ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಣಾಸಿ: ಮೋದಿ ವಿರುದ್ಧ 44 ಮಂದಿಯಷ್ಟೇ ಸ್ಪರ್ಧೆಗೆ

By Srinath
|
Google Oneindia Kannada News

ನವದೆಹಲಿ, ಏ.26:ವಾರಣಾಸಿಯಲ್ಲಿ ಲೋಕಸಭಾ ಚುನಾವಣೆಗೆ ದಾಖಲೆಯ ಪ್ರಮಾಣದಲ್ಲಿ 78 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರಾದರೂ ಚುನಾವಣಾ ಆಯೋಗವು 34 ಮಂದಿಯ ನಾಮಪತ್ರಗಳನ್ನು ಶುಕ್ರವಾರ ತಿರಸ್ಕರಿಸಿದೆ. ಹಾಗಾಗಿ ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರೀವಾಲ್ ಮತ್ತು ಕಾಂಗ್ರೆಸ್ಸಿನ ರಾಯ್ ಅವರ ನಡುವಣ ಮುಖಾಮುಖಿಗೆ 41 ಮಂದಿಯಷ್ಟೇ ಸಾಥ್ ನೀಡಲಿದ್ದಾರೆ.

16 ಲಕ್ಷ ಮತದಾರರು:
ಮೇ 12ರಂದು ಇಲ್ಲಿ ಮತದಾನ ನಡೆಯಲಿದೆ. ನಾಮಪತ್ರ ವಾಪಸಾತಿಗೆ ಏಪ್ರಿಲ್ 28 ಕೊನೆಯ ದಿನ. ಕ್ಷೇತ್ರದಲ್ಲಿ ಒಟ್ಟು 16.09 ಲಕ್ಷ ಮಂದಿ ಮತದಾರರು ಇದ್ದಾರೆ. 2009ರ ಚುನಾವಣೆಯಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದರು.

77-candidates-varanasi-fray-ballot-paper-voting-results-could-delayed
ಹಿಂದಿನ ಸುದ್ದಿ: ದೇಶದ ಅತ್ಯಂತ ಪುರಾತನ ನಗರವಾದ ವಾರಣಾಸಿಯಲ್ಲಿ ಲೋಕಸಭಾ ಚುನಾವಣೆಗೆ 77 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವುದರಿಂದ ಆಯೋಗವು ಅನಿವಾರ್ಯವಾಗಿ ಪುರಾತನ ಮತದಾನ ಪ್ರಕ್ರಿಯೆ ಅಂದರೆ ಬ್ಯಾಲಟ್ ಪೇಪರ್ ತಂತ್ರಕ್ಕೆ ಶರಣಾಗಬೇಕಿದೆ. ಹಾಗಾಗಿ ಕೌಂಟಿಂಗ್ ವಿಳಂಬವಾಗಿ, ಫಲಿತಾಂಶ ವಿಳಂಬವಾಗಲಿದೆ.

ಬಿಜೆಪಿ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರೀವಾಲ್ ಸ್ಪರ್ಧೆಯಿಂದಾಗಿ ಗಂಗಾ ತಟದಲ್ಲಿರುವ ಪುರಾತನ ವಾರಣಾಸಿ ಲೋಕಸಭಾ ಕ್ಷೇತ್ರವು ಭೋರ್ಗರೆಯುತ್ತಿದೆ. ಈ ಇಬ್ಬರು ನಾಯಕರ ನಡುವಣ ಕದನ ಕುತೂಹಲದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು 77 ಮಂದಿ ಉಮೇದುವಾರಿಕೆ ಸಲ್ಲಿಸಿ ಕೃತಾರ್ಥರಾಗಿದ್ದಾರೆ!

ರಾಹುಲ್ ಗಾಂಧಿ ಸ್ಪರ್ಧಿಸಿರುವ ಅಮೇಠಿಯಲ್ಲಿ 34 ಮಂದಿ ಕಣದಲ್ಲಿದ್ದು, ಇದುವರೆಗೆ ಗರಿಷ್ಠ ಅಭ್ಯರ್ಥಿಗಳಿರುವ ಮತ ಕ್ಷೇತ್ರವಾಗಿದೆ.

ಆದರೆ ಒಂದೇ ಕ್ಷೇತ್ರದಲ್ಲಿ ಅತ್ಯಧಿಕ 77 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವುದು ಚುನಾವಣಾ ಆಯೋಗಕ್ಕೆ ತಲೆನೋವು ತಂದಿಟ್ಟಿದೆ. ನಾಮಪತ್ರ ಸಲ್ಲಿಸಲು ನಿನ್ನೆ ಎಪ್ರಿಲ್‌ 24 ಕೊನೆಯ ದಿನವಾಗಿತ್ತು, ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದ ದಿನದಂದೆ ಸುಮಾರು 30 ಮಂದಿ ಪಕ್ಷೇತರ ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಸಿದ್ದಾರೆ. ಅದಕ್ಕೂ ಮುನ್ನ ಕೇಜ್ರೀವಾಲ್ ಸೇರಿದಂತೆ 47 ಮಂದಿ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಕ್ಷೇತ್ರದಲ್ಲಿ ಒಟ್ಟು 77 ಮಂದಿ ಸಮರ ಸೇನಾನಿಗಳಾಗಿದ್ದಾರೆ.

ಈ ಮಧ್ಯೆ, ನಾಮಪತ್ರಗಳ ಪರಿಶೀಲನೆ ಇಂದು ಶುಕ್ರವಾರ ನಡೆಯುತ್ತಿದೆ. ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವ ಹುಮ್ಮಸ್ಸಿನಿಂದ ಭಾರೀ ಸಂಖ್ಯೆಯಲ್ಲಿ ಉತ್ಸಾಹಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದಿಬಂದಿದೆ. ಇವರ ಪೈಕಿ ಅರ್ಧದಷ್ಟು ಮಂದಿ ಅಂದರೆ 35 ಮಂದಿ ಕಣದಲ್ಲಿದ್ದರೂ ಚುನಾವಣಾ ಆಯೋಗ, ಪ್ರಮುಖ ಅಭ್ಯರ್ಥಿಗಳಿಗೆ ಹಾಗೂ ಮತದಾರರಿಗೂ ಸಮಸ್ಯೆಯಾಗಿ ಕಾಡಲಿದ್ದಾರೆ.

ಆಯೋಗದ ದೃಷ್ಟಿಯಿಂದ ಹೇಳುವುದಾದರೆ ಮತದಾನಕ್ಕೆ ಬಳಸುವ Electronic Voting Machine (EVM)ನಲ್ಲಿ ಮತದಾನ ನಡೆಸದೆ ಮತಪತ್ರ ಬಳಸುವುದು ಅನಿವಾರ್ಯವಾಗಲಿದೆ. ಸಾಮಾನ್ಯವಾಗಿ ಈಗಿನ NOTA ಬಟನ್ ಸೇರಿದಂತೆ 64 ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ವೀರಪ್ಪನ್ ಸಂಬಂಧಿ ಎಂದು ಹೇಳಿಕೊಳ್ಳುವ ಪಿಎನ್ ಶ್ರೀರಾಮಚಂದ್ರನ್ ಸಹ ಕಣದಲ್ಲಿದ್ದಾರೆ. ಜತೆಗೆ ನರೇಂದ್ರ ಮೋದಿಯನ್ನು ಹೊರತುಪಡಿಸಿ ಮೂವರು 'ನರೇಂದ್ರಗಳು' ಸಹ ಇದ್ದಾರೆ.

ಮರುಕಳಿಸಲಿದೆ ballot box - ballot paper ಕಾಟ
ಗಮನಾರ್ಹವೆಂದರೆ ಇಷ್ಟೊಂದು ಅಭ್ಯರ್ಥಿಗಳು ಕಣದಲ್ಲಿದ್ದು, ಮತ ಪತ್ರ ಬಳಸುವುದರಿಂದ ಮತ ಎಣಿಕೆಗೆ ತ್ರಾಸವಾಗಲಿದ್ದು, ಫಲಿತಾಂಶವೂ ವಿಳಂಬವಾಗಲಿದೆ. ಮೊದಲೇ ಮೋದಿ ಸ್ಪರ್ಧೆಯ ಕ್ಷೇತ್ರದಲ್ಲಿನ ಫಲಿತಾಂಶಕ್ಕಾಗಿ ಇಡೀ ದೇಶ ತುದಿಗಾಲಲ್ಲಿ ನಿಂತಿರುವಾಗ ಫಲಿತಾಂಶ ವಿಳಂಬವಾಗುವುದು ಮತ್ತಷ್ಟು ಸೋಜಿಗವಾಗಲಿದೆ. ಜತೆಗೆ ತಕ್ಷಣಕ್ಕೆ 30ಕ್ಕೂ ಹೆಚ್ಚು ಪಕ್ಷೇತರರಿಗೆ ಚಿಹ್ನೆ ಹಂಚಿಕೆ ಮಾಡುವುದು ಸಹ ಆಯೋಗಕ್ಕೆ ಸಮಸ್ಯೆಯಾಗಿ ಕಾಡಲಿದೆ. ಏಪ್ರಿಲ್ 28ರಂದು ನಾಮಪತ್ರ ವಾಪಸ್ ದಿನವಾಗಿದ್ದು, ಅಂದು ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ.

English summary
Lok Sabha Polls 2014- 77 candidates in Varanasi constituency ballot paper voting results could be delayed. Varanasi is set to become the mother of all battles in this Lok Sabha polls not only because Narendra Modi is locked in a contest with AAP’s Arvind Kejriwal and Congress’ Ajay Rai, but also for having a large number (77) of parties and independents in the fray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X