಇಲ್ಲವಾಗಿದೆ. ಗಮನಾರ್ಹವೆಂದರೆ ಕಳೆದ 24 ವರ್ಷಗಳಿಂದ ಈ ಭಾಗವನ್ನು ಪ್ರತಿನಿಧಿಸುವ ವ್ಯಕ್ತಿ ದೇಶದ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಈಶಾನ್ಯ ಭಾಗದಲ್ಲಿ ಒಂದೇ ಒಂದು ಬೃಹತ್ ಉದ್ಯಮವನ್ನು ಸ್ಥಾಪಿಸಲಾಗಿಲ್ಲ. ಈ ನಿಟ್ಟನಲ್ಲಿ ವಾಜಪೇಯಿ ಅವರು ಕೈಗೆತ್ತಿಕೊಂಡಿದ್ದ ಯೋಜನೆಯನ್ನು ಅಲ್ಲಿಗೇ ಬಿಡಲಾಗಿದೆ. ಅಂದಹಾಗೆ ಈ ಭಾಗದಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿರುವ ಉದ್ಯಮವೆಂದರೆ ಅಕ್ರಮ ವಲಸೆ ಎಂದು ಬಿಜೆಪಿ ವಕ್ತಾರ ರವಿಶಂಕರ ಪ್ರಸಾದ್ ಅವರು ಆರೋಪಿಸಿದರು.

ಒಟ್ಟಾರೆಯಾಗಿ UPA ಎಲ್ಲ ರಂಗಗಳಲ್ಲೂ ವೈಫಲಗಳ ಮೇಲೆ ವೈಫಲ್ಯಗಳನ್ನು ಅನುಭವಿಸಿದೆ. UPA ಆಡಳಿತವೆಂದರೆ ನೋವು, ಹತಾಶೆ, ಅಭದ್ರತೆ, ಅಶಾಂತಿಯದ್ದೇ ಜಪವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X