ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಶಾ ಆಯ್ಕೆ

By Mahesh
|
Google Oneindia Kannada News

ನವದೆಹಲಿ, ಜು.9: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಅಮಿತ್ ಶಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಮಾಜಿ ಅಧ್ಯಕ್ಷ ಹಾಲಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಘೋಷಿಸಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಅಮಿತ್ ಶಾ ಅವರನ್ನು ಮುಂದಿನ ಅಧ್ಯಕ್ಷರಾಗಲು ಒಕ್ಕೊರಲ ಬೆಂಬಲ ವ್ಯಕ್ತವಾಗಿದೆ. ಲೋಕಸಭೆ ಚುನಾವಣೆ 2014ರಲ್ಲಿ ಉತ್ತರಪ್ರದೇಶದ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಅಮಿತ್ ಶಾ ಅವರು ಬಿಜೆಪಿ ಜಯಭೇರಿ ಬಾರಿಸಲು ಕಾರಣರಾಗಿದ್ದರು.

ರೈಲ್ವೆ ಮತ್ತು ವಿತ್ತ ಬಜೆಟ್ ಇರುವುದರಿಂದ ಜುಲೈ ಎರಡನೇ ವಾರದಲ್ಲಿ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಲು ಬಿಜೆಪಿ ನಿರ್ಧರಿಸಿತ್ತು. ಜು.11ರಂದು ಪ್ರಧಾನಿ ಮೋದಿ ಅವರು BRICS ಸಭೆಯಲ್ಲಿ ಪಾಲ್ಗೊಳ್ಳಲು ಬ್ರೆಜಿಲ್ ಗೆ ತೆರಳುವುದರಿಂದ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದ ಆಯ್ಕೆ ಘೋಷಣೆಯನ್ನು ಮಂಗಳವಾರವೇ ಮಾಡಲಾಗಿದೆ.

Amit Shah will be new BJP president, declares Rajnath Singh

ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಲೆಕ್ಕಾಚಾರದಂತೆ ರಾಷ್ಟ್ರಾಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್ ಅವರು ಮೋದಿ ಸಂಪುಟ ಸೇರಿ ಗೃಹ ಸಚಿವ ಸ್ಥಾನಕ್ಕೇರುತ್ತಿದ್ದಂತೆ ಪಕ್ಷದ ರಾಜ್ಯಾಧ್ಯಕ್ಷ ತೊರೆಯುವುದು ಖಚಿತವಾಗಿತ್ತು. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಿಮಾಚಲ ಪ್ರದೇಶ ಮೂಲದ, ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ ಪಿ ನಡ್ಡಾ ಅವರ ಹೆಸರು ಕೇಳಿ ಬಂದಿತ್ತು.

ಆದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಲವು ಅಮಿತ್ ಶಾ ಕಡೆಗಿತ್ತು. ಸಂಸದೀಯ ಮಂಡಳಿ ಸಭೆಯಲ್ಲಿ ಎಲ್ ಕೆ ಅಡ್ವಾಣಿ, ಎಂಎಂ ಜೋಶಿ, ಸುಷ್ಮಾ ಸ್ವರಾಜ್ ಸೇರಿದಂತೆ ಎಲ್ಲಾ ಪ್ರಮುಖ ನಾಯಕರು ಪಕ್ಷದ ಇನ್ನಿತರ ಸದಸ್ಯರ ಒಕ್ಕೊರಲ ನಿರ್ಣಯಕ್ಕೆ ತಲೆ ಬಾಗಬೇಕಾಗಿದೆ.ಅಮಿತ್ ಶಾ ಅವರ ಮುಂದೆ ಜಾರ್ಖಂಡ್, ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆ ಮುಂದಿನ ಸವಾಲಾಗಿದೆ.

ಪ್ಲಾಸ್ಟಿಕ್, ಪ್ರಿಂಟಿಂಗ್ ವ್ಯಾಪಾರಿಯಾಗಿದ್ದ ಅಮಿತ್ ಶಾ ಅವರು 80ರ ದಶಕದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಅವರ ಆಪ್ತರಾಗಿ ರಾಜಕೀಯವಾಗಿ ಬೆಳೆದರು. ಗುಜರಾತಿನ ಗೃಹ ಸಚಿವರಾಗಿದ್ದರು. ಹಾಲಿ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಅಮಿತ್ ಶಾ ಅವರು ವಡೋದರಾ ಕ್ಷೇತ್ರದಿಂಡ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆ ಕಂಡು ಬಂದಿದೆ.

English summary
Prime Minister Narendra Modi's close aide and Bharatiya Janata Party (@BJP4India) general secretary Amit Shah will be the next party president, it was announced on Wednesday, by the out going President Rajnath Singh @BJPRajnathSingh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X